ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್‌ಗೆ ಹೃದಯಾಘಾತ, ದೆಹಲಿ ಏಮ್ಸ್‌ಗೆ ದಾಖಲು!
ತಮ್ಮ ಹಾಸ್ಯ ಶೋಗಳ ಮೂಲಕವೇ ಜನಪ್ರಿಯರಾಗಿದ್ದ ಹೆಸರಾಂತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್‌ಗೆ ತೀವ್ರ ಹೃದಯಾಘಾತವಾಗಿದೆ. ಆರೋಗ್ಯದಲ್ಲಿ ದೊಡ್ಡ ಮಟ್ಟದಲ್ಲಿ ಏರುಪೇರು ಕಂಡ ಹಿನ್ನಲೆಯಲ್ಲಿ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನವದೆಹಲಿ (ಆ.10): ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ಬಗ್ಗೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ರಾಜು ಶ್ರೀವಾಸ್ತವ್ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಹಠಾತ್ ಆಗಿ ಆರೋಗ್ಯ ಹದಗೆಟ್ಟಿದ್ದರಿಂದ ರಾಜು ಶ್ರೀವಾಸ್ತವ್ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸ್ಯನಟನಿಗೆ ಹೃದಯಾಘಾತವಾಗಿದೆ ಎಂದು ಅವರ ಸಹೋದರ ಮತ್ತು ಪಿಆರ್‌ಒ ಕೂಡ ಖಚಿತಪಡಿಸಿದ್ದಾರೆ. ರಾಜು ಶ್ರೀವಾಸ್ತವ್ ಹೋಟೆಲ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಎದೆಯಲ್ಲಿ ನೋವು ಕಾಣಿಸಿಕೊಂಡು ಕೆಳಗೆ ಬಿದ್ದಿದ್ದಾರೆ. ಇದಾದ ನಂತರ ರಾಜು ಶ್ರೀವಾಸ್ತವ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಕ್ಷದ ಕೆಲವು ದೊಡ್ಡ ನಾಯಕರನ್ನು ಭೇಟಿ ಮಾಡಲು ಹಾಸ್ಯನಟ ದೆಹಲಿಯಲ್ಲಿ ತಂಗಿದ್ದರು ಎಂದು ರಾಜು ಅವರ ಪಿಆರ್‌ಒ ಅಜಿತ್ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಜಿಮ್‌ಗೆ ಹೋಗಿದ್ದ ರಾಜು ಶ್ರೀವಾಸ್ತವ್ ಅವರು ಟ್ರೆಡ್ ಮಿಲ್‌ನಲ್ಲಿ ನಡೆಯುವ ವೇಳೆ ಹೃದಯಾಘಾತವಾಯಿತು. ರಾಜು ಶ್ರೀವಾಸ್ತವ್ ಅವರ ಪಲ್ಸ್ ಸದ್ಯ ಮರಳಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಹಾಸ್ಯನಟನ ಎಲ್ಲಾ ಅಭಿಮಾನಿಗಳು ರಾಜು ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಎಂದು ಅವರ ಸಹೋದರ ಹೇಳಿದ್ದಾರೆ.
ಹಾಸ್ಯನಟನ ಈ ದುಃಖದ ಸುದ್ದಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ರಾಜು ಶ್ರೀವಾಸ್ತವ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ರಾಜು ಶ್ರೀವಾಸ್ತವ್ ಪ್ರಸಿದ್ಧ ಹಾಸ್ಯನಟ ಮಾತ್ರವಲ್ಲದೆ, ಅವರು ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ.
ಜೀವನದಲ್ಲಿ ನಾವು ಸೋತಾಗ ಮತ್ತೆ ಗೆಲ್ಲಬೇಕು ಅಂತ ಹುಮ್ಮಸ್ಸು ತುಂಬೋದು ರವಿಚಂದ್ರನ್: ಧನಂಜಯ್
ರಾಜು ಶ್ರೀವಾಸ್ತವ್ ಅವರ ಜರ್ನಿ ಆರಂಭವಾಗಿದ್ದು ಹೇಗೆ?: ರಾಜು ಶ್ರೀವಾಸ್ತವ್ ಅವರನ್ನು ಹಾಸ್ಯದ ರಾಜ ಎಂದೇ ಉತ್ತರ ಭಾರತದಲ್ಲಿ ಪರಿಗಣಿಸಲಾಗುತ್ತದೆ. ಅವರು ಅನೇಕ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ. ಹಲವು ವರ್ಷಗಳಿಂದ ರಾಜು ಶ್ರೀವಾಸ್ತವ್ ತಮ್ಮ ಹಾಸ್ಯದ ಮೂಲಕ ಜನರಿಗೆ ಕಚಗುಳಿ ಇಡುತ್ತಿದ್ದಾರೆ. ರಾಜುವಿಗೆ ಬಾಲ್ಯದಿಂದಲೂ ಕಾಮಿಡಿಯನ್ ಆಗಬೇಕೆಂಬ ಆಸೆ ಇತ್ತು. ರಾಜು ಅವರು ತಮ್ಮ ವೃತ್ತಿಜೀವನವನ್ನು ಸ್ಟೇಜ್ ಶೋಗಳೊಂದಿಗೆ ಪ್ರಾರಂಭಿಸಿದರು. ಆರಂಭದಲ್ಲಿ, ರಾಜು ಬಾಲಿವುಡ್ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದರು. ಸ್ಟ್ಯಾಂಡ್ ಅಪ್ ಶೋ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಮೂಲಕ ಅವರು ಖ್ಯಾತಿ ಪಡೆದರು. ಈ ಶೋನಲ್ಲಿ ರಾಜು ಎರಡನೇ ರನ್ನರ್ ಅಪ್ ಆಗಿದ್ದರು.
ಸಿನಿಮಾ ಅನ್ನೋದು ಸೆಲೆಬ್ರೇಷನ್, ನಿಜವಾದ ಸೆಲೆಬ್ರೇಷನ್ ರವಿ ಬೋಪಣ್ಣ ಸಿನಿಮಾದಲ್ಲಿದೆ: ಶರಣ್
ಅದರ ಸ್ಪಿನ್-ಆಫ್ ಶೋ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ - ಚಾಂಪಿಯನ್ಸ್' ಅನ್ನು ರಾಜು ಗೆಲ್ಲುವ ಮೂಲಕ ಕಾಮಿಡಿ ಕಿಂಗ್ ಎನಿಸಿಕೊಂಡರು. ಬಿಗ್ ಬಾಸ್ 3, ನಚ್ ಬಲಿಯೇ 6 ರಂತಹ ರಿಯಾಲಿಟಿ ಶೋಗಳಲ್ಲೂ ರಾಜುಸ ಪಾಲ್ಗೊಂಡಿದ್ದರು. ಕಪಿಲ್ ಶರ್ಮ ಅವರ ಕಾಮಿಡಿ ನೈಟ್ಸ್ ವಿತ್ ಕಪಿಲ್ ಶೋನಲ್ಲಿಯೂ ಕಾಣಿಸಿಕೊಂಡಿದ್ದ ರಾಜು ಶ್ರೀವಾಸ್ತವ್ ಅವರು ಹಾಸ್ಯನಟರಾಗಿರುವುದರೊಂದಿಗೆ ರಾಜಕಾರಣಿಯೂ ಆಗಿದ್ದಾರೆ. 2014ರಲ್ಲಿ ಅವರು ಬಿಜೆಪಿಗೆ ಸೇರಿದ್ದರು.
ಹೃದಯಾಘಾತಕ್ಕೂ ಮುನ್ನ ಹಾಸ್ಯದ ಕ್ಲಿಪ್ ಹಂಚಿಕೊಂಡಿದ್ದ ರಾಜು: ರಾಜು ಶ್ರೀವಾಸ್ತವ ಅವರು ಹೃದಯಾಘಾತಕ್ಕೆ ಒಳಗಾಗುವ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಫೋನ್‌ಗಳಲ್ಲಿ ಕಾಲರ್ ಟ್ಯೂನ್ ಮೂಲಕ ಕೋವಿಡ್ 19 ನಲ್ಲಿ ಹರಡುವ ಮಾಹಿತಿಯ ಕುರಿತು ತಮಾಷೆ ಮಾಡಿದ್ದರು. ಕೆಲವು ಹಿರಿಯ ನಟರನ್ನು ಅನುಕರಿಸುವ ಶ್ರೀವಾಸ್ತವ್, ವಿನೋದ್ ಖನ್ನಾ, ಶಶಿ ಕಪೂರ್ ಮತ್ತು ಇತರ ನಟರು ಆ ಮಾಹಿತಿಯನ್ನು ಹೇಗೆ ಹೇಳುತ್ತಿದ್ದರು ಎಂಬುದನ್ನು ವಿಡಿಯೋದಲ್ಲಿ ತೋರಿದಿದ್ದಾರೆ.