ಬಂಡೆ ಮೇಲೆ ಜೊತೆಯಾಗಿ ಫೋಸ್ ಕೊಟ್ಟ ಬ್ಲ್ಯಾಕ್ ಪ್ಯಾಂಥರ್, ಚಿರತೆ: ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಇಲ್ಲೊಂದು ಕಡೆ ಸಾಮಾನ್ಯ ಚಿರತೆ ಹಾಗೂ ಬ್ಲಾಕ್ ಪಾಂಥೇರ್ ಬಂಡೆಯೊಂದರ ಮೇಲೆ ಜೊತೆಯಾಗಿ ಕುಳಿತಿರುವ ದೃಶ್ಯವೊಂದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೈ ಮೇಲೆ ಚುಕ್ಕಿಗಳಿರುವ ಚಿರತೆಗಳನ್ನು ನೀವು ಎಲ್ಲಾ ಕಡೆ ಸಾಮಾನ್ಯವಾಗಿ ನೋಡಿರುತ್ತೀರಿ. ಇವು ಹೆಚ್ಚಾಗಿ ಎಲ್ಲೆಡೆ ಕಾಣ ಸಿಗುತ್ತವೆ. ಆದರೆ ಕಪ್ಪು ಬಣ್ಣದ ಬ್ಲ್ಯಾಕ್ ಪಾಂಥೇರ್ ಎಲ್ಲೆಡೆ ಕಾಣ ಸಿಗುವುದು ತೀರಾ ಅಪರೂಪ. ಅದರಲ್ಲೂ ಎರಡೂ ಜೊತೆಯಾಗಿ ಕಾಣ ಸಿಗುವುದು ವಿರಳಾತೀವಿರಳ. ಆದರೂ ಇಲ್ಲೊಂದು ಕಡೆ ಸಾಮಾನ್ಯ ಚಿರತೆ ಹಾಗೂ ಬ್ಲಾಕ್ ಪಾಂಥೇರ್ ಬಂಡೆಯೊಂದರ ಮೇಲೆ ಜೊತೆಯಾಗಿ ಕುಳಿತಿರುವ ದೃಶ್ಯವೊಂದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೂಲತಃ ನೇಚರ್ ಇನ್ ಫೋಕಸ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ಫೋಟೋ ಪೋಸ್ಟ್ ಆಗಿದೆ. ಈ ಭಾರತೀಯ ಚಿರತೆ ಹಾಗೂ ಬ್ಲಾಕ್ ಪಾಂಥೇರ್ ಎರಡೂ ಬೇರೆ ಬೇರೆ ತಳಿಯ ಪ್ರಾಣಿಗಳು ಎಂಬ ಕೆಲವರ ವಾದದ ಮಧ್ಯೆ ಒಂದೇ ತಾಯಿಯ ಮೂರು ಮಕ್ಕಳು ಇವರು ಎಂದು ಬರೆದು ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಇವುಗಳು ಬೇರೆ ಬೇರೆ ಪ್ರಾಣಿಗಳಲ್ಲ ಇವು ಒಂದೇ ತಳಿಯ ಪ್ರಾಣಿಗಳು ಎಂಬುದನ್ನು ಹೇಳುವ ಪ್ರಯತ್ನ ಮಾಡಿದೆ ಈ ಪೋಸ್ಟ್.
ಕಾವೇರಿ ವನ್ಯಜೀವಿ ಧಾಮದಲ್ಲಿ ಬಿಳಿ ಕಡವೆ ಪತ್ತೆ: ವನ್ಯಜೀವಿ ತಜ್ಞರಿಗೆ ಆಶ್ಚರ್ಯ
ಈ ಫೋಟೋವನ್ನು ಖ್ಯಾತ ಫೋಟೋಗ್ರಾಫರ್ (Wildlife Photographer) ಕೃಷ್ಣಮೂರ್ತಿ ಎಸ್ (Krishnamurthy S) ಎಂಬುವವರು ತೆಗೆದಿದ್ದು, ಈ ಫೋಟೋ ನೇಚರ್ ಇನ್‌ಫೋಕಸ್ ಫೋಟೋಗ್ರಫಿ ಪ್ರಶಸ್ತಿ 2023 ರಲ್ಲಿ ವನ್ಯಜೀವಿಗಳ ಪ್ರದೇಶ ಹಾಗೂ ಅವಾಸಸ್ಥಾನದಲ್ಲಿ ಪ್ರಾಣಿಗಳು ವಿಭಾಗದಲ್ಲಿ ಫೈನಲ್‌ಗೆ ಬಂದಿತ್ತು. ಈ ಚಿತ್ರವು ಚಿರತೆಗಳು ಮತ್ತು ಕಪ್ಪು ಪ್ಯಾಂಥರ್‌ಗಳು ಎರಡು ಪ್ರತ್ಯೇಕ ಜಾತಿಗಳು ಎಂಬ ಸಾಮಾನ್ಯ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದೆ. ಇದು ಕಪ್ಪು ಪ್ಯಾಂಥರ್ ಎಂಬುದು ಕಪ್ಪು ಬಣ್ಣದೊಂದಿಗೆ ಜನಿಸಿದ ಜಾಗ್ವಾರ್‌ಗಳು ಅಥವಾ ಚಿರತೆಗಳಿಗೆ ನೀಡಲಾದ ಹೆಸರಷ್ಟೇ ಹೊರತು ಇವು ಪ್ರತ್ಯೇಕ ಪ್ರಬೇಧಗಳಲ್ಲ ಎಂಬುದು ಇದರಿಂದ ಸಾಬೀತಾಗಿದೆ.
ಈ ವಿಚಾರವನ್ನು ಐಎಫ್‌ಎಸ್ ಅಧಿಕಾರಿ (IFS Officer) ಪರ್ವಿನ್ ಕಸ್ವಾನ್ (Parveen Kaswan) ಅವರು ಕೂಡ ಖಚಿತಪಡಿಸಿದ್ದು, ಅವುಗಳು ಬೇರೆ ಬೇರೆ ಜಾತಿಯವಲ್ಲ, ಅವೆರಡು ಒಂದೇ ಎಂಬುದನ್ನು ಹೇಳಿದ್ದಾರೆ. ಈ ಫೋಟೋ ಒಂದು ಉತ್ತಮ ಕ್ಲಿಕ್ ಎಂದ ಅವರು, ನಾವು ಇದೇ ರೀತಿಯ ಆದರೆ ಬೆಳೆದಿದ್ದ ಎರಡು ಬೇರೆ ಬೇರೆ ಬಣ್ಣದ ಚಿರತೆಗಳ ಫೋಟೋ ಸೆರೆ ಹಿಡಿದಿದ್ದೆವು. ಅವುಗಳಲ್ಲಿ ಒಂದು ಮೆಲನಿಸ್ಟಿಕ್ ಮತ್ತು ಇನ್ನೊಂದು ಮೆಲನಿಸ್ಟಿಕ್ ಅಲ್ಲದ ಸಾಮಾನ್ಯ ಚಿರತೆಗಳಾಗಿದ್ದವು. ಕ್ಯಾಮೆರಾ ಟ್ರ್ಯಾಪ್ ಮೂಲಕ ಇವುಗಳ ಸೆರೆ ಹಿಡಿಯಲಾಗಿತ್ತು ಎಂದು ಅವರು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಚಿರತೆಯನ್ನು ಡಾ.ಬ್ರೋ ಹೊಗಳ್ತಿದ್ರೆ, ಸಿಟ್ಟಿಗೆದ್ದ ಸಿಂಹ ಅವ್ರ ಮೈಮೇಲೆ ಮೂತ್ರ ಮಾಡೋದಾ?
ದಿ ಕಾನ್ವರ್ಸೇಶನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಎಲ್ಲಾ ಚಿರತೆಗಳಲ್ಲಿ ಸುಮಾರು 11 ಪ್ರತಿಶತದಷ್ಟು ಚಿರತೆಗಳು ಕಪ್ಪಾಗಿರುತ್ತವೆ.. ಅವು ಇತರ ಚಿರತೆಗಳಿಂದ ಬಣ್ಣದಲ್ಲಿ ಮಾತ್ರ ಭಿನ್ನವಾಗಿರುತ್ತವೆ. ಕೆಲವು ಚಿರತೆಗಳಲ್ಲಿ ಹೆಚ್ಚಿನ ಕಪ್ಪು ಬಣ್ಣವು ಮೆಲನಿಸಂ ಎಂದು ಕರೆಯಲ್ಪಡುವ ಆನುವಂಶಿಕ ಸ್ಥಿತಿಯಿಂದ ಉಂಟಾಗುತ್ತದೆ.
ಮಾರ್ಚ್‌ನಲ್ಲಿ, ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಶಾಜ್ ಜಂಗ್ (Shaaz Jung) ಅವರು ತೆಗೆದ ವೀಡಿಯೊವೊಂದರಲ್ಲಿ ಚಿರತೆ ಮತ್ತು ಕಪ್ಪು ಪ್ಯಾಂಥರ್ ಕಾಡಿನಲ್ಲಿ ಪರಸ್ಪರ ಪಕ್ಕದಲ್ಲಿ ಜೊತೆಯಾಗಿ ನಡೆದಾಡುವ ದೃಶ್ಯ ಸೆರೆ ಆಗಿತ್ತು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು, ಇದರಲ್ಲಿ ಕ್ಲಿಯೋ ಎಂಬ ಹೆಸರಿನ ಚಿರತೆ ಮತ್ತು ಸಯಾ ಎಂಬ ಕಪ್ಪು ಪ್ಯಾಂಥರ್ ಕ್ಯಾಮೆರಾವನ್ನು ತೀವ್ರವಾಗಿ ಗುರಾಯಿಸಿದ್ದವು. ಕ್ಲಿಯೋ ಮತ್ತು ಸಯಾ ಇಬ್ಬರೂ ಎತ್ತರ ಮತ್ತು ಗಾತ್ರದಲ್ಲಿ ಒಂದೇ ರೀತಿ ಇದ್ದವು. ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ (Bandipur and Nagarhole) ರಾಷ್ಟ್ರೀಯ ಉದ್ಯಾನವನದಲ್ಲಿ ಈ ವೀಡಿಯೋ ಸೆರೆ ಹಿಡಿಯಲಾಗಿತ್ತು.