Asianet Suvarna News Asianet Suvarna News

ಬೀಚ್‌ನಲ್ಲಿ 2 ಹೆಲಿಕಾಪ್ಟರ್‌ ಮಧ್ಯೆ ಡಿಕ್ಕಿ: 4 ಮಂದಿ ದುರ್ಮರಣ

ಆಸ್ಪ್ರೇಲಿಯಾದ ಬೀಚ್‌ವೊಂದರಲ್ಲಿ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿಯಾಗಿದ್ದು, ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ.

Collision between 2 helicopters on the  gold coast beach In Australias 4 dead akb
Author
First Published Jan 3, 2023, 10:59 AM IST

ಮೆಲ್ಬರ್ನ್‌: ಆಸ್ಪ್ರೇಲಿಯಾದ ಬೀಚ್‌ವೊಂದರಲ್ಲಿ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿಯಾಗಿದ್ದು, ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ. ಒಂದು ಹೆಲಿಕಾಪ್ಟರ್‌ ಟೇಕ್‌ಆಫ್‌ ಹಾಗೂ ಇನ್ನೊಂದು ಹೆಲಿಕಾಪ್ಟರ್‌ ಲ್ಯಾಡಿಂಗ್‌ ಮಾಡುವ ವೇಳೆ ಡಿಕ್ಕಿಯಾಗಿದೆ. ಆಸ್ಪ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ಸಮುದ್ರ ತೀರದಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟ ನಾಲ್ವರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಕರಾಗಿದ್ದು, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಘಟನೆ ಸಂಭವಿಸುವ ವೇಳೆ ಸಮುದ್ರ ತೀರದಲ್ಲಿದ್ದ ಇತರ ಹಲವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಕಾಪ್ಟರ್‌ಗಳು ಸಮುದ್ರ ಸಮೀಪದಲ್ಲಿ ಡಿಕ್ಕಿಯಾಗಿ ನಿಯಂತ್ರಣ ತಪ್ಪಿ ಬಿದ್ದಿವೆ. ಒಂದು ಹೆಲಿಕಾಪ್ಟರ್‌ ಸಂಪೂರ್ಣವಾಗಿ ನಾಶಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೀಡಾದವರಲ್ಲಿ ಇಬ್ಬರು ಇಂಗ್ಲೆಂಡ್ ಪ್ರಜೆಗಳಾಗಿದ್ದಾರೆ. ಉಳಿದ ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಮೃತರ ಕುಟುಂಬವನ್ನು ಅಧಿಕಾರಿಗಳು ಸಂಪರ್ಕಿಸಿ ಅವರಿಗೆ ವಿಚಾರ ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 


Army Helicopter Crash ನಾಪತ್ತೆಯಾಗಿದ್ದ 5ನೇ ಯೋಧನ ಶವ ಪತ್ತೆ!

CDS ಹೆಲಿಕಾಪ್ಟರ್ ದುರಂತಕ್ಕೆ ಒಂದು ವರ್ಷ, ಬಿಪಿನ್ ರಾವತ್ ಸೇರಿ ಅಗಲಿದ ಗಣ್ಯರಿಗೆ ನಮನ!

 

Follow Us:
Download App:
  • android
  • ios