ಉತ್ತರ ಭಾರತಕ್ಕೆ ಶೀತ ಮಾರುತ ಹೊಡೆತ: ಜಮ್ಮು ರಾಜಸ್ಥಾನದಲ್ಲಿ ಮೈನಸ್ ತಾಪಮಾನ
ಉತ್ತರ ಹಾಗೂ ವಾಯುವ್ಯ ಭಾರತದಲ್ಲಿ ಶೀತ ಮಾರುತ ಬೀಸುತ್ತಿದ್ದು, ದೆಹಲಿಯಲ್ಲಿ ತಾಪಮಾನ 1.4 ಡಿ.ಸೆ.ಗೆ ಇಳಿಕೆ ಕಂಡಿದ್ದು ಕೊರೆವ ಚಳಿ ಆರಂಭವಾಗಿದೆ.

ನವದೆಹಲಿ: ಉತ್ತರ ಹಾಗೂ ವಾಯುವ್ಯ ಭಾರತದಲ್ಲಿ ಶೀತ ಮಾರುತ ಬೀಸುತ್ತಿದ್ದು, ದೆಹಲಿಯಲ್ಲಿ ತಾಪಮಾನ 1.4 ಡಿ.ಸೆ.ಗೆ ಇಳಿಕೆ ಕಂಡಿದ್ದು ಕೊರೆವ ಚಳಿ ಆರಂಭವಾಗಿದೆ. ಇದು ಕಳೆದ 2 ವರ್ಷದಲ್ಲೇ (ಜ.1,2021) ಕನಿಷ್ಠ ತಾಪಮಾನವಾಗಿದೆ. ಉತ್ತರ ಭಾರತದ ಅನೇಕ ಕಡೆಗಳಲ್ಲಿ ತಾಪಮಾನ 1 ಡಿ.ಸೆ.ಗೆ ಕುಸಿತ ಕಂಡಿದೆ. ಜ.19ರವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಹಿಮಾಲಯ ಪರ್ವತದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಇದರಿಂದಾಗಿ ವಾಯವ್ಯ ಭಾಗದತ್ತ ಭಾರಿ ಪ್ರಮಾಣದಲ್ಲಿ ಶೀತಗಾಳಿ ಬೀಸುತ್ತಿದೆ. ಇದು ಇಡೀ ಉತ್ತರ ಭಾರತದಾದ್ಯಂತ ತಾಪಮಾನ ಕುಸಿತಕ್ಕೆ ಕಾರಣವಾಗಿದೆ. ರಾಷ್ಟ್ರರಾಜಧಾನಿ ವಲಯಲ್ಲಿ ಕಳೆದ 2 ದಿನಗಳಲ್ಲೇ 6 ಡಿಗ್ರಿಯಷ್ಟುತಾಪಮಾನ ಇಳಿಕೆಯಾಗಿದೆ. ಸಫ್ದರ್‌ಜಂಗ್‌ನಲ್ಲಿ ಕನಿಷ್ಠ ತಾಪಮಾನ ಅತಿ ಕನಿಷ್ಠ 1.6 ಡಿ.ಸೆ., ಉಷ್ಣಾಂಶ ದಾಖಲಾಗಿದೆ. ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲೂ ಸಹ ಉಷ್ಣಾಂಶ ಕುಸಿತಗೊಂಡಿದ್ದು, ಫರೀದ್‌ಕೋಟ್ ಮತ್ತು ಬಠಿಂಡಾದಲ್ಲಿ 0.2 ಡಿ.ಸೆ., ಅಮೃತಸರದಲ್ಲಿ 1.5 ಡಿ.ಸೆ., ಪಠಾಣ್‌ಕೋಟ್‌ನಲ್ಲಿ 4.7 ಡಿ.ಸೆ., ತಾಪಮಾನ ದಾಖಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಉಷ್ಣಾಂಶ ಮೈನಸ್‌ನಲ್ಲೇ ಮುಂದುವರೆದಿದ್ದು, ಶ್ರೀನಗರದಲ್ಲಿ -1.9 ಡಿ.ಸೆ., ಕೊಕೆರ್‌ನಾಗ್‌ನಲ್ಲಿ -6.6 ಡಿ.ಸೆ., ಪಹಲ್ಗಾಂನಲ್ಲಿ -10.2 ಡಿ.ಸೆ., ಗುಲ್ಮಾಗ್‌ರ್‍ನಲ್ಲಿ -10.4 ಡಿ.ಸೆ. ತಾಪಮಾನ ದಾಖಲಾಗಿದೆ. ರಾಜಸ್ಥಾನದ ಸಿಕಾರ್ ಮತ್ತು ಫತೇಪುರ್ ಪ್ರದೇಶಗಳಲ್ಲಿ ಕನಿಷ್ಠ -3.7 ಡಿ.ಸೆ., ಚುರುವಿನಲ್ಲಿ 2.5 ಡಿ.ಸೆ., ಅಲ್ವಾರ್ ಮತ್ತು ಭಿಲಾವರದಲ್ಲಿ 0 ಡಿ.ಸೆ. ಉಷ್ಣಾಂಶ ದಾಖಲಾಗಿದೆ.
ವಿಶ್ವದ ಅತಿ ಚಳಿಯ ನಗರದಲ್ಲಿ -50 ಡಿಗ್ರಿ ತಾಪಮಾನ