Asianet Suvarna News Asianet Suvarna News

ಬಿಸಿಲು ಕಾಯುತ್ತಿಲ್ಲ, ಬಿಸಿ ಕಾಫಿಯೂ ತಟ್ಟುತ್ತಿಲ್ಲ; ಚಳಿಗೆ ನಡುಗುತ್ತಿದೆ ನವದೆಹಲಿ!

ನವದೆಹಲಿಯಲ್ಲಿ ದಾಖಲೆಯ ಚಳಿ ಅನುಭವವಾಗುತ್ತಿದೆ. ಅದೆಷ್ಟೆ ಬೆಚ್ಚಿಗಿನ ಬಟ್ಟೆ, ಜರ್ಕಿನ್ ಹಾಕಿದರೂ ಕೊರೆವ ಚಳಿಗೆ ಸಾಕಾಗುತ್ತಿಲ್ಲ. 3.5 ಡಿಗ್ರಿ ಸೆಲ್ಶಿಯಸ್‌ ತಾಪಾಮಾನ ದಾಖಲಾಗಿದೆ. ದೆಹಲಿಯ ಸದ್ಯದ ಪರಿಸ್ಥಿತಿ ಹೇಗಿದೆ? ದೆಹಲಿಯಿಂದ ಪ್ರತಿನಿಧಿ ಮಂಜು ವರದಿ

Cold wave condition in New delhi minimum temperature at 4 degrees celsius ckm
Author
Bengaluru, First Published Dec 17, 2020, 9:47 PM IST

ನವದೆಹಲಿ(ಡಿ.17) : ಚಳಿ ಸ್ವಾಮಿ..ಚಳಿ..! ನಡುಗುತ್ತಿದೆ ನ್ಯೂ ಡೆಲ್ಲಿ..! ಬಿಸಿ ಬಿಸಿ ಟೀ, ಕಾಫಿ ಗಂಟಲಿಗೆ ಇಳಿದಾಗ ಮಾತ್ರ ಒಂದಷ್ಟು ಬೆಚ್ಚಗಿನ ಸ್ಥಿತಿ. ಇಲ್ಲ ಅಂದ್ರೆ ಥರ್ಮಲ್ ವೇರ್ ಹಾಕಿ ಓಡಾಡಿದರೂ ಕೂಡ ಶೀತಗಾಳಿಗೆ ಒದ್ದಾಡುವ ಸ್ಥಿತಿ. ಈ ತಾಪಮಾನ ಅಥವಾ ಹವಾಮಾನ ನಾಳೆಯೂ ಇರುತ್ತಂತೆ..

ಚಳಿಗಾಲದ ಸಮರಕ್ಕೆ ಭಾರತೀಯ ಸೇನೆ ಸಜ್ಜು, ಚಳಿ ತಡೆವ ವಸತಿ ವ್ಯವಸ್ಥೆ!..

 ಇವತ್ತು ರಾಜಧಾನಿ ನವದೆಹಲಿಯಲ್ಲಿ ಎಲುಬು ಬೆಂಡಾಗುವಷ್ಟು ಚಳಿ. ಅದರಲ್ಲೂ ಡೆಲ್ಲಿ ಎನ್‍ಸಿಆರ್ ಪ್ರದೇಶ ಅಂದರೆ ಚಾಣಕ್ಯಪುರಿ, ಡೆಲ್ಲಿ ಕೆಂಟ್ ಪ್ರದೇಶದಲ್ಲಿ ಚಳಿಯೋ ಚಳಿ.. ಇವತ್ತಿನ ಕನಿಷ್ಠ ತಾಪಮಾನ 3.5 ಡಿಗ್ರಿ  ಸೆಲ್ಸಿಯಸ್‍ಗೆ ಜಾರಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎನ್ನುತ್ತಿದೆ ಹವಾಮಾನ ಇಲಾಖೆ.

ಈ ಬಾರಿ ಭಾರೀ ಚಳಿ, ಮೂರು ರಾಜ್ಯಗಳಿಗೆ ಅಪಾಯ!.

ಪಶ್ಚಿಮ ಹಿಮಾಲಯದಿಂದ ಬೀಸುತ್ತಿರುವ ಶೀತಗಾಳಿ ದೆಹಲಿ ಒಂದು ರೀತಿ ರೆಫ್ರಿಜರೇಟ್ ಆಗಿದೆ. ತಿಳಿಯಾದ ಅಗಸ, ಸೂರ್ಯ ಕಾಣಿಸಿಕೊಳ್ಳುತ್ತಿದ್ದರೂ ಶೀತಗಾಳಿ ಕೂಲ್ ಕೂಲ್ ಆಗಿಸಿದೆ. ಗರಿಷ್ಠಿ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದಿದೆ ತಾಪಮಾನ ಇಲಾಖೆ.

ಕೂಲ್ ಶುಕ್ರವಾರ : ಕಳೆದ ಎರಡು ಮೂರು ದಿನಗಳಿಂದ ಶೀತಗಾಳಿಯು ಬೀಸಲು ಶುರುವಾಗಿದ್ದು ಇವತ್ತು 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ನಾಳೆಯೂ ಅಂದರೆ ಶುಕ್ರವಾರವೂ ಕೂಡ ಇದೇ ತಾಪಮಾನ ನವದೆಹಲಿಯಲ್ಲಿ ಮುಂದುವರೆಯಲಿದೆ. ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ.

Follow Us:
Download App:
  • android
  • ios