Asianet Suvarna News Asianet Suvarna News

9,400 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಕಾಗ್ನಿಝೆಂಟ್ !

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹಲವು ಕಂಪನಿಗಳು ಉದ್ಯೋಗ ಕಡಿತ, ವೇತನ ಕಡಿತ ಮಾಡುತ್ತಿದೆ. ಇದೀಗ ಬಹುರಾಷ್ಟ್ರೀಯ IT ಕಂಪನಿ ಕಾಗ್ನಿಝೆಂಟ್ ಕಳೆದ 3 ತಿಂಗಳಲ್ಲಿ ತನ್ನ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡಿದೆ. ನಿರ್ವಹಣಾ ವೆಚ್ಚ, ಕಂಪನಿ ನಷ್ಟ ಸರಿದೂಗಿಸಲು ಈ ಕ್ರಮ ಕೈಗೊಂಡಿದೆ. ಕಳೆದ 3 ತಿಂಗಳಲ್ಲಿ ಕಾಗ್ನಿಝಂಟ್ ಕಂಪನಿಯ ರೌದ್ರವತಾರದ ವಿವರ ಇಲ್ಲಿದೆ.

Cognizant let go of more than 9400 employees during the April June quarter
Author
Bengaluru, First Published Jul 31, 2020, 3:01 PM IST

ಬೆಂಗಳೂರು(ಜು.31): ಕೊರೋನಾ ವಕ್ಕರಿಸಿದ ಬಳಿಕ ಎಲ್ಲಾ ವ್ಯವಹಾರಗಳು ಸಂಕಷ್ಟದಲ್ಲಿದೆ. ಐಟಿ ಕಂಪನಿಗಳು ತನ್ನ ನೌಕರರಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಿದರೂ ಕಂಪನಿ ಹಿಂದಿನಂತೆ ಲಾಭದಲ್ಲಿಲ್ಲ. ಇದೀಗ ಬಹುರಾಷ್ಟ್ರೀಯ ಐಟಿ ಕಂಪನಿ ಕಾಂಗ್ನಿಝೆಂಟ್ ಕಳೆದ 3 ತಿಂಗಳಲ್ಲಿ ಬರೋಬ್ಬರಿ 9,400 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದೆ.

ಉದ್ಯೋಗ ನೇಮಕದಲ್ಲಿ ಬೆಂಗಳೂರು ಮುಂಚೂಣಿ...

ಭಾರತದಲ್ಲಿ ಬರೋಬ್ಬರಿ 2 ಲಕ್ಷ ಉದ್ಯೋಗಿಗಳಿರುವ ಅತಿ ದೊಡ್ಡ ಐಟಿ ಕಂಪನಿ ಕಾಗ್ನಿಝೆಂಟ್ ನಿರ್ಧಾರದಿಂದ ನೌಕರರು ಬೆಚ್ಚಿ ಬಿದ್ದಿದ್ದಾರೆ. ಎಪ್ರಿಲ್ ತಿಂಗಳಿನಿಂದ ಜೂನ್ ವರೆಗಿನ 3 ತಿಂಗಳಲ್ಲಿ ಸರಿಸುಮಾರು 10 ಸಾವಿರ ಉದ್ಯೋಗಿಗಳು ಮನೆಯತ್ತ ಮುಖಮಾಡಿದ್ದಾರೆ. 

ವಿಮಾನಯಾನ ಕ್ಷೇತ್ರದಲ್ಲಿ 4 ಲಕ್ಷ ಜನರ ಉದ್ಯೋಗ ಡೋಲಾಯಮಾನ!.

ಎಪ್ರಿಲ್-ಜೂನ್ ತಿಂಗಳ ಅವದಿಯಲ್ಲಿ ಭಾರತದಲ್ಲಿನ ಪ್ರಮುಖ ಕಂಪನಿಗಳ ಉದ್ಯೋಗ ಕಡಿತದ ವಿವರ ಇಲ್ಲಿದೆ
TCS = 4,786
ಇನ್ಫೋಸಿಸ್ =  3,138,
HCL = ಟೆಕ್ 136
ವಿಪ್ರೋ  = 1082
ಟೆಕ್ ಮಹೀಂದ್ರ = 1820

ಐದು ಐಟಿ ಕಂಪನಿಗಳು ಒಟ್ಟು 10,962 ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ ಇದೀಗ ಕಾಂಗ್ನಿಝೆಂಟ್ ಒಂದರಲ್ಲಿ 9,400 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಜೂನ್ ತಿಂಗಳ ವೇಳೆ ಕಾಂಗ್ನಿಝೆಂಟ್ ಆದಾಯದಲ್ಲಿ 3.4 ಶೇಕಡಾ ಇಳಿಕೆಯಾಗಿದೆ. ಇದು ಕಾಂಗ್ನಿಝೆಂಟ್ ಇತಿಹಾಸದಲ್ಲೇ ಗರಿಷ್ಠವಾಗಿದೆ. ಹೀಗಾಗಿ ನಿರ್ವಹಣಾ ವೆಚ್ಚ ಕಡಿತಗೊಳಿಸಲು ಕಂಪನಿ ನಿರ್ಧರಿಸಿದೆ. ಈ ಮೂಲಕ  ಆರ್ಥಿಕ ನಷ್ಟ ಸರಿದೂಗಿಸಿಕೊಳ್ಳುವ ಯತ್ನದಲ್ಲಿದೆ.

Follow Us:
Download App:
  • android
  • ios