Asianet Suvarna News Asianet Suvarna News

ರಾಮಮಂದಿರ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ ಯೋಗಿ ಆದಿತ್ಯನಾಥ್!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಇಂದು ಐತಿಹಾಸಿಕ ದಿನ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಗರ್ಭಗುಡಿಯ ಶಂಕುಸ್ಥಾಪನೆ ನೆರವೇರಿಸಿದರು. ಇದರೊಂದಿಗೆ ರಾಮಮಂದಿರಕ್ಕೆ ಹಲವು ವರ್ಷಗಳಿಂದ ಕೆತ್ತಲಾಗುತ್ತಿದ್ದ ಕಲ್ಲುಗಳ ಬಳಕೆ ಆರಂಭವಾಯಿತು.
 

CM Yogi Adityanath laid the first stone of the sanctum sanctorum of Ram temple  Garbhagriha Poojan At Ram Mandir san
Author
Bengaluru, First Published Jun 1, 2022, 11:00 AM IST

ಅಯೋಧ್ಯೆ (ಜೂ. 1): ಅಯೋಧ್ಯೆಯಲ್ಲಿ (ayodhya) ಭವ್ಯ ರಾಮಮಂದಿರ  (Ram Mandir) ನಿರ್ಮಾಣದಲ್ಲಿ ಇಂದು ಐತಿಹಾಸಿಕ ದಿನ. ಇಂದಿನಿಂದ ಗರ್ಭಗುಡಿ (garbhagriha) ನಿರ್ಮಾಣ ಕಾರ್ಯ ಆರಂಭವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಬುಧವಾರ ಗರ್ಭಗುಡಿ ನಿರ್ಮಾಣಕ್ಕೆ ಮೊದಲ ಶಿಲಾನ್ಯಾಸ ನೆರವೇರಿಸಿದರು. ಇದರೊಂದಿಗೆ ಮೇ 29ರಂದು ಆರಂಭವಾದ ಸರ್ವದೇವ ಶಾಸ್ತ್ರೋಕ್ತವಾಗಿ ಅಂತ್ಯಗೊಂಡಿತು. ಇನ್ನು ನಿರ್ಮಾಣ ಸ್ಥಳದ ಬಳಿ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ದೇವಾಲಯದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲೂ ಸಿಎಂ ಯೋಗಿ ಭಾಗವಹಿಸಲಿದ್ದಾರೆ.

ಶಿಲಾನ್ಯಾಸ ಸಮಾರಂಭದ ವೇಳೆ ಮುಖ್ಯಮಂತ್ರಿಗಳು ಕಲ್ಲುಗಳಿಗೆ ಸಿಮೆಂಟ್ ಸುರಿದರು. ಇದಕ್ಕೂ ಮುನ್ನ ಸಿಎಂ ಆದಿತ್ಯನಾಥ್ ಅವರು ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಾಡಿನ ವಿವಿಧೆಡೆಯಿಂದ ಬಂದಿದ್ದ ಸಾಧು-ಸಂತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಳೆದ 500 ವರ್ಷಗಳಿಂದ ದೇಶದ ಸಂತರು, ಭಕ್ತರು  ರಾಮಮಂದಿರ ಆಂದೋಲನ ನಡೆಸುತ್ತಿದ್ದರು. ಇಂದು ಆ ಜನರೆಲ್ಲರ ಹೃದಯದಲ್ಲಿ ಸಂತಸ ಮೂಡಿದೆ ಎಂದು ಗೋರಕ್ಷನಾಥ ಪೀಠಕ್ಕೆ ಶಿಲಾನ್ಯಾಸ ನೆರವೇರಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ದೇವಾಲಯದ ಆಂದೋಲನದೊಂದಿಗೆ ದೇಶದ ಮೂರು ತಲೆಮಾರುಗಳು ಸಂಬಂಧ ಹೊಂದಿದ್ದವು ಎಂದಿದ್ದಾರೆ. 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಮೋದಿಯವರು ಎರಡು ವರ್ಷಗಳ ಹಿಂದೆಯೇ ಚಾಲನೆ ನೀಡಿದ್ದರು. ಕೆಲಸ ಯಶಸ್ವಿಯಾಗಿ ನಡೆಯುತ್ತಿದ್ದು, ಗರ್ಭಗೃಹದಲ್ಲಿ ಕಲ್ಲು ಇಡುವ ಸುಯೋಗ ಸಿಕ್ಕಿದ್ದು ನಮ್ಮ ಅದೃಷ್ಟ. ಇಂದಿನಿಂದ ಗರ್ಭಗೃಹ ನಿರ್ಮಾಣ ಪ್ರಾರಂಭಿಸಲಾಗಿದೆ ಎಂದರು.

ರಾಮಮಂದಿರ ಭಾರತದ ರಾಷ್ಟ್ರೀಯ ಮಂದಿರವಾಗಲಿದೆ ಎಂದು  ಯೋಗಿ ಆದಿತ್ಯನಾಥ್ ಈ ವೇಳೆ ಒತ್ತಿ ಹೇಳಿದರು. "ಜನರು ಈ ದಿನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದಾರೆ, ರಾಮಮಂದಿರವು ಭಾರತದ ಏಕತೆಯ ಸಂಕೇತವಾಗಲಿದೆ" ಎಂದು ಅವರು ಹೇಳಿದರು.

ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ಇಂದಿನಿಂದ ಮೂಲ ಗರ್ಭಗುಡಿಯ ಕೆಲಸ ಪ್ರಾರಂಭವಾಗುತ್ತಿದೆ, ಕಾಮಗಾರಿಗಳನ್ನು ಪೂರ್ಣಗೊಳಿಸಲು ನಮಗೆ 3 ಹಂತದ ಗಡುವು ಇದೆ, 2023 ರೊಳಗೆ ಗರ್ಭಗುಡಿ, 2024 ರೊಳಗೆ ದೇವಾಲಯ ನಿರ್ಮಾಣ ಮತ್ತು 2025 ರ ವೇಳೆಗೆ ದೇವಾಲಯದ ಸಂಕೀರ್ಣದಲ್ಲಿ ಮುಖ್ಯ ನಿರ್ಮಾಣ ನಡೆಯಲಿದೆ.

2023ರ ಡಿಸೆಂಬರ್‌ ಒಳಗೆ ಗರ್ಭಗುಡಿಯ ಕಾಮಗಾರಿ ಪೂರ್ಣಗೊಳಿಸಿ, ಅದರಲ್ಲಿ ದೇವರ ವಿಗ್ರಹ ಕೂರಿಸುವ ಗುರಿ ಹಾಕಿಕೊಳ್ಳಲಾಗಿದೆ. ಹೀಗೆ ಮಾಡಿದರೆ ಬರುವ ಭಕ್ತರು ದೂರದಿಂದಲೇ ದರ್ಶನ ಮಾಡಬಹುದು. ಇದರಲ್ಲಿ ಐದು ಮಂಟಪಗಳು ಬರಲಿವೆ. ಇವುಗಳು ನೆಲಮಹಡಿಯಲ್ಲೇ ನಿರ್ಮಾಣವಾಗಲಿವೆ. ಇದರ ಮೇಲೆ ಮೊದಲ ಅಂತಸ್ತು ಕಟ್ಟಲಾಗುವುದು. ಆದಾದ ಮೇಲೆ ಎರಡನೇ ಅಂತಸ್ತು. ಇದರಲ್ಲಿ ಮೂರು ಮತ್ತು ಎರಡು ಮಂಟಪಗಳು ಬರಲಿವೆ. ಎಲ್ಲ ಸಮುದಾಯದವರು ದೇವಾಲಯಕ್ಕೆ ಬಂದು ದರ್ಶನ ಪಡೆದುಕೊಳ್ಳಬೇಕು ಎಂಬ ಸದುದ್ದೇಶದಿಂದ ಮುಖ್ಯ ಮಂದಿರ ಮಾತ್ರವಲ್ಲದೇ ರಾಮಮಂದಿರದ ಸುತ್ತಲೂ ವಾಲ್ಮೀಕಿ ಮಂದಿರ, ಶಬರಿ ಮಂದಿರ ಹೀಗೆ ಇನ್ನಿತರ ಚಿಕ್ಕ ದೇವಾಲಯಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತಿದೆ.

ಸಕಾಲಕ್ಕೆ ಸಿದ್ಧವಾಗ್ತಿದೆ ಭವ್ಯ ರಾಮಮಂದಿರ, 2023ರಿಂದ ಶ್ರೀರಾಮಚಂದ್ರ ದರ್ಶನ!

ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿರುವ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್‌ನ ಸಹಾಯದೊಂದಿಗೆ ಲಾರ್ಸೆನ್ ಮತ್ತು ಟೂಬ್ರೊ ದೇವಾಲಯದ ನಿರ್ಮಾಣವನ್ನು ನಡೆಸುತ್ತಿದೆ. 2020ರ ಆಗಸ್ಟ್ 5ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಅಂದಿನಿಂದ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಜನರಿಗೆ ಶ್ರೀರಾಮನ ದರ್ಶನ ಯಾವಾಗ? ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಜೊತೆ Exclusive Interview!

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ (ಈಗ ನಿವೃತ್ತ) ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 2019ರ ನವೆಂಬರ್ 9ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಭೂಮಿ ರಾಮ ಲಲ್ಲಾಗೆ ಸೇರಿದ್ದು ಎಂದು ಸರ್ವಾನುಮತದಿಂದ ತೀರ್ಪು ನೀಡಿತ್ತು.

 

Follow Us:
Download App:
  • android
  • ios