ಮಹಾಕುಂಭ ಮೇಳೆ ಸಮಾರೋಪಗೊಂಡಿದೆ. ಇದರ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಮತ್ತೆ ಮಾದರಿಯಾಗಿದ್ದಾರೆ. ಇದೀಗ ತ್ರೀವೇಣಿ ಸಂಗಮ ಸೇರಿದಂತೆ ಗಂಗಾ ತೀರದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಖುದ್ದು ಯೋಗಿ ಇಳಿದಿದ್ದಾರೆ. ಕೈಗೆ ಗ್ಲೌಸ್ ಧರಿಸಿ ನದಿ ಸ್ವಚ್ಚಗೊಳಿಸುತ್ತಿದ್ದಾರೆ.

ಪ್ರಯಾಗ್‌ರಾಜ್(ಫೆ.27) ವಿಶ್ವದ ಅತೀ ದೊಡ್ಡ ಧಾರ್ಮಿಕ ಹಬ್ಬ ಮಹಾಕುಂಭ ಮೇಳ ಸಂಪನ್ನಗೊಂಡಿದೆ. ಬರೋಬ್ಬರಿ 60 ಕೋಟಿ ಭಕ್ತರು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಮಾಡಿದ್ದಾರೆ. ಅತೀ ದೊಡ್ಡ ಧಾರ್ಮಿಕ ಹಬ್ಬವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾತ್ರರಾಗಿದ್ದಾರೆ. ಇದೀಗ ಮಹಾಕುಂಭ ಮೇಳ ಮುಗಿದ ಬೆನ್ನಲ್ಲೇ ಮತ್ತೆ ಯೋಗಿ ಮಾದರಿಯಾಗಿದ್ದಾರೆ. ಮಹಾಕುಂಭ ಮೇಳ ಸಮಾರೋಪಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್, ಕೈಗೆ ಗ್ಲೌಸ್ ಧರಿಸಿ ತ್ರೀವೇಣಿ ಸಂಗಮ ಸೇರಿದಂತೆ ನದಿ ತೀರದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಇಳಿದಿದ್ದಾರೆ. 

ಮಹಾಕುಂಭ ನಗರದ ಆರೈಲ್ ಘಾಟ್‌ನಲ್ಲಿ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಸೇರಿ ಘಾಟ್ ಸ್ವಚ್ಛಗೊಳಿಸಿದರು. ಗಂಗಾ ತೀರದಲ್ಲಿ ಸ್ನಾನ ಮಾಡುವವರು ಬಿಟ್ಟು ಹೋದ ಬಟ್ಟೆಗಳನ್ನು ಸ್ವಚ್ಛಗೊಳಿಸುವಲ್ಲಿ ತಮ್ಮ ಮಂತ್ರಿಗಳೊಂದಿಗೆ ಶ್ರಮದಾನ ಮಾಡಿದರು. ನೀರಿನಲ್ಲಿ ಬಿಸಾಡಿದ ಬಟ್ಟೆಗಳನ್ನು ತೆಗೆದು ಮಹಾಕುಂಭದ ನಂತರ ಇಡೀ ಮೇಳಾ ಪ್ರದೇಶದ ಸ್ವಚ್ಛತೆಗಾಗಿ ಅಭಿಯಾನ ಆರಂಭಿಸಿದರು.

ಮಹಾ ಕುಂಭವನ್ನು "ಏಕತೆಯ ಮಹಾ ಯಜ್ಞ" ಎಂದು ಕರೆದ್ರು ಪ್ರಧಾನಿ ನರೇಂದ್ರ ಮೋದಿ

ಯೋಗಿ ಆದಿತ್ಯನಾಥ್ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅತೀ ದೊಡ್ಡ ಕಾರ್ಯಕ್ರಮವನ್ನು, ಹಿಂದೂ ಧಾರ್ಮಿಕತೆ, ಭಾರತೀಯ ಪರಂಪರೆಯನ್ನು ಹೇಗೆ ನಡೆಸಬೇಕು, ನಿರ್ವಹಿಸಬೇಕು ಅನ್ನೋದು ಯೋಗಿ ಆದಿತ್ಯನಾಥ್ ಅವರಿಂದ ಕಲಿಯಬೇಕು ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮ ಹಾಗೂ ಭಾರತೀಯತೆಯನ್ನು ವಿಶ್ವಕ್ಕೆ ಉತ್ತಮ ರೀತಿಯಲ್ಲಿ ಪ್ರಚುರಪಡಿಸಿದ ಹಾಗೂ ವಿಶ್ವವನ್ನೇ ಮೋಡಿ ಮಾಡಿದ ಸಿಎಂ ಯೋಗಿ ಆದಿತ್ಯನಾಥ್ ಇದೀಗ ಸ್ವಚ್ಚತಾ ಅಭಿಯಾನದಲ್ಲೂ ಪಾಲ್ಗೊಂಡಿದ್ದಾರೆ. ಯೋಗಿ ಸೂಚನೆ ನೀಡಿದ್ದರೆ ಸಾಕಿತ್ತು, ಆದರೆ ಖುದ್ದು ಯೋಗಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಕ್ಕೆ ಮಹತ್ವದದ ಸಂದೇಶ ನೀಡಿದ್ದಾರೆ ಎಂದು ಹಲವರು ಪ್ರಶಂಸಿಸಿದ್ದಾರೆ. 

ಸ್ವಚ್ಛತಾ ಕಾರ್ಯದ ನಂತರ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಫ್ಲೋಟಿಂಗ್ ಜೆಟ್ಟಿ ಮೂಲಕ ಸಂಗಮಕ್ಕೆ ತೆರಳಿದರು. ಈ ವೇಳೆ ಅವರು ಸೈಬೀರಿಯನ್ ಪಕ್ಷಿಗಳಿಗೆ ಆಹಾರ ನೀಡಿದರು. ಸಂಗಮ ತಲುಪಿದ ಸಿಎಂ ಯೋಗಿ ಮಾ ಗಂಗಾ, ಮಾ ಯಮುನಾ ಮತ್ತು ಅದೃಶ್ಯ ರೂಪದಲ್ಲಿರುವ ಮಾ ಸರಸ್ವತಿಯನ್ನು ವಿಧ್ಯುಕ್ತವಾಗಿ ಪೂಜಿಸಿದರು. ವೈದಿಕ ಮಂತ್ರಗಳ ಪಠಣದ ನಡುವೆ ಅವರು ಮಂತ್ರಿಗಳೊಂದಿಗೆ ಮಾ ಗಂಗೆಗೆ ದುಗ್ಧಾಭಿಷೇಕ ಮಾಡಿ ವಿಧಿ ವಿಧಾನಗಳೊಂದಿಗೆ ತಾಯಿಯ ಆರತಿ ಬೆಳಗಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಸಿಎಂ ಯೋಗಿ ಸಂಗಮ ಸ್ನಾನಕ್ಕೆ ಬಂದ ಭಕ್ತರಿಗೂ ನಮಸ್ಕರಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಕ್ಯಾಬಿನೆಟ್ ಸಚಿವರಾದ ಸುರೇಶ್ ಖನ್ನಾ, ರಾಕೇಶ್ ಸಚಾನ್, ನಂದ ಗೋಪಾಲ್ ಗುಪ್ತಾ ನಂದಿ, ಅನಿಲ್ ರಾಜ್‌ಭರ್, ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್, ಡಿಜಿಪಿ ಪ್ರಶಾಂತ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಗೃಹ ಮತ್ತು ಮಾಹಿತಿ ಸಂಜಯ್ ಪ್ರಸಾದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಇಂದು ದಿನವಿಡೀ ಮಹಾಕುಂಭ ನಗರದಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮಹಾಕುಂಭವನ್ನು ಐತಿಹಾಸಿಕ, ದೈವಿಕ, ಭವ್ಯ, ಸ್ವಚ್ಛ, ಸುರಕ್ಷಿತ ಮತ್ತು ಡಿಜಿಟಲ್ ಆಗಿಸುವಲ್ಲಿ ಕೊಡುಗೆ ನೀಡಿದ ಉದ್ಯೋಗಿಗಳು ಮತ್ತು ಸಂಸ್ಥೆಗಳನ್ನು ಭೇಟಿ ಮಾಡಿ ಸನ್ಮಾನಿಸಲಿದ್ದಾರೆ. ಸಂಜೆ ಸಿಎಂ ಯೋಗಿ ಪೊಲೀಸರೊಂದಿಗೆ ಸಂವಾದ ನಡೆಸಿ ಸುರಕ್ಷಿತ ಮಹಾಕುಂಭಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಇದಲ್ಲದೆ, ಕುಂಭದ ವ್ಯವಸ್ಥೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಮೇಳಾ ಆಡಳಿತಕ್ಕೆ ಸಂಬಂಧಿಸಿದವರೊಂದಿಗೂ ಸಭೆ ನಡೆಯಲಿದೆ.

ಮಹಾಕುಂಭದ ಭರ್ಜರಿ ಆದಾಯದಿಂದ ಮಿಂದೆದ್ದ ಯೋಗಿ ರಾಜ್ಯ: 2 ತಿಂಗಳಲ್ಲೇ ಒಂದು ವರ್ಷದ ವ್ಯಾಪಾರ