ಮದರಸಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ, ಶಿಕ್ಷಕರಿಗೆ TET ಪಾಸ್ ಕಡ್ಡಾಯ ಎಂದ ಯೋಗಿ!
ಮದರಸಾದಲ್ಲಿ ಪಾಠ ಮಾಡಲು ಶಿಕ್ಷರು TET ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಘೋಷಣೆ ಮಾಡಿದ್ದಾರೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.
ಲಖನೌ(ಜು.18): ಮದರಸಾ ಶಿಕ್ಷಣ ಕುರಿತು ಹಲವು ಬಾರಿ ಚರ್ಚೆಯಾಗಿದೆ. ವಿವಾದಗಳು ಹುಟ್ಟಿಕೊಂಡಿದೆ. ಮದರಸಾ ಶಿಕ್ಷಣದಲ್ಲಿ ಆಧುನಿಕತೆಯ ಅವಶ್ಯಕತೆ ಇದೆ ಅನ್ನೋ ಕೂಗು ಹಲವು ಬಾರಿ ಕೇಳಿ ಬಂದಿದೆ. ಆದರೆ ಸ್ವತಃ ಮುಸ್ಲಿಮ್ ಸಮುದಾಯದ ಹಲವರು ಆಧುನಿಕ ಶಿಕ್ಷಮ ವಿರೋಧಿಸಿದ್ದರು. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮದರಸಾ ಶಿಕ್ಷಣದಲ್ಲಿ ಭಾರಿ ಬದಲಾವಣೆಗೆ ಮುಂದಾಗಿದ್ದಾರೆ. ಮದರಸಾದಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಕಡ್ಡಾಯವಾಗಿ ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್ ಪಾಸ್ ಆಗಿರಬೇಕು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮದರಸಾದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಲು ಆದೇಶ ನೀಡಿದ್ದಾರೆ. ಇನ್ನು ಮುಂದೆ ಉತ್ತರ ಪ್ರದೇಶ ಮದರಸಾದಲ್ಲಿ ಮಕ್ಕಳಿಗೆ ಆಧುನಿಕ ಶಿಕ್ಷಣ ಸೌಲಭ್ಯ ಸಿಗಲಿದೆ. ವಿಜ್ಞಾನ, ಗಣಿತ, ಸಾಮಾಜಿಕ ವಿಜ್ಞಾನ, ಹಿಂದಿ, ಇಂಗ್ಲೀಷ್ ವಿಷಗಳನ್ನು ಬೋಧಿಸಲಿವೆ. ಶೇಕಡಾ 80 ರಷ್ಟು ಆಧುನಿಕ ಶಿಕ್ಷಣ ನೀಡಲಾಗುತ್ತದೆ, ಶೇಕಡಾ 20 ರಷ್ಟು ಮಾತ್ರ ಸಾಂಪ್ರದಾಯಿಕ ಹಾಗೂ ಮದರಸಾ ಮೌಲ್ಯ ಶಿಕ್ಷಣ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮದರಸಾ ಶಿಕ್ಷಣ ನೀತಿಯಲ್ಲಿ ಭಾರಿ ಬದಲಾವಣೆ ತರಲಾಗಿದೆ. ಶೀಘ್ರದಲ್ಲೇ ನೂತನ ನೀತಿ ಉತ್ತರ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಮದರಸಾದಲ್ಲಿ ಭೋದನೆ ಮಾಡುವ ಶಿಕ್ಷಕರು ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್(TET) ಕಡ್ಡಾಯವಾಗಿ ಪಾಸ್ ಆಗಿರಬೇಕು. ಇತರ ಶಿಕ್ಷಣ ಸಂಸ್ಥೆಗಳಲ್ಲಿ ಇರುವಂತ ಭೋದನಾ ನಿಯಮ ಜಾರಿಯಾಗಲಿದೆ. ಸರ್ಕಾರದ ಮಾನ್ಯತೆ ಪಡೆದ ಶಿಕ್ಷರು ಅಂದರೆ ಶಿಕ್ಷರ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಮದರಸಾದಲ್ಲಿ ಪಾಠ ಮಾಡಲು ಸಾಧ್ಯ. ಮದರಸಾ ಆಧುನಿಕತೆ ಯೋಜನೆಯಡಿ ಈ ನೀತಿ ತರಲಾಗಿದೆ. ಇದಕ್ಕಾಗಿ ಈಗಾಗಲೇ ಅನುದಾನ ಮೀಸಲಿಡಲಾಗಿದೆ.
ಕಳೆದ 6 ವರ್ಷಗಳಲ್ಲಿ ಉತ್ತರ ಪ್ರದೇಶದ ಮದರಸಾಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3 ಲಕ್ಷ ಇಳಿಕೆ!
ಮದರಸಾ ಶಿಕ್ಷಣಗಳ ಗುಣಟ್ಟ ಹೆಚ್ಚಿಸಲು ಕಳೆದ ವಾರ ಮದರಸಾ ಇ ಲರ್ನಿಂಗ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದರಿಂದ ಮದರಸಾದಲ್ಲಿರುವ ಮಕ್ಕಳು ಸಾಂಪ್ರದಾಯಿಕ ಶಿಕ್ಷಣದ ಬದಲು ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿನ ಶಿಕ್ಷಣ ಪಡೆಯಲಿದ್ದಾರೆ. ಇನ್ನು ಮದರಸಾದಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಇದಕ್ಕಾಗಿ ಮದರಸಾದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕಾರ್ಯಗಳು ಆರಂಭಗೊಂಡಿದೆ.
ಯೋಗಿ ಆದಿತ್ಯನಾಥ್ ಮದರಸಾದಲ್ಲಿ ಆಧುನಿಕ ಶಿಕ್ಷಣ ಯೋಜನೆಗೆ ಪರ ವಿರೋಧಗಳು ಇವೆ. ಮುಸ್ಲಿಮ್ ಸಮುದಾಯದ ಹಲವರು ಸದ್ಯ ಇರುವ ಮದರಸಾ ಶಿಕ್ಷಣವನ್ನೇ ಮುಂದುವರಿಸಲು ಆಗ್ರಹಿಸಿದ್ದಾರೆ. ಇದು ಮುಸ್ಲಿಮ್ ಸಮುದಾಯದ ಹಕ್ಕನ್ನು ಕಸಿದುಕೊಳ್ಳುವ ಯೋಜನೆಯಾಗಿದೆ. ಮುಸ್ಲಿಮ ಮಕ್ಕಳು ಮದರಸಾ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಮದರಸಾ ಶಿಕ್ಷಣದಲ್ಲಿ ಆಧುನಿಕತೆ ಅವಶ್ಯಕತೆಯನ್ನು ಯೋಗಿ ಆದಿತ್ಯನಾಥ್ ಹಲವು ಬಾರಿ ಒತ್ತಿ ಹೇಳಿದ್ದಾರೆ. ಚಿಕ್ಕ ಮಕ್ಕಳಲ್ಲಿ ಧರ್ಮಾಂಧತೆ ತುಂಬುವ ಬದಲು ಅವರು ಸರಿಯಾದ ಶಿಕ್ಷಣ ಪಡೆಯುವ ಹಕ್ಕು ಹೊಂದಿದ್ದಾರೆ. ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಮದರಸಾದಲ್ಲಿ ಮಹತ್ವದ ಬದಲಾವಣೆ ಅಗತ್ಯವಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರುಂಡ ಕತ್ತರಿಸುವ ಮದರಸಾ ಶಿಕ್ಷಣಕ್ಕಿಂತ ಮುಸ್ಲಿಮ್ ಮಕ್ಕಳಿಗೆ ಆಧುನಿಕ ಶಿಕ್ಷಣ ಬೇಕು, ಆರೀಫ್ ಖಾನ್!