ಕಳೆದ 6 ವರ್ಷಗಳಲ್ಲಿ ಉತ್ತರ ಪ್ರದೇಶದ ಮದರಸಾಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 3 ಲಕ್ಷ ಇಳಿಕೆ!
2016 ರಿಂದ, ಉತ್ತರ ಪ್ರದೇಶದಲ್ಲಿ ಮದರಸಾಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಕುಸಿತ ಕಂಡಿದೆ.2016ರಲ್ಲಿ ಯುಪಿಯಲ್ಲಿ 4 ಲಕ್ಷ 22 ಸಾವಿರದ 627 ವಿದ್ಯಾರ್ಥಿಗಳು ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ತರಗತಿಗಳಲ್ಲಿ ನೋಂದಾಯಿಸಿಕೊಂಡಿದ್ದರು. ಈ ವರ್ಷ ಈ ಸಂಖ್ಯೆ 92 ಸಾವಿರಕ್ಕೆ ಇಳಿದಿದೆ. ಅಂದರೆ, ಈ ಆರು ವರ್ಷಗಳಲ್ಲಿ 3.30 ಲಕ್ಷ ಇಳಿಕೆಯಾಗಿದೆ.
ಲಕ್ನೋ (ಜುಲೈ 7): ಉತ್ತರ ಪ್ರದೇಶದ (Uttar Pradesh) ಮದರಸಾಗಳಲ್ಲಿ(madrasa) ಓದುವ ಹೊಸ ಪೀಳಿಗೆಯ ಮುಸ್ಲಿಂ ಬಾಲಕರ ಆಸಕ್ತಿ ನಿರಂತರವಾಗಿ ಕಡಿಮೆಯಾಗುತ್ತಿದೆ. ಮದರಸಾ ಶಿಕ್ಷಣ ಪರಿಷತ್ತಿನ (Madrasa Education Council ) ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಆರು ವರ್ಷಗಳಲ್ಲಿ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ತರಗತಿಗಳಲ್ಲಿ ನೋಂದಾಯಿತ ವಿದ್ಯಾರ್ಥಿಗಳ ಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆಯಾಗಿದೆ.
2016ರಲ್ಲಿ ಯುಪಿಯಲ್ಲಿ 4 ಲಕ್ಷ 22 ಸಾವಿರದ 627 ವಿದ್ಯಾರ್ಥಿಗಳು ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ತರಗತಿಗಳಲ್ಲಿ ನೋಂದಾಯಿಸಿಕೊಂಡಿದ್ದರು. ಈ ವರ್ಷ ಈ ಸಂಖ್ಯೆ 92 ಸಾವಿರಕ್ಕೆ ಇಳಿದಿದೆ. ಅಂದರೆ, ಈ ಆರು ವರ್ಷಗಳಲ್ಲಿ 3.30 ಲಕ್ಷ ಇಳಿಕೆಯಾಗಿದೆ.
ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಮತ್ತು ಇಲ್ಲಿ ಪಡೆದ ಪ್ರಮಾಣಪತ್ರಗಳ ಪ್ರಾಮುಖ್ಯತೆಯ ಕೊರತೆಯೇ ಮದರಸಾಗಳಲ್ಲಿ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಈ ಇಳಿಕೆಗೆ ದೊಡ್ಡ ಕಾರಣ ಎಂದು ಹೇಳಲಾಗುತ್ತಿದೆ. ಯುಪಿ ಮದರಸಾ ಶಿಕ್ಷಾ ಪರಿಷತ್ತು (UP Madrasa Shiksha Parishad) ಯಾವುದೇ ಭಾಷಾ ವಿಶ್ವವಿದ್ಯಾನಿಲಯದಿಂದ ಅದರ ಸಂಬಂಧವನ್ನು ಪಡೆಯಲು ಅಥವಾ ಅದರ ಕೋರ್ಸ್‌ಗಳ ಮಾನ್ಯತೆಯನ್ನು ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ, ಮದ್ರಸಾ ಪ್ರಮಾಣಪತ್ರಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ.
ಅದಲ್ಲದೆ, ಯುಪಿಯ ಮದರಸಾಗಳಿಂದ ಹೊರಬರುವ ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳ ಆಧಾರದ ಮೇಲೆ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಮದರಸಾಗಳಲ್ಲಿ ನೀಡುವ ಕೋರ್ಸ್ ಮೂಲಗಳ ಪ್ರಕಾರ, ಮದರಸಾ ಶಿಕ್ಷಣವನ್ನು ಉದ್ಯೋಗ ಆಧಾರಿತವಾಗಿಸುವುದು ಈಗ ಆದ್ಯತೆಯಾಗಿದೆ. ಈ ಎಲ್ಲ ವಿಷಯಗಳ ಕುರಿತು ಕೂಲಂಕಷವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಪರಿಷತ್ ಸದಸ್ಯರ ಸಭೆ ನಡೆಯಲಿದೆ.
2016ರಲ್ಲಿ ಒಟ್ಟು 4 ಲಕ್ಷದ 22 ಸಾವಿರದ 667 ವಿದ್ಯಾರ್ಥಿಗಳು ಮದರಸಾ ಮಂಡಳಿ ಪರೀಕ್ಷೆಗಳಲ್ಲಿ ನೋಂದಾಯಿಸಿಕೊಂಡಿದ್ದರು. 2017ರಲ್ಲಿ ಈ ಸಂಖ್ಯೆ 3 ಲಕ್ಷದ 71 ಸಾವಿರದ 52 ವಿದ್ಯಾರ್ಥಿಗಳಿಗೆ ಇಳಿಕೆಯಾಗಿದ್ದರೆ, 2018ರಲ್ಲಿ 2.70 ಲಕ್ಷ, 2019ರಲ್ಲಿ 2.06 ಲಕ್ಷ, 2020 ಹಾಗೂ 2021ರಲ್ಲಿ 1.82 ಲಕ್ಷ ಆಗಿತ್ತು.
ಈ ಕುರಿತಾಗಿ ಮಾತನಾಡಿರುವ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಇಲಾಖೆಗಳ ಸಚಿವ ಧರಂ ಪಾಲ್ ಸಿಂಗ್ (UP Minority minister Dharam Pal Singh), ಮದರಸಾಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸರ್ಕಾರವು ಪ್ರಮುಖ ಕ್ರಮವನ್ನು ತೆಗೆದುಕೊಂಡಿದೆ. ಆ್ಯಪ್ ಅನ್ನು ಸಹ ಪ್ರಾರಂಭಿಸಲಾಗಿದೆ ಮತ್ತು ಮದರಸಾದಲ್ಲಿ ನಿಯಮಿತ ಬೋಧನೆಯ ಬಗ್ಗೆ ತನಿಖೆ ನಡೆಯುತ್ತಿದೆ. ದಾಖಲಾತಿ ಸಂಖ್ಯೆಗಳನ್ನು ನಕಲಿ ಮಾಡಿರುವುದು ಮತ್ತು ವಯಸ್ಸಿನ ಮಿತಿ ಇಲ್ಲದಿರುವುದು ತನಿಖೆಗೆ ಒಳಪಟ್ಟಿರುವ ಸಂಖ್ಯೆಗಳ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಧರಂ ಪಾಲ್ ಸಿಂಗ್ ಹೇಳಿದ್ದಾರೆ.
ಧಾರ್ಮಿಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಆಧುನಿಕ ಭಾಷೆಗಳನ್ನು ಕಲಿಸಬೇಕಾದ ಮದರಸಾಗಳಲ್ಲಿ ಉದ್ಯೋಗ ಆಧಾರಿತ ಕೌಶಲ್ಯಗಳೊಂದಿಗೆ ಆಧುನಿಕ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ದೃಷ್ಟಿಯಾಗಿದೆ ಎಂದು ಹೇಳಿದ್ದಾರೆ. ಅಂಕಿಅಂಶಗಳು ವಾಸ್ತವಿಕವಾಗಿದ್ದು, ಸಂಪನ್ಮೂಲಗಳಿಗೆ ಸೀಮಿತ ಪ್ರವೇಶದೊಂದಿಗೆ ಇಲ್ಲಿಗೆ ಬರುವ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.
ರುಂಡ ಕತ್ತರಿಸುವ ಮದರಸಾ ಶಿಕ್ಷಣಕ್ಕಿಂತ ಮುಸ್ಲಿಮ್ ಮಕ್ಕಳಿಗೆ ಆಧುನಿಕ ಶಿಕ್ಷಣ ಬೇಕು, ಆರೀಫ್ ಖಾನ್!
ಇದರ ನಡುವೆ ಸಂಖ್ಯೆ ಇಳಿಕೆಯ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಶಿಕ್ಷಣದ ಗುಣಮಟ್ಟ ಕುಸಿದಿದ್ದು, ಈ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ನೀಡುವತ್ತ ಸರ್ಕಾರ ಗಮನಹರಿಸಬೇಕು ಎಂದು ಕಾಂಗ್ರೆಸ್ ಎಂಎಲ್ ಸಿ ದೀಪಕ್ ಸಿಂಗ್ ಹೇಳಿದ್ದಾರೆ.
ಮದರಸಾ ಶಿಕ್ಷಣವೇ ಇರಕೂಡದು: ಅಸ್ಸಾಂ ಸಿಎಂ ಶರ್ಮಾ ಪ್ರತಿಪಾದನೆ!
ಎಸ್‌ಪಿ ನಾಯಕ ಮನೋಜ್ ಪಾಂಡೆ ಮಾತನಾಡಿ, ಈ ಸಂಸ್ಥೆಗಳಿಗೆ ಮೀಸಲಿಟ್ಟ ಬಜೆಟ್ ಕಡಿಮೆಯಾಗಿದೆ. ಹಿಂದಿ, ಇಂಗ್ಲಿಷ್ ಅಥವಾ ಉರ್ದು ಯಾವುದೇ ಭಾಷೆಯ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.