Asianet Suvarna News Asianet Suvarna News

ಕಳಿಂಗ ವಿವಿಯಲ್ಲಿ ಶಾಲಾ ಮಕ್ಕಳಿಗೂ ಫುಟ್ಬಾಲ್‌ ಯೋಜನೆ ಜಾರಿ : ನವೀನ್‌ ಪಟ್ನಾಯಕ್‌ ಚಾಲನೆ!

*ಮಕ್ಕಳ ಕ್ರೀಡಾ ಸ್ಫೂರ್ತಿ ಉತ್ತೇಜನಕ್ಕಾಗಿ ಈ ಯೋಜನೆ
*ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ರಿಂದ ಚಾಲನೆ
*ಕ್ರೀಡೆ ಮೇಲಿನ ಹೂಡಿಕೆಯು ಯುವಕರ ಮೇಲಿನ ಹೂಡಿಕೆ ಎಂದ ಸಿಎಂ

CM Naveen Patnaik inaugurates FIFA Football For Schools in Bhubaneswar
Author
Bengaluru, First Published Oct 28, 2021, 7:22 AM IST

ಭುವನೇಶ್ವರ(ಅ. 28): ಮಕ್ಕಳ ಕ್ರೀಡಾಸ್ಫೂರ್ತಿಗೆ ಉತ್ತೇಜನ ಮತ್ತು ಕ್ರೀಡಾ ಕೌಶಲ್ಯಗಳನ್ನು ಶೋಧಿಸಲು ಕಳಿಂಗ ಸಾಮಾಜಿಕ ವಿಜ್ಞಾನ ಸಂಸ್ಥೆಯು (kalinga institute of social Sciences) ಫಿಫಾ ಸಹಯೋಗದಲ್ಲಿ ವಿಶ್ವದಲ್ಲೇ ಮೊಟ್ಟಮೊದಲ ಬಾರಿ ಶಾಲಾ ಮಕ್ಕಳಿಗೂ ಫುಟ್ಬಾಲ್‌ ಕಾರ್ಯಕ್ರಮ ಯೋಜನೆ ಜಾರಿಗೆ ತಂದಿದೆ. ಕಳಿಂಗ ವಿವಿಯಲ್ಲಿ ಬುಧವಾರ ವರ್ಚುವಲ್ ಆಗಿ ನಡೆದ ಈ ಯೋಜನೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ (Naveen Patnaik)ಚಾಲನೆ ನೀಡಿದರು.

 

 

 

ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಕ್ರೀಡೆ ಮೇಲಿನ ಹೂಡಿಕೆಯು ಯುವಕರ ಮೇಲಿನ ಹೂಡಿಕೆ ಆಗಿದೆ. ಯುವಕರ ಮೇಲಿನ ಹೂಡಿಕೆ ಭವಿಷ್ಯದ ಮೇಲಿನ ಹೂಡಿಕೆ ಆಗಿದೆ. ಶಿಕ್ಷಣ ವ್ಯವಸ್ಥೆಯಲ್ಲೇ ಫುಟ್ಬಾಲ್‌ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಈ ಯೋಜನೆಯಿಂದ ಬೇರಿನಲ್ಲೇ ಮಕ್ಕಳಿಗೆ ಫುಟ್ಬಾಲ್‌ ತಲುಪಲು ಅನುಕೂಲವಾಗಿದೆ’ ಎಂದರು.

ಹಾಕಿಯಿಂದ ಲಾಭವಿಲ್ಲ, ದೂರ ಮಾಡಿದ್ದ ತಂಡಕ್ಕೆ ಆಪತ್ಭಾಂದವನಾಗಿದ್ದು ಪಟ್ನಾಯಕ್!

ಕಳಿಂಗ ವಿವಿ ಸಂಸ್ಥಾಪಕ ಡಾ. ಅಚ್ಯುತಾ ಸಮಂತಾ (Achyuta Samanta) ಅವರು ಪ್ರತಿಕ್ರಿಯಿಸಿ ‘ಶಾಲಾ ವಿದ್ಯಾರ್ಥಿಗಳಲ್ಲಿ ಫುಟ್ಬಾಲ್‌ ಬಗ್ಗೆ ಉತ್ತೇಜಿಸುವ ವಿಶ್ವದ ಈ ಮೊದಲನೇ ಯೋಜನೆ ಜಾರಿಗಾಗಿ ಕಳೆದ ಒಂದೂವರೆ ವರ್ಷದಿಂದ ಫಿಫಾ ಅಧ್ಯಕ್ಷರ ಜತೆ ನಿರಂತರ ಸಂಪರ್ಕದಲ್ಲಿದ್ದೆವು ಎಂದರು. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫಿಫಾ (Fédération Internationale de Football Association) ಅಧ್ಯಕ್ಷ ಗಿಯಾನ್ನಿ ಇನ್‌ಫ್ಯಾಂಟಿನೋ (Gianni Infantino), ತಮ್ಮ ಕ್ರಾಂತಿಕಾರಿ ಯೋಜನೆಗಳ ಮುಖಾಂತರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ ಅಭಿನಂದನೆ ಸಲ್ಲಿಸಿದರು. 

ರಾಷ್ಟ್ರೀಯ ಈಜು: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಶ್ರೀಹರಿ ನಟರಾಜ್

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ. . FIFA ಅಕ್ಟೋಬರ್ 25 ರಿಂದ ರಾಜ್ಯದ ಶಾಲೆಗಳಿಂದ 100 ಫುಟ್‌ಬಾಲ್  ಶಿಕ್ಷಕರು ಮತ್ತು KIIT ಮತ್ತು KISS ನಿಂದ 100 ಫುಟ್‌ಬಾಲ್ ಆಟಗಾರರಿಗೆ ತರಬೇತಿ ನೀಡುತ್ತಿದೆ. ಈ ಮೂಲಕ ಫುಟ್‌ಬಾಲ್  ಶಿಕ್ಷಕರು ಮತ್ತು ಆಟಗಾರರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಲಾಗುತ್ತಿದೆ.

ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ!

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಫೆಬ್ರುವರಿ 16 2021 ರಂದು ಸುಂದರ್‌ಗಢ್ ಜಿಲ್ಲೆಯಲ್ಲಿ ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಮಾಡಿದ್ದರು   ಈ ಕ್ರೀಡಾಂಗಣಕ್ಕೆ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೆಸರನ್ನು ಇಡಲಾಗುವುದು ಮತ್ತು ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದ ಜೊತೆಗೆ ಪುರುಷರ ಹಾಕಿ ವಿಶ್ವಕಪ್-2023 ಅನ್ನು ಜಂಟಿಯಾಗಿ ಆಯೋಜಿಸಲಿದೆ. 20,000 ಆಸನ ಸಾಮರ್ಥ್ಯದೊಂದಿಗೆ, ಹೊಸ ಕ್ರೀಡಾಂಗಣವು ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯ (Biju Patnaik University of Technology ) ಕ್ಯಾಂಪಸ್‌ನಲ್ಲಿ ನಿರ್ಮಾಣವಾಗಲಿದೆ.

Follow Us:
Download App:
  • android
  • ios