Bengal Politics ಸಂಕಷ್ಟದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ದೀದಿ ಕುಟುಂಬಸ್ಥರ ವಿರುದ್ಧ ದಿಟ್ಟ ಹೆಜ್ಜೆ ಇಟ್ಟ ಹೈಕೋರ್ಟ್!
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಮತಾ ಮಂತ್ರಿಗಳ ಮೇಲೆ ದಾಳಿ ಹಾಗೂ ಬಂಧನ ನಡೆಯುತ್ತಿದೆ. ಇದೀಗ ಸ್ವತಃ ಮಮತಾ ಬ್ಯಾನರ್ಜಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋಲ್ಕತಾ(ಸೆ.06): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಮಂತ್ರಿಗಳ ಮೇಲೆ ಭ್ರಷ್ಟಾಚಾರ ಆರೋಪ ಹೆಚ್ಚಾಗುತ್ತಿದೆ. ಇದರ ನಡುವೆ ಇದೀಗ ಮಮತಾ ಬ್ಯಾನರ್ಜಿ ಕುಟುಂಬಸ್ಥರ ವಿರುದ್ಧ ಕೋಲ್ಕತಾ ಹೈಕೋರ್ಟ್ ಮಹತ್ವದ ನಿರ್ದೇಶ ನೀಡಿದೆ. ಮಮತಾ ಬ್ಯಾನರ್ಜಿ ಕುಟುಂಬಸ್ಥರ ಆಸ್ತಿಯಲ್ಲಿ ಗಣನೀಯ ಏರಿಕೆಯಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. 6 ಕುಟಂಬಸ್ಥರು ಮುಂದಿನ 4 ವಾರಗಳಲ್ಲಿ ಆಸ್ತಿ, ಆದಾಯ ಸೇರಿದಂತೆ ಎಲ್ಲಾ ವಿವರಗಳ ಅಫಿಡವಿಟ್ ಸಲ್ಲಿಸಲು ಕೋರ್ಟ್ ಸೂಚಿಸಿದೆ. ಸಾಮಾಜಿಕ ಕಾರ್ಯಕರ್ತ ಅಜಿತ್ ಮುಂಜುಂದಾರ್ ಈ ಕುರಿತು ಹೈಕೋರ್ಟ್‌ಗೆ ದೂರು ನೀಡಿದ್ದರು. ಹೈಕೋರ್ಟ್‌ನಲ್ಲಿ ಅಜಿತ್ ಮುಜುಂದಾರ್ ಪರ ಬಿಜೆಪಿ ನಾಯಕ ಹಾಗೂ ಖ್ಯಾತ ವಕೀಲ ತರುಣ್‌ಜ್ಯೋತಿ ತಿವಾರಿ ವಾದಿಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ(West Bengal CM) ಕುಟುಂಬದ 6 ಸದಸ್ಯರ ಆಸ್ತಿಯಲ್ಲಿ ಭಾರಿ ಏರಿಕೆಯಾಗಿದೆ. ಹಲವು ಆಸ್ತಿಗಳನ್ನು ಖರೀದಿದ್ದಾರೆ. ಅಲ್ಪ ಸಮಯದಲ್ಲಿ ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆಗಳು ಹಲವು ಬಾರಿ ಎದ್ದಿದೆ. ಈ ಕುರಿತು ಅಜಿತ್ ಮುಜುಂದಾರ್ ಕೋರ್ಟ್‌ಗೆ(High Court) ದೂರು ನೀಡಿದ್ದರು. ಎರಡು ವಾರಗಗಳಲ್ಲಿ ಅಫಿಡವಿತ್ ಸಲ್ಲಿಸಲು ಕೋರ್ಟ್ ಸೂಚನೆ ನೀಡಬೇಕು ಎಂದು ಅಜಿತ್ ಮುಜುಂದಾರ್ ಮನವಿ ಮಾಡಿದ್ದರು. ಈ ಕುರಿತು ವಿಚಾರೆ ನಡೆಸಿದ ಮುಖ್ಯ ನ್ಯಮೂರ್ತಿ ಪ್ರಕಾಶ್ ಶ್ರೀವಾತ್ಸವ್ ಹಾಗೂ ಜಸ್ಟೀಸ್ ರಾಜಶ್ರೀ ಭಾರದ್ವಾಜ ಅವರಿದ್ದ ದ್ವಿಸದಸ್ಯ ಪೀಠ ಮಹತ್ವದ ನಿರ್ದೇಶ ನೀಡಿದೆ.
ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!
ನಾಲ್ಕು ವಾರದಲ್ಲಿ ಮಮತಾ(Mamata Banerjee) ಕುಟುಂಬಸ್ಥರು(Didi Family Members) ಆಸ್ತಿ ವಿವರ ಸಲ್ಲಿಸಲು ಕೋರ್ಟ್ ಸೂಚಿಸಿದೆ. ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ. ಮಮತಾ ಬ್ಯಾನರ್ಜಿಯ ಕುಟುಂಬಸ್ಥರಾದ ಅಜಿತ್ ಬ್ಯಾನರ್ಜಿ, ಅಮಿತ್ ಬ್ಯಾನರ್ಜಿ, ಸಮೀರ್ ಬ್ಯಾನರ್ಜಿ, ಸ್ವಪನ್ ಬ್ಯಾನರ್ಜಿ, ಗಣೇಶ್ ಬ್ಯಾನರ್ಜಿ ಹಾಗೂ ಕಾಜ್ರಿ ಬ್ಯಾನರ್ಜಿ ಇದೀಗ ಕೋರ್ಟ್‌ಗೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕಿದೆ.
ಕಲ್ಲಿದ್ದಲು ಅಕ್ರಮ ಕೇಸಲ್ಲಿ ಮಮತಾ ಸೋದರಳಿಯ ಅಭಿಷೇಕ್‌ಗೆ ಇಡಿ ಸಮನ್ಸ್
ಕಲ್ಲಿದ್ದಲು ಕಳ್ಳಸಾಗಣೆ ಆರೋಪದ ಪ್ರಕರಣದಲ್ಲಿ ಸೆ.5ರಂದು ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ಟಿಎಂಸಿ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಜೊತೆಗೆ ಅಭಿಷೇಕ್ ಬ್ಯಾನರ್ಜಿ ಅತ್ತಿಗೆ ಮೆನೋಕಾ ಗಂಭೀರ್‌ಗೂ ಅಂದೇ ವಿಚಾರಣೆಗೆ ಆಗಮಿಸಲು ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಅಕ್ರಮ ಹಣ ವರ್ಗಾವಣೆ ಕುರಿತು ಇ.ಡಿ. ತನಿಖೆ ನಡೆಸುತ್ತಿದ್ದರೆ, ಸಿಬಿಐ ಕ್ರಿಮಿನಲ್ ಕೋನದಿಂದ ತನಿಖೆ ನಡೆಸುತ್ತಿದೆ.
ದೀದಿ ವಿರುದ್ಧ ಬಿಜೆಪಿ ವಾಗ್ದಾಳಿ: ಇಷ್ಟು ಹಣ ಎಲ್ಲಿಂದ ಬಂತು ಎಂದು ಟಿಎಂಸಿ ಹೇಳಲಿ
ಗೋವು ಕಳ್ಳಸಾಗಣೆ ಕೇಸಲ್ಲಿ ದೀದಿ ಆಪ್ತ ಮಂಡಲ್ ಸೆರೆ
ಬಾಂಗ್ಲಾದೇಶಕ್ಕೆ ಅಕ್ರಮ ಗೋವು ಕಳ್ಳಸಾಗಣೆ ಪ್ರಕರಣ ಸಂಬಂಧ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅತಾಪ್ತ ಅನುಬ್ರತ್ ಮಂಡಲ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ. ಶಿಕ್ಷಕರ ನೇಮಕಾತಿ ಹಗರಣದಲ್ಲಿ ದೀದಿ ಆಪ್ತ ಪಾರ್ಥ ಚಟರ್ಜಿ ಬಳಿಕ ಮತ್ತೊಬ್ಬ ಆಪ್ತ ಇದೀಗ ಬಂಧನಕ್ಕೆ ಒಳಗಾಗಿದ್ದಾರೆ.