Asianet Suvarna News Asianet Suvarna News

ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ 3ನೇ ತರಗತಿ ಬಾಲಕಿ ಹೃದಯಾಘಾತದಿಂದ ಸಾವು!

ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ 3ನೇ ತರಗತಿ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆ ಮತ್ತೆ ಹಾರ್ಟ್ ಆ್ಯಟಾಕ್ ಆತಂಕ ಹೆಚ್ಚಿಸಿದೆ.

Class 3 Girl collapse and dies school ground due to cardiac arrest Lucknow ckm
Author
First Published Sep 14, 2024, 10:04 PM IST | Last Updated Sep 14, 2024, 10:04 PM IST

ಲಖನೌ(ಸೆ.14) ಚಿಕ್ಕ ಮಕ್ಕಳು, ಯುವ ಸಮೂಹ ಸೇರಿದಂತೆ ಬಹುತೇಕರು ಇದೀಗ ಹೃದಯಾಘಾತ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಕಳೆದ 4 ವರ್ಷದಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಾಗುತ್ತಿದೆ ಅನ್ನೋ ವರದಿ ಆತಂಕ ತರಿಸುತ್ತಿದೆ. ಇದರ ಬೆನ್ನಲ್ಲೇ 3ನೇ ತರಗತಿ ಬಾಲಕಿ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಈ ಘಟನೆ ಹಾರ್ಟ್ ಆ್ಯಟಾಕ್ ಕುರಿತು ಆತಂಕ ಹೆಚ್ಚಿಸಿದೆ. 

ಶಾಲಾ ಪ್ರಿನ್ಸಿಪಾಲ್ ನೀಡಿದ ಮಾಹಿತಿ ಪ್ರಕಾರ, 3ನೇ ತರಗತಿಯಲ್ಲಿ ಓದುತ್ತಿರುವ ಮಾನ್ವಿ ಸಿಂಗ್ ತರಗತಿಯ ಇತರ ವಿದ್ಯಾರ್ಥಿಗಳ ಜೊತೆ ಶಾಲಾ ಮೈದಾನದಲ್ಲಿ ಆಟವಾಡಿದ್ದಾರೆ. ಈ ವೇಳೆ ಏಕಾಏಕಿ 9 ವರ್ಷದ ಮಾನ್ವಿ ಸಿಂಗ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ.ಇತರ ವಿದ್ಯಾರ್ಥಿಗಳು ಮಾನ್ವಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಕೆಲ ವಿದ್ಯಾರ್ಥಿಗಳ ಓಡೋಡಿ ಶಾಲೆಗೆ ಆಗಮಿಸಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ದೇಶಭಕ್ತಿ ಗೀತೆ ಹಾಡುತ್ತಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಮಹಿಳೆ, ಸೆರೆಯಾಯ್ತು ಕೊನೆ ಕ್ಷಣ!

ಶಾಲಾ ಸಿಬ್ಬಂದಿಗಳು ಹಾಗೂ ಶಿಕ್ಷಕರು ತಕ್ಷಣವೇ ಸ್ಛಳೀಯ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಆಸ್ಪತ್ರೆಗೆ ಧಾವಿಸಿದ ಪೋಷಕರು ಮಲ್ಟಿಸ್ಪೆಷಾಲಿಟಿ ಚಂದನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಬಾಲಕಿ ಮಾನ್ವಿ ಮೃತಪಟ್ಟಿದ್ದಾಳೆ. ಪರಿಶೀಲನೆ ನಡೆಸಿದ ವೈದ್ಯರು ಹೃದಯಾಘಾತದಿಂದ ಬಾಲಕಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆ ದಾಖಲಿಸಿ ವೈದ್ಯರಿಂದ ವರದಿ ಪಡೆದಿದ್ದಾರೆ.

ಚುರುಕಿನ ವಿದ್ಯಾರ್ಥಿ, ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಮಾನ್ವಿ ದಿಢೀರ್ ಹೃದಯಾಘಾತಕ್ಕೆ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ. ವಿದ್ಯಾರ್ಥಿ ನಿಧನದಿಂದ ಶಾಲೆಯಲ್ಲಿ ಶೋಕಾಚರಣೆ ಆಚರಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದಾರೆ.  ಇತ್ತ ಪೋಷಕರು ಮಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. 

ಚಿಕ್ಕ ಮಕ್ಕಳಲ್ಲೂ ಹೃದಾಯಾಘತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಆರೋಗ್ಯದ ಕುರಿತು ಹಲವು ಸವಾಲುಗಳನ್ನೇ ಮುಂದಿಟ್ಟಿದೆ. ಆರೋಗ್ಯ ಕಾಪಾಡಿಕೊಂಡವರೇ ಗಂಭೀರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ, ಹೃದಯಾಘಾತ ಸಮಸ್ಯೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಇದೇ ರೀತಿ ಹಲವು ಘಟನೆಗಳು ವರದಿಯಾಗಿದೆ. ಜಿಮ್ ಅಭ್ಯಾಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ ಹಲವು ಘಟನೆಗಳು ನಡೆದಿದೆ. ಕುಳಿತಲ್ಲೇ ಹೃದಯಾಘಾತಕ್ಕೆ ಬಲಿಯಾದ ವಿಡಿಯೋಗಳು ಸುದ್ದಿಯಾಗಿದೆ. ಈ ರೀತಿ  ನಡೆದಿರುವ ಘಟನೆಗಳು ಆರೋಗ್ಯ ಕುರಿತ ಆತಂಕ ಹೆಚ್ಚಿಸುತ್ತಿದೆ. 

ಪೆಟ್ರೋಲ್ ತುಂಬಿಸಲು ಕಾಯುತ್ತಿದ್ದ ಶಿಕ್ಷಕನಿಗೆ ದಿಢೀರ್ ಹೃದಯಾಘಾತ, ಸಿಸಿವಿಯಲ್ಲಿ ಕೊನೆ ಕ್ಷಣ ಸೆರೆ!

Latest Videos
Follow Us:
Download App:
  • android
  • ios