ದೇಶಭಕ್ತಿ ಗೀತೆ ಹಾಡುತ್ತಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಮಹಿಳೆ, ಸೆರೆಯಾಯ್ತು ಕೊನೆ ಕ್ಷಣ!

ಕುರ್ಚಿಯಲ್ಲಿ ಕುಳಿತು ದೇಶಭಕ್ತಿ ಗೀತೆ ಹಾಡುತ್ತಿದ್ದಂತೆ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದರೆ. ಕೊನೆ ಕ್ಷಣದ ವರೆಗೂ ಹಾಡಿದ ಮಹಿಳೆ ಏಕಾಏಕಿ ಕುಳಿತಲ್ಲೇ ಪ್ರಾಣ ಬಿಟ್ಟಿದ್ದಾರೆ. 

Woman dies of heart attack while singing patriotic song final moments captured ckm

ಕಚ್(ಆ.17) ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ. ದೇಶದ ಮೂಲೆ ಮೂಲೆಯಲ್ಲಿ ತಿರಂಗ ಹಾರಾಡಿದೆ. ಜೊತೆಗೆ ಹಲವು ದೇಶಭಕ್ತಿ ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ಇದರ ನಡುವೆ ದಾರುಣ ಘಟನೆಯೊಂದು ವರದಿಯಾಗಿದೆ. ದೇಶಭಕ್ತಿ ಗೀತೆ ಹಾಡುತ್ತಿದ್ದ ಮಹಿಳೆ ಕುರ್ಚಿಯಲ್ಲಿ ಕುಳಿತಲ್ಲೇ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಈ ಘಟನೆ ಗುಜರಾತ್‌ನ ವಡೋದರ ಪ್ರಮುಖ ಸ್ವಾಮಿ ನಗರದಲ್ಲಿ ನಡೆದಿದೆ.

ವೃಕ್ಷ ಮಿತ್ರ ಸಂಸ್ಥೆ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ, ದೇಶಭಕ್ತಿ ಕುರಿತ ಘಟನೆಗಳು, ಗೀತೆಗಳು ಸೇರಿದಂತೆ ಹಲವು ಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಾಯಕಿ ಆರತಿ ಬೆನ್ ರಾಥೋಡ್ ಎಲ್ಲರ ಜೊತೆ ಸಂಭ್ರಮಿಸಿದ್ದಾರೆ.

ಜುಂಬಾ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಇತರ ಸಾಂಸ್ಕೃತಿ ಕಾರ್ಯಕ್ರಮಗಳ ನಡುವೆ ಆರತಿ ಬೆನ್ ದೇಶಭಕ್ತಿ ಗೀತೆ ಕಾರ್ಯಕ್ರಮ ಆರಂಭಗೊಂಡಿತ್ತು. ಸಂಗೀತ, ತಬಲ ಸೇರಿದಂತೆ ಇತರ ಪರಿಕರಗಳೊಂದಿಗೆ ಆರತಿ ಬೆನ್ ರಾಥೋಡ್ ಧೇಶಬಕ್ತಿ ಗೀತೆ ಹಾಡಲು ಆರಂಭಿಸಿದ್ದಾರೆ. ಕುರ್ಚಿಯಲ್ಲಿ ಕುಳಿತುಕೊಂಡು ಗೀತೆ ಹಾಡಲು ಆರಂಭಿಸಿದ್ದಾರೆ. ಆದರೆ ಕೆಲ ಹೊತ್ತಲ್ಲೇ ಆರತಿ ಬೆನ್ ರಾಥೋಡ್‌ಗೆ ತೀವ್ರ ಹೃದಯಾಘಾತವಾಗಿದೆ. ಕೈಯಲ್ಲಿದ್ದ ಮೈಕ್ ಕೆಳಕ್ಕೆ ಬಿದ್ದಿದೆ. ಆರತಿ ಬೆನ್ ರಾಥೂಡ್ ಕೂಡ ಕುಸಿದಿದ್ದಾರೆ. ಆದರೆ ಕೆಳಕ್ಕೆ ಬಿದ್ದಿಲ್ಲ. ಕುರ್ಚಿಯಲ್ಲೇ ಪ್ರಾಣ ಬಿಟ್ಟಿದ್ದಾರೆ.

ನೆರೆದಿದ್ದ ಆಯೋಜಕರು, ಇತರ ಸಿಬ್ಬಂದಿಗಳು ತಕ್ಷಣವೇ ಆಗಮಿಸಿ ವಾಹನದಲ್ಲಿ ಆರತಿ ಬೆನ್ ರಾಥೋಡ್ ಅವರನ್ನು ಸ್ಥಳೀಯ ಆಸ್ಪತ್ಪೆಗೆ ದಾಖಲಿಸಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಆರತಿ ಬೆನ್ ರಾಥೋಡ್ ಅವರ ಕೊನೆಯ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ದೇಶಭಕ್ತಿ ಗೀತೆ ಹಾಡುತ್ತಲೇ ಪ್ರಾಣ ಬಿಟ್ಟ ಮಹಿಳೆಗೆ ಸ್ಥಳೀಯರು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಭಿಕರು ಅಂತಿಮ ನಮನ ಸಲ್ಲಿಸಿದ್ದಾರೆ. 

ಮೆರವಣಿಗೆಯೊಂದಿಗೆ ಮಂಟಪಕ್ಕೆ ತೆರಳುತ್ತಿದ್ದ ವರನ ಬಂಧಿಸಿದ ಪೊಲೀಸ್, ಬಳಿಕ ನಡೆದಿದ್ದೇ ದುರಂತ!

ಈ ಘಟನೆ ಮತ್ತೆ ಆರೋಗ್ಯದ ಕುರಿತು ಆತಂಕ ಹುಟ್ಟಿಸುವಂತೆ ಮಾಡಿದೆ. ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ನಿಧನರಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಹಲವು ಅಧ್ಯಯನಗಳು ನಡೆಯುತ್ತಿದೆ. ಹೀಗಾಗಿ ಜನರು ತಮ್ಮ ಆರೋಗ್ಯದ ಕುರಿತು ಅತೀವ ಕಾಳಜಿ ವಹಿಸುವುದು ಅತ್ಯವಶ್ಯಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Latest Videos
Follow Us:
Download App:
  • android
  • ios