ನವದೆಹಲಿ(ನ.  30) ಜೆಎನ್‌ಯು ವಿದ್ಯಾರ್ಥಿ ಘಟಕದ ನಾಯಕಿ, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಶೆಹ್ಲಾ ರಶೀದ್ ತಂದೆ ಅಬ್ದುಲ್ ರಶೀದ್ ಶೋರಾ ತಮ್ಮ ಮಗಳಿಂದಲೇ ಜೀವ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಡಿಜಿಪಿಯನ್ನು ಭೇಟಿ ಮಾಡಿ ಲಿಖಿತ ದೂರು ನೀಡಿದ್ದಾರೆ.

ಮಗಳು ಶೆಹ್ಲಾಗೆ ನನ್ನ ಮೇಲೆ ದ್ವೇಷ ಸಾಧಿಸಲು ಹಿರಿಯ ಮಗಳು ಅಸ್ಮಾ ರಶೀದ್. ಪತ್ನಿ ಜುಬೇದಾ ಶೋರಾ ಮತ್ತು ಸೆಕ್ಯೂರಿಟಿ ಗಾರ್ಡ್ ಶಕೀಬ್ ಅಹಮದ್ ಬೆಂಬಲವೂ ಇದೆ ಎಂದು ಆರೋಪಿಸಿದ್ದಾರೆ.

ಸೇನೆ ವಿರುದ್ಧ ಸದಾ ಮಾತನಾಡು ಶೆಹ್ಲಾ ಹೇಳುವುದು ಏನು?

ರಾಜಕಾರಣಕ್ಕೆ ಮಗಳ ಧುಮುಕಿದ ಮೇಲೆ ಬೆದರಿಕೆ ಹೆಚ್ಚಾಗಿದೆ. ಎರಡು ತಿಂಗಳ ಹಿಂದೆ ಜಹೂರ್ ವಾಟಾಲಿ ಎಂಬಾತನನ್ನು ಭಯೋತ್ಪಾದನೆಗೆ ಹಣ ನೀಡಿದ್ದ ಆರೋಪದಡಿ ಬಂಧನ ಮಾಡಲಾಗಿತ್ತು. 2017 ರಲ್ಲಿ ಇದೇ ಜಹೂರ್ ವಾಟಾಲಿ  ಮತ್ತು  ರಶೀದ್ ಎಂಜಿನಿಯರ್ (ಮಾಜಿ ಶಾಸಕ) ನನ್ನನ್ನು ಸನತ್ ನಗರದಲ್ಲಿರುವ ವಾಟಾಲಿಯ ನಿವಾಸಕ್ಕೆ ಕರೆದಿದ್ದರು.  ಆ ಸಂದರ್ಭ ಶೆಹ್ಲಾ  ಸಮಾಜಶಾಸ್ತ್ರದಲ್ಲಿ ಪಿಎಚ್‌ಡಿಯ ಕೊನೆಯ ಸೆಮಿಸ್ಟರ್‌ನಲ್ಲಿದ್ದಳು. ನಾವು ಭೇಟಿಯಾದ ವೇಳೆ ಅವರು ಜೆಕೆಪಿಎಂ ಪಾರ್ಟಿಯ  ಟ್ರೈಲರ್ ಅನ್ನು ನನ್ನ ಮುಂದೆ  ಇಟ್ಟರು.  ಅವರ ಮುಂದಿನ ತಂತ್ರಗಾರಿಕೆಗೆ ಶೆಹ್ಲಾ ರಶೀದ್ ಬೆಂಬಲ ಬೇಕು ಎಂದು ನನ್ನ ಬಳಿ ಕೇಳಿದ್ದರು ಎಂಬುದನ್ನು ಬಹಿರಂಗ ಮಾಡಿದ್ದಾರೆ.

ಅವರ ತಂತ್ರಗಾರಿಕೆಗೆ ನೆರವು ನೀಡಲುವುದು ಜತಗೆ ಶೆಹ್ಲಾ ಅವರನ್ನು ಇದಕ್ಕೆ ಒಪ್ಪಿಸಿದರೆ  3 ಕೋಟಿ ರೂ. ನೀಡುವ ಆಮಿಷ ಇಟ್ಟಿದ್ದರು ಎಂದ ಬಾಂಬ್ ಸ್ಫೋಟ ಮಾಡಿದ್ದಾರೆ.

ನನಗೆ ಅಲ್ಲಿಯೇ ಎಲ್ಲವೂ ಗೊತ್ತಾಗಿತ್ತು. ಇವರಿಗೆ ಹಣ ಅಕ್ರಮ ಮಾರ್ಗದಿಂದ ಬರುತ್ತಿದ್ದು ನಾನು ಮತ್ತು ಕುಟುಂಬ ಈ ಸಮಾಜದ್ರೋಹಿಗಳ ಜತೆ ಸೇರಬಾರದು ಎಂದು ಭಾವಿಸಿ ಶೆಹ್ಲಾಗೂ ಬೇಡ ಎಂದು ಹೇಳಿದ್ದೆ.

ನಾನು ಎಷ್ಟು ಹೇಳಿದರೂ ಕೇಳದೆ ನನ್ನ ಹೆಂಡತಿ ಜುಬೇದಾ ಮತ್ತು ಹಿರಿಯ ಮಗಳು ಅಸ್ಮಾ ಶೆಹ್ಲಾಗೆ ಸಪೋರ್ಟ್ ಮಾಡಿದರು.  ಶೆಹ್ಲಾ ಅವರ ಜತೆ ಕೈಜೋಡಿಸಿದರು. ಈ ನಡುವೆ ಶಕೀಬ್ ಅಹಮದ್ ಎನ್ನುವವ ಶೆಹ್ಲಾ ಜತೆ ಬಂದು ತಾನು ಆಕೆಯ ಸೆಕ್ಯೂರಿಟಿ ಗಾರ್ಡ್ ಎಂದು ಹೇಳಿಕೊಂಡು ರೈಫಲ್ ಹಿಡಿದುಕೊಂಡು ಓಡಾಡುತ್ತಿದ್ದ.

ಇದಾಗಿ ಒಂದು ವಾರದ ನಂತರ ದೆಹಲಿಯಿಂದ ಬಂದ ಮಗಳು ಶೆಹ್ಲಾ ನಾನು ಅವರ ಬೇಡಿಕೆಗೆ ಒಪ್ಪಿಕೊಂಡಿದ್ದೇನೆ. ಈಗ ಬಂದಿರುವ ಹಣದ ಡಬಲ್ ಇನ್ನು ಮುಂದೆ ಬರಲಿದೆ. ನೀವು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ವರಾತ ತೆಗೆದಳು. ಒಬ್ಬ ತಂದೆಯಾಗಿ ಮಗಳು ಸಮಾಜದ್ರೋಹಿಗಳ ಜತೆ ಕೈಜೋಡಿಸುವುದನ್ನು ನಿಲ್ಲಿಸಲು ಯತ್ನ ಮಾಡುತ್ತಲೇ ಬಂದೆ.

ನನಗೆ ನಿಧಾನವಾಗಿ ಗೊತ್ತಾಗುತ್ತಾ ಬಂತು. ನನ್ನ ಮನೆಯಲ್ಲಿಯೇ ಸಮಾಜದ್ರೋಹಿ ಚಟುವಟಿಕೆಗಳು ನಡೆಯಲು ಆರಂಭಿಸಿದವು. ಶೆಹ್ಲಾ ಸೆಕ್ಯೂರಿಟಿ ಎಂದು ಹೇಳಿಕೊಂಡಿದ್ದ ಶಕೀಬ್ ಒಂದು ದಿನ ಪಿಸ್ತೂಲ್ ತೋರಿಸಿ ನನಗೆ ಬೆದರಿಕೆ ಹಾಕಿದ. ನನಗೆ ಮನೆ ಬಿಟ್ಟು ಹೋಗುವಂತೆ ಧಮ್ಕಿ ಹಾಕಲಾಯಿತು.

ನನ್ನನ್ನು ಹೇಗಾದರೂ ಮಾಡಿ ಸಿಕ್ಕಿಹಾಕಿಸಬೇಕು ಎಂದು ಸಂಚು ಮಾಡಿ ನನ್ನ ಮೇಲೆಯೇ ಡೊಮೆಸ್ಟಿಕ್ ವಯಲನ್ಸ್ ದೂರು ನೀಡಿದರು.  ನನಗೆ ನನ್ನ ಮನೆಗೆ ಪ್ರವೇಶ ಇಲ್ಲದ ಸ್ಥಿತಿ ನಿರ್ಮಾಣ ಆಯಿತು. ನ್ಯಾಯಾಲಯ ಸಹ ಕೆಲ ಷರತ್ತುಗಳನ್ನು ವಿಧಿಸಿತು. ಮತ್ತೆ ನಾನು ಮನೆಗೆ ಹೋದಾಗ ಬೆದರಿಕೆ ಹಾಕಲಾಯಿತು.

ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದು ನನ್ನ ಪ್ರಾಣಕ್ಕೆ ಮೇಲಿಂದ ಮೇಲೆ ಬೆದರಿಕೆ ಬರುತ್ತಿದ್ದು ರಕ್ಷಣೆ ಕೊಡಬೇಕು. ಶಕೀಬ್ ಮತ್ತು ಆತನ ಸಹಚರರ ಮೇಲೆ ತನಿಖೆ ಆಗಬೇಕು. ಇವರೆಲ್ಲರ ಇಮೇಲ್ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.