ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿಸಿದ ಆರೋಪ ಹೊತ್ತಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಎನ್ಐಎ ತನಿಖೆಯ ಭೀತಿಯಿಂದ ತಮ್ಮ ಸಹ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ. ಆದರೆ, ಟ್ರೋಲ್ ಆದ ಬಳಿಕ ಸ್ಪಷ್ಟನೆ ನೀಡಿರುವ ಅವರು, ನಾವೆಲ್ಲರೂ ಸೇರಿಯೇ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾರೆ.
ಭಾರತದಲ್ಲಿ ಶಿಕ್ಷಣ ಸುಧಾರಣೆ ಮಾಡುತ್ತೇನೆ ಎಂದು ನೆಪ ಹೇಳಿಕೊಂಡು ಅಮೆರಿಕದಿಂದ ಬಂದು ದೆಹಲಿಯ ಜಂತರ್ಮಂತರ್ನಲ್ಲಿ ಕೆಲ ತಿಂಗಳ ಹಿಂದೆ ಹಿಂಸಾಚಾರಕ್ಕೆ ಕಾರಣವಾಗಿ, ಈಗ SIR ನೆಪದಲ್ಲಿ ಇನ್ನೊಂದು ಗದ್ದಲ ಸೃಷ್ಟಿಸುವ ಹುನ್ನಾರ ಮಾಡುವ ಗಂಭೀರ ಆರೋಪ ಹೊತ್ತ ಅಭಿಜೀತ್ ದೀಪ್ಕೆ ಈಗ ಯೂಟರ್ನ್ ಹೊಡೆದಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶಿಕ್ಷಣ ಸುಧಾರಣೆ ಹೆಸರಿನಲ್ಲಿ Gen Zಗಳಿಂದ ನಡೆಯುತ್ತಿರುವ ಹಿಂಸಾಚಾರ, ಇಡೀ ದೇಶಕ್ಕೆ ಬೆಂಕಿ ಇಟ್ಟು ಮಜ ನೋಡುತ್ತಿರುವ ಕೆಲವೊಂದು ಶಕ್ತಿಗಳಂತೆಯೇ ಭಾರತದಲ್ಲಿಯೂ Gen Zಗಳ ತಲೆಗೆ ಇಲ್ಲಸಲ್ಲದ್ದನ್ನು ತುಂಬಿ ದೊಡ್ಡ ಷಡ್ಯಂತ್ರ ಮಾಡಲು ಕೆಲವೊಂದು ಶಕ್ತಿಗಳು ಹೊಂಚು ನಡೆಸುತ್ತಿರುವುದು ಭಾರತದ ಇಂಟಲಿಜೆನ್ಸ್ಗೆ ತಿಳಿದೇ ದೆಹಲಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ಜಿರಳೆಗಳಿಗೆ ಹೆದರಿತು ಎಂದು ಪೋಸ್ಟ್ ಹಾಕಿಕೊಂಡು ಸಂತೋಷ ಪಟ್ಟವರು ಹಲವರು. ಆದರೆ ಒಂದು ವೇಳೆ ಸರ್ಕಾರ ಪ್ರತಿಭಟನೆಗೆ ಅವಕಾಶ ಕಲ್ಪಿಸಿದ್ದೇ ಆದರೆ, ಭಾರತ ರಣರಂಗವಾಗುತ್ತಿತ್ತು ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದರ ನಡುವೆಯೇ, ಭಾರತದಲ್ಲಿ ಸುಧಾರಣೆ ಆಗಬೇಕು ಎಂದು ಬಂದಿರೋ ಅಭಿಜೀತ್ ದೀಪ್ಲೆ ಯಾಕೋ ಈಗ ಸ್ವಲ್ಪ ಯೂ-ಟರ್ನ್ ಹೊಡೆದ್ರಾ ಎನ್ನುವ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ, ದೆಹಲಿಯಲ್ಲಿ ನಡೆದ ಗಲಭೆಯ ವಿಚಾರಣೆಯನ್ನು ಇದೀಗ ದೆಹಲಿಯ ಕ್ರೈಂಬ್ರ್ಯಾಂಚ್ ಕೈಗೆತ್ತಿಕೊಂಡಿದೆ. ಅಗತ್ಯ ಬಿದ್ದರೆ ರಾಷ್ಟ್ರೀಯ ತನಿಖಾ ಸಂಸ್ಥೆ- NIA ನಡೆಸಲಿದೆ. ಹೀಗೇನಾದರೂ ಆದರೆ ಈ ಪ್ರತಿಭಟನಾಕಾರರ ಸಂಪೂರ್ಣ ಜಾತಕ ಹೊರಕ್ಕೆ ಬರಲಿದೆ. ಇವರಿಗೆ ಫಂಡಿಂಗ್ ಎಲ್ಲಿಂದ ನಡೆಯುತ್ತಿದೆ ಎನ್ನುವುದರಿಂದ ಹಿಡಿದು, ಇವರ ಉದ್ದೇಶವೇನು ಎನ್ನುವವರೆಗೆ ಎಲ್ಲವೂ ಬಯಲಾಗಿದೆ. ಇದೇ ಕಾರಣಕ್ಕೇನೇ ಈಗ ಕಾಕ್ರೋಚ್ ಜನತಾ ಪಕ್ಷ (CJP) ಸಂಸ್ಥಾಪಕ, ಇಡೀ ಪ್ರತಿಭಟನೆಯ ಮಾಸ್ಟರ್ಮೈಂಡ್ ಅಭಿಜೀತ್ ದೀಪ್ಕೆ ವಿಡಿಯೋಒಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಪ್ರತಿಭಟನೆಯ ಹಿಂದಿರುವುದು ನನಗಿಂತ ಹೆಚ್ಚಾಗಿ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಎಂದು ಹೇಳಿದ್ದಾರೆ.'
ದೀಪ್ಕೆ ಯೂ-ಟರ್ನ್!
ವಿಡಿಯೋದಲ್ಲಿ ದೀಪ್ಕೆ, ನಾನೇನಿದ್ದರೂ ಅವರು ಹೇಳಿದಂತೆ ಕೇಳಿದೆ. ಅವರ ಆದೇಶ ಫಾಲೋ ಮಾಡಿದೆಯಷ್ಟೇ. ನಾನು ನಿಜವಾಗಿಯೂ ಹೇಳುತ್ತಿದ್ದೇನೆ. ಅವರಿಬ್ಬರ ಆರ್ಡರ್ ಫಾಲೋ ಮಾಡುವುದೇ ನನ್ನ ಕೆಲಸವಾಗಿತ್ತು. ಆದರೆ ಎಲ್ಲರಿಗೂ ನಾನೇ ನಾಯಕ ಎಂದು ಎನ್ನಿಸುತ್ತಿದೆ. ಆದರೆ ಅಸಲಿಗೆ ಹಾಗಲ್ಲ. ಅವರಿಗೆ ನನಗಿಂತಲೂ ಚೆನ್ನಾಗಿ ಗೊತ್ತಿದೆ ಎನ್ನುವ ಮೂಲಕ ಇಡೀ ಘಟನೆಯನ್ನು ಅವರ ಮೇಲೆ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಭಾರಿ ಟ್ರೋಲ್ ಆಗುತ್ತಿದೆ. ಇದ್ಯಾವಾಗ ಈ ಪರಿ ಟ್ರೋಲ್ ಆಯಿತೋ, ದೀಪ್ಕೆ ಇದಕ್ಕೆ ಸ್ಪಷ್ಟನೆ ನೀಡಿ, ನಾನು ಹೇಳಿದ್ದನ್ನುತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ನಾನು ಅವರಿಬ್ಬರ ಮೇಲೆ ಗೂಬೆ ಕೂಡ್ರಿಸುತ್ತಿಲ್ಲ. ಅವರನ್ನು ಬಸ್ ಕೆಳಗೆ ತಳ್ಳಿ ನಾನು ಮಜಾ ನೋಡುತ್ತಿಲ್ಲ. ನಾವೆಲ್ಲರೂ ಸೇರಿಯೇ ಎಲ್ಲಾ ಪ್ಲ್ಯಾನ್ ಮಾಡಿದ್ದು ಎಂದು ಸಮಜಾಯಿಷಿ ಕೊಟ್ಟಿದ್ದಾರೆ!
ಸ್ಪಷ್ಟನೆ ಕೊಟ್ಟ ಲೀಡರ್
ಜೈಲಿನಲ್ಲಿರುವ ಸಹ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಸರಿಯಲ್ಲ. ಇಬ್ಬರೂ ನನಗಿಂತ "ಉತ್ತಮ ನಾಯಕರು ಮತ್ತು ಜನರು" ಎಂದು ಹೇಳಿದ್ದಾರೆ. ಅವರಿಬ್ಬರನ್ನೂ ಹೊಗಳುವುದು ಅವರಿಂದ ದೂರವಾಗುವ ಪ್ರಯತ್ನವಲ್ಲ, ಬದಲಿಗೆ ಹೆಮ್ಮೆಯ ವಿಷಯ. ನಾವು ಮೂವರು ಬಲವಾದ ಬಾಂಧವ್ಯವನ್ನು ಹಂಚಿಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿನ ಟೀಕೆಗಳಿಂದ ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. "ಸೌರವ್ ಮತ್ತು ಆಶು ನನಗಿಂತ ಉತ್ತಮ ನಾಯಕರು ಮತ್ತು ಕೇವಲ ನಾಯಕರಲ್ಲ, ಅವರು ನನಗಿಂತ ಉತ್ತಮ ಜನರು ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ" ಎಂದು ಅವರು ಹೇಳಿದರು, ಇಬ್ಬರು ಬುದ್ಧಿವಂತ ಮತ್ತು ನಿರ್ಣಾಯಕ ಸಹೋದ್ಯೋಗಿಗಳು ತಮ್ಮ ಪಕ್ಕದಲ್ಲಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದರು.
ದೀಪ್ಕೆ ಹೇಳಿದ ವಿಡಿಯೋ ಈ ಕೆಳಗಿನ ಲಿಂಕ್ನಲ್ಲಿದೆ:


