ನವದೆಹಲಿ[ನ.15]: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನವೆಂಬರ್ 17ರಂದು ನಿವೃತ್ತರಾಗಲಿದ್ದಾರೆ. ಹೀಗಿರುವಾಗ ಇಂದು ಶುಕ್ರವಾರ ಅವರ ವೃತ್ತಿ ಜೀವನದ ಕೊನೆಯ ದಿನ. ತಮ್ಮ ಹದಿಮೂರುವರೆ ತಿಂಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿಯಾಗಿ ಕಾರ್ಯ ನಿರ್ವಹಿಸಿರುವ ರಂಜನ್ ಗೊಗೋಯ್ 47 ಪ್ರಮುಖ ತೀರ್ಪು ಪ್ರಕಟಿಸಿದ್ದಾರೆ.

ಹೀಗಿರುವಾಗ ಕೆಲಸದ ಕೊನೆಯ ದಿನವಾದ ಇಂದು, ಶುಕ್ರವಾರ ಸಿಜೆಐ ರಂಜನ್ ಗೊಗೋಯ್ ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು

ನ್ಯಾ| ರಂಜನ್ ಗೊಗೋಯ್ ಇತ್ತೀಚೆಗಷ್ಟೇ ಅಯೋಧ್ಯೆ ಕೇಸ್, ಚೀಫ್ ಜಸ್ಟೀಸ್ ಕಚೇರಿಯನ್ನು RTI ವ್ಯಾಪ್ತಿಗೊಳಪಡಿಸುವುದು, ರಫೇಲ್ ಡೀಲ್, ಶಬರಿಮಲೆ ವಿವಾದ ಸೇರಿದಂತೆ ಇನ್ನುಳಿದ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಇವುಗಳಲ್ಲಿ ಹಲವಾರು ಪ್ರಕರಣದ ತೀರ್ಪನ್ನು ಐತಿಹಾಸಿಕವೆಂದು ಪರಿಗಣಿಸಲಾಗಿದೆ ಹಾಗೂ ಯಾವತ್ತಿಗೂ ನೆನಪುಇಸಿಕೊಳ್ಳಲಾಗುತ್ತದೆ. ಅಯೋಧ್ಯೆ ಬಹಳ ಹಳೆಯ ಹಾಗೂ ಬಹು ವಿವಾದಿತ ಪ್ರಕರಣವಾಗಿತ್ತು. ಆದರೆ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ, ಅತ್ಯಂತ ಸರಳ ಪರಿಹಾರ ನೀಡಿತು.

ತಮ್ಮ ಕೆಲಸದ ಅಂತಿಮ ದಿನವಾದ ಇಂದು ನ್ಯಾ| ರಂಜನ್ ಗೊಗೋಯ್ ಕೆಲ ಸಮಯ ತಮ್ಮ ಕಾರ್ಯಾಲಯದಲ್ಲಿದ್ದರು. ಪರಂಪರೆಯನ್ವಯ CJI ಗೊಗೋಯ್ ತಮ್ಮ ಉತ್ತರಾಧಿಕಾರಿ ಜಸ್ಟೀಸ್ ಎಸ್. ಎ ಬಾವ್ಡೆಯೊಂದಿಗೆ ಕೋರ್ಟ್ ರೂಂನಲ್ಲಿ ಕುಳಿತುಕೊಂಡಿದ್ದರು. ಮಾಧ್ಯಮಗಳ ವರದಿಯನ್ವಯ ಅವರು ಮೂರು ನಿಮಿಷಗಳಲ್ಲಿ 10 ಪ್ರಕರಣಗಳಿಗೆ ನೋಟಿಸ್ ಹೊರಡಿಸಿದ್ದಾರೆ. ಈ ವೇಳೆ ಕೆಲ ಪತ್ರಕರ್ತರು ಸಂದರ್ಶನ ನೀಡಲು ಮನವಿ ಮಾಡಿಕೊಂಡರಾದರೂ, ಅವರು ನಿರಾಕರಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಬಾರ್ ಎಸೋಸಿಯೇಷನ್ ಆಯೋಜಿಸಿರುವ ವಿದಾಯಕೂಟದಲ್ಲೂ ಮಾತನಾಡಲು ನಿರಾಕರಿಸಿದ್ದಾರೆ. 

ಹೇಗಿತ್ತು ರಂಜನ್ ಗೊಗೋಯ್ ಪಯಣ?

1954 ನವೆಂಬರ್ 18ರಂದು ಜನಿಸಿದ ಜಸ್ಟೀಸ್ ರಂಜನ್ ಗೊಗೋಯ್ 1978ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಟ್ಯಾಕ್ಸೇಷನ್, ಸಾಂವಿಧಾನಿಕ ಹಾಗೂ ಕಂಪೆನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ದೀರ್ಘ ಕಾಲ ಗುವಾಹಟಿ ಹೈಕೋರ್ಟ್ ನಲ್ಲಿ ವಕೀಲರಾಗಿ ವಾದಿಸಿದ್ದರು. ಹೀಗಿರುವಾಗ 2001ರ ಫೆಬ್ರವರಿ 28ರಂದು ಅವರನ್ನು ಗುವಾಹಟಿ ಹೈಕೋರ್ಟ್ ನಲ್ಲಿ ಖಾಯಂ ನ್ಯಾಯಧೀಶರಾಗಿ ನಿಯೋಜಿಸಲಾಯ್ತು. 2010ರ ಸಪ್ಟೆಂಬರ್ 9ರಂದು ಜಸ್ಟೀಸ್ ಗೊಗೋಯ್ ರನ್ನು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಯ್ತು. 2011ರ ಫೆಬ್ರವರಿ 12ರಂದು ಅವರನ್ನು ಇಲ್ಲಿನ ಮುಖ್ಯ ನ್ಯಾಯಧೀಶರನ್ನಾಗಿ ನೇಮಿಸಲಾಯ್ತು. ಇದಾದ ಬಳಿಕ 2012ರ ಏಪ್ರಿಲ್ 23ರಂದು ಅವರನ್ನು ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಆಯ್ಕೆ ಮಾಡಲಾಯ್ತು ಹಾಗೂ 2018ರ ಅಕ್ಟೋಬರ್ 3ರಂದು ಸುಪ್ರೀಂ ಕೋರ್ಟ್ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ಆಐ್ಕೆಯಾದರು.

ಈ ತೀರ್ಪುಗಳಿಗಾಗಿ ರಂಜನ್ ಗೊಗೋಯ್ ಯಾವತ್ತೂ ನೆನಪಿನಲ್ಲಿರುತ್ತಾರೆ

ಅಯೋಧ್ಯೆ ಪ್ರಕರಣ

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಖ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ಸಿಜೈ ರಂಜನ್ ಗೊಗೋಯ್ ನೇತೃತ್ವದ ಪಂಚಪೀಠ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸುವಂತೆ ತೀರ್ಪು ಪ್ರಕಟಿಸಿದೆ. ಇದರೊಂದಿಗೆ ಮಂದಿರ ನಿರ್ಮಿಸಲು ಟ್ರಸ್ಟ್ ಒಂದನ್ನು ಸ್ಥಾಪಿಸಬೇಕು ಹಾಗೂ ಕೇಂದ್ರ ಸರ್ಕಾರ ಮೂರು ತಿಂಗಳಿನೊಳಗೆ ಯೋಜನೆ ನಿರ್ಮಿಸಬೇಕು ಎಂದು ಆದೇಶಿಸಿದೆ. ಇನ್ನು ಸುನ್ನಿ ವಕ್ಫ್ ಬೋರ್ಡ್ ಗೆ 5 ಎಕರೆ ಪ್ರದೇಶ ನೀಡಲು ಆದೇಶಿಸಿದೆ.

ಶಬರಿಮಲೆ ವಿವಾದ

ಸುಪ್ರೀಂ ಕೋರ್ಟ್ ಶಬರಿಮಲೆ ದೇಗುಲಕ್ಕೆ ಸಂಬಂಧಿಸಿದಂತೆ ಮಹತ್ತರ ತೀರ್ಪು ಪ್ರಕಟಿಸುತ್ತಾ ಮಹಿಳೆಯ ಪ್ರವೇಶ ನಿರ್ಬಂಧಿಸಲು ಸದ್ಯ ನಿರಾಕರಿಸಿದೆ. ಇದರೊಂದಿಗೆ ಇದರ ವಿಚಾರರಣೆ ನಡೆಸಲು ಪ್ರಕರಣವನ್ನು  ವಿಸ್ಕೃತ ಪೀಠಕ್ಕೆ ವರ್ಗಾಯಿಸಿದೆ. ನ್ಯಾಯಮೂರ್ತಿಗಳ ಅಹಮತವಿಲ್ಲದ ಕಾರಣದಿಂದ ಈ ಪ್ರಕರಣವನ್ನು ವಿಸ್ಕೃತ ಪೀಠಕ್ಕೆ ವರ್ಗಾಯಿಸಲಾಗಿದೆ. 

ಚೀಫ್ ಜಸ್ಟೀಸ್ ಕಚೇರಿ RTI ವ್ಯಾಪ್ತಿಗೆ

ದೇಶದ ಪ್ರಧಾನ ನ್ಯಾಯಮೂರ್ತಿಯ ಕಚೇರಿ ಈಗ ಕಾನೂನು ವ್ಯಾಪ್ತಿಗೆ ಒಳಪಟ್ಟಿದೆ. ಹೀಗಿದ್ದರೂ ಖಾಸಗಿ ಹಾಗೂ ಗೌಪ್ಯತೆಯ ಅಧಿಕಾರ ಮುಂದುವರೆಯಲಿದೆ. ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ಈ ಕುರಿತು ತೀರ್ಪು ನೀಡಿದೆ. ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಪೀಠ ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಕೆಲ ಷರತ್ತುಗಳೊಂದಿಗೆ RTI ವ್ಯಾಪ್ತಿಗೆ ಸೇರುತ್ತದೆ ಎಂದು ತೀರ್ಪು ನೀಡಿತ್ತು.

ಸರ್ಕಾರಿ ಜಾಹೀರಾತುಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ನಿಷೇಧ

ಸಿಜೈ ರಂಜನ್ ಗೊಗೋಯ್ ಹಾಗೂ ಪಿ. ಸಿ ಘೋಷ್ ರವರ ನ್ಯಾಯಪೀಠ ಸರ್ಕಾರಿ ಜಾಹೀರಾತುಗಳಲ್ಲಿ ರಾಜಕೀಯ ನಾಯಕರ ಭಾವಚಿತ್ರವನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದ ಬಳಿಕ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ, ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವರನ್ನು ಹೊತುಪಡಿಸಿ ಬೇರಾವುದೇ ನಾಯಕ ಭಾವಚಿತ್ರ ಬಳಕೆಯನ್ನು ನಿಷೇಧಿಸಲಾಗಿದೆ.

ಭಾಷೆಗಳ ಮೇಲೆ ನ್ಯಾಯಾಲಯದ ತೀರ್ಪು

ಸುಪ್ರೀಂ ಕೋರ್ಟ್ ತೀರ್ಪನ್ನು ಹಿಂದಿ ಹಾಗೂ ಆಂಗ್ಲ ಭಾಷೆ ಹೊರತುಪಡಿಸಿ ಅನ್ಯ 7 ಭಾಷೆಗಳಲ್ಲಿ ನೀಡಬೇಕೆಂಬ ಆದೇಶ ನೀಡಿದ್ದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್. ಈ ತೀರ್ಪಿಗೂ ಮುನ್ನ ಕೇವಲ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಮಾತ್ರ ಸುಪ್ರೀಂ ತೀರ್ಪು ಪ್ರಕಟಿಸಲಾಗುತ್ತಿತ್ತು. ಹಲವಾರು ಬಾರಿ ಜನ ಸಾಮಾನ್ಯರು ಇದನ್ನು ತಿಳಿದುಕೊಳ್ಳಲು ಕಷ್ಟಪಡುತ್ತಿದ್ದರು. ಹೀಗಾಘಿ ಅನ್ಯ ಭಾಷೆಗಳಲ್ಲೂ ತೀರ್ಪು ಪ್ರಕಟಿಸಬೇಕೆಂಬ ಕೂಗು ಎದ್ದಿತ್ತು.