Asianet Suvarna News Asianet Suvarna News

ಕೊರೋನಾ ಹೆಚ್ಚಳ ಹಿನ್ನಲೆ; ವಿಮಾನದಲ್ಲಿ ಊಟ, ತಿಂಡಿ ರದ್ದು ಮಾಡಿದ ಸರ್ಕಾರ!

ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೂ ಮೀರಿ ವ್ಯಾಪಿಸುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳೇ ಸಿಗುತ್ತಿಲ್ಲ. ನಿಯಂತ್ರಣ ಮೀರುತ್ತಿರುವ ಕಾರಣ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‌ಡೌನ್ ಜಾರಿಯಾಗಿದೆ. ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಮಾನಯಾನ ಸಚಿವಾಲಯ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Civil Aviation Ministry bans on-board meals in domestic flights as Covid 19 cases rise ckm
Author
Bengaluru, First Published Apr 12, 2021, 6:37 PM IST

ನವದೆಹಲಿ(ಏ.12): ದೇಶದಲ್ಲಿ ಪ್ರತಿ ದಿನ 1.5 ಲಕ್ಷಕ್ಕೂ ಹೆಚ್ಚಿನ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ, ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ. ಇತ್ತ ಆಯಾ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿಯಮ ಜಾರಿಗೆ ತಂದಿದೆ. ಇದೀಗ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣದಲ್ಲಿ ನೀಡುವ ಆಹಾರವನ್ನು ಸ್ಥಗಿತಗೊಳಿಸಿದೆ. 

ಮಾಸ್ಕ್‌ ಧರಿಸದಿದ್ದರೆ ವಿಮಾನದಿಂದ ಹೊರಕ್ಕೆ, ಮಾತು ಕೇಳದವರಿಗೆ ಆಜೀವ ನಿಷೇಧ!

ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾಯಾನ ಸಚಿವಲಾಯ ಹೇಳಿದೆ. ದೇಶೀಯ ಹಾರಟ (ಡೊಮೆಸ್ಟಿಕ್)ದ ವಿಮಾನಗಳಲ್ಲಿ ಆಹಾರ ನೀಡುವಿಕೆ ರದ್ದು ಮಾಡಲಾಗಿದೆ.ಊಟ, ತಿಂಡಿ ಸೇರಿದಂತೆ ಆಹಾರ ನೀಡುವಿಕೆ ನಿಷೇಧಿಸಲಾಗಿದೆ. ಎರಡು ಗಂಟೆಗೂ ಕಡಿಮೆ ಅವಧಿ ಪ್ರಯಾಣವಿರುವ ವಿಮಾನಗಳಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ವಿಮಾಯಾನ ಸಚಿವಾಲಯ ಹೇಳಿದೆ.

ಖತಾರ್ ಏರ್ವೇಸ್ ವಿಶ್ವದ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ವಿಮಾನ ಸೇವೆ!

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,68,912 ಜನರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಕೊರೋನಾ ಹರಡದಂತೆ ತಡೆಯಲು ವಿಮಾಯಾನ ಸಚಿವಾಲ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಈ ಮೂಲಕ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಪ್ರಯಾಣಿಕರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಜೊತೆಗೆ ಹೊಸ ಕ್ರಮಗಳಿಗೆ ಸಹಕರಿಸಬೇಕು ಎಂದು ಸಚಿವಾಲಯ ಕೋರಿದೆ.

Follow Us:
Download App:
  • android
  • ios