Asianet Suvarna News Asianet Suvarna News

ಖತಾರ್ ಏರ್ವೇಸ್ ವಿಶ್ವದ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ವಿಮಾನ ಸೇವೆ!

ಕೊರೋನಾ ಕಾರಣ ಸಾರಿಗೆ ಸಂಪರ್ಕ ವಿಭಾಗಕ್ಕೆ ಹೆಚ್ಚು ಹೊಡೆತ ಬಿದ್ದಿದೆ. ಅದರಲ್ಲೂ ವಿಮಾನಯಾನ ಸೇವೆಗಳು ಸಂಪೂರ್ಣ ಸ್ಧಗಿತಗೊಂಡಿತ್ತು. ಇದೀಗ ಖತಾರ್ ಏರ್‌ವೇಸ್ ಹೊಸ ಬದಲಾವಣೆಯೊಂದಿಗೆ ವಿಮಾನಯಾನ ಸೇವೆ ಆರಂಭಿಸಿದೆ. ಈ ಮೂಲಕ ವಿಶ್ವದ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ವಿಮಾನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Qatar Airways to operate world first flight with a fully vaccinated crew and passengers ckm
Author
Bengaluru, First Published Apr 6, 2021, 5:37 PM IST

ದೋಹಾ(ಎ.06): ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಆರಂಭಗೊಳ್ಳುತ್ತಿದ್ದಂತೆ ಮತ್ತೆ 2ನೇ ಅಲೆ ಭೀತಿ ಎದುರಾಗಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಇದೀಗ ಅತೀ ಹೆಚ್ಚು ಸುರಕ್ಷತೆಯೊಂದಿಗೆ ಸೇವೆ ಆರಂಭಿಸಲು ಮುಂದಾಗಿದೆ. ಇದೀಗ ಖತಾರ್ ಏರ್‌ವೇಸ್ ಈ ಸಾಧನೆ ಮಾಡಿದೆ. ವಿಶ್ವದಲ್ಲೇ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ಫ್ಲೈಟ್ ಆರಂಭಿಸಿದೆ.

Qatar Airways to operate world first flight with a fully vaccinated crew and passengers ckm

ದಟ್ಟ ಮಂಜು: ಹುಬ್ಬಳ್ಳೀಲಿ ಲ್ಯಾಂಡ್‌ ಆಗದೆ ಮಂಗ್ಳೂರಿಗೆ ಹೋದ ವಿಮಾನ

ಈ ವಿಮಾನ ಸೇವೆಯ ವಿಶೇಷತೆ ಎಂದರೆ ವಿಮಾನದಲ್ಲಿನ ಸಿಬ್ಬಂದಿ ಹಾಗೂ ಪ್ರಯಾಣಿಕರೆಲ್ಲರೂ ಲಸಿಕೆ ಪಡೆದವರಾಗಿರುತ್ತಾರೆ. ಇನ್ನು ಚೆಕ್ ಇನ್ ಸಂದರ್ಭದಲ್ಲೂ ಲಸಿಕೆ ಪಡೆದ ಸಿಬ್ಬಂದಿಗಳೇ ಸೇವೆ ನೀಡಲಿದ್ದಾರೆ. ಇದು ವಿಶ್ವದ ಮೊದಲ ಕೋವಿಡ್ ವ್ಯಾಕ್ಸಿನೇಟೆಡ್ ಫ್ಲೈಟ್ ಆಗಿದೆ. ಹೀಗಾಗಿ ಅತ್ಯಂತ ಸುರಕ್ಷಿತವಾಗಿದೆ. ಕೊರೋನಾ ಆತಂಕದ ನಡುವೆ ತಮ್ಮ ವ್ಯವಹಾರ, ಕೆಲಸ ಕಾರ್ಯ ಮುಂದುವರಿಸಲು ಯಾವುದೇ ಅಡ್ಡಿ ಆತಂಕ ಎದುರಾಗುವುದಿಲ್ಲ ಎಂದು ಖತಾರ್ ಏರ್‌ವೇಸ್ ಹೇಳಿದೆ.

Qatar Airways to operate world first flight with a fully vaccinated crew and passengers ckm

ಈ ವಿಶೇಷ ವಿಮಾನ ಬೆಳಿಗ್ಗೆ 11:00 ಗಂಟೆಗೆ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದೆ.  ಕೇವಲ ಲಸಿಕೆ ಹಾಕಿದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಮಾತ್ರ ಈ ವಿಮಾನದಲ್ಲಿ ಕರೆದೊಯ್ಯುಲಾಗುತ್ತದೆ, ಪ್ರಯಾಣಿಕರ ಚೆಕ್-ಇನ್‌ನಲ್ಲಿ ಸಂಪೂರ್ಣ ಲಸಿಕೆ ಹಾಕಿದ ಸಿಬ್ಬಂದಿ ಸೇವೆ ನೀಡಲಿದ್ದಾರೆ.

Qatar Airways to operate world first flight with a fully vaccinated crew and passengers ckm

ವಿಮಾನ ಪ್ರಯಾಣದಲ್ಲಿ ಡೆಲಿವರಿ: ಬಾನೆತ್ತರದಲ್ಲಿ ಜನಿಸಿದ ಹೆಣ್ಣುಮಗು

ದೋಹಾಗೆ ಹಿಂತಿರುಗಲಿರುವ ಈ ವಿಶೇಷ ವಿಮಾನ ಸುರಕ್ಷತೆ, ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಿದೆ. ಈ ವಿಮಾನದಲ್ಲಿ ಇತ್ತೀಚೆಗಿನ ಆವಿಷ್ಕಾರವಾಗಿರುವ ಝಿರೋ ಟಚ್ ಮನರಂಜನಾ ತಂತ್ರಜ್ಞಾನ ಸೇವೆಕೂಡ ಲಭ್ಯವಿದೆ. 

ಇಂದಿನ ವಿಶೇಷ ವಿಮಾನವು ಅಂತರರಾಷ್ಟ್ರೀಯ ಪ್ರಯಾಣಕ್ಕೆ ಹೊಸ ರೂಪ ನೀಡಿದೆ. ಈ ಪ್ರಯೋಗ ವಿಮಾನಯಾನಕ್ಕೆ ಚೇತರಿಕೆ ನೀಡಲಿದೆ.  ಮೊದಲ ಹಾರಾಟವನ್ನು ನಿರ್ವಹಿಸುವ ಮೂಲಕ ಖತಾರ್ ಏರ್ವೇಸ್ ವಿಮಾನಯಾನ ಸೇವಗೆ ಹೊಸ ದಾರಿದೀಪ ನೀಡಿದೆ ಎಂದು ಕತಾರ್ ಏರ್ವೇಸ್ ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಕ್ಬರ್ ಅಲ್ ಬೇಕರ್ ಹೇಳಿದ್ದಾರೆ.

Qatar Airways to operate world first flight with a fully vaccinated crew and passengers ckm

Follow Us:
Download App:
  • android
  • ios