ನವದೆಹಲಿ(ಆ.13):: ಕನಿಷ್ಠ ಪ್ರಮಾಣದಲ್ಲಾದರೂ ಸ್ಥಳೀಯ ಭಾಷೆಯ ಅರಿವಿರುವ ಸಿಬ್ಬಂದಿಯನ್ನೇ ಮುಂಬರುವ ದಿನಗಳಲ್ಲಿ ವಿಮಾನ ನಿಲ್ದಾಣದ ತಪಾಸಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಹೇಳಿದೆ. ಹಿಂದಿಯಲ್ಲಿ ಮಾತನಾಡಲು ಬರುವುದಿಲ್ಲ ಎಂದಿದ್ದ ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ಸಿಐಎಸ್‌ಎಫ್‌ ಸಿಬ್ಬಂದಿಯೊಬ್ಬರು ‘ನೀವು ಭಾರತೀಯರಾ?’ ಎಂದು ಪ್ರಶ್ನಿಸಿದ ಘಟನೆ ಇತ್ತೀಚೆಗೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಿಐಎಸ್‌ಎಫ್‌ ಈ ಹೇಳಿಕೆ ನೀಡಿದೆ.

ಹಿಂದಿ ಬರಲ್ಲ ಎಂದ ಸಂಸದೆಗೆ ನೀವು ಭಾರತೀಯರಾ? ಎಂದು ಪ್ರಶ್ನಿಸಿದ ಅಧಿಕಾರಿ!

ಪರಿಶೀಲನೆ, ತಪಾಸಣೆ ಮೊದಲಾದ ಕೆಲಸಗಳಿಗೆ ತಾಂತ್ರಿಕ ಪರಿಣತಿಯೂ ಅನಿವಾರ್ಯವಾದ ಕಾರಣ, ಇಂಥ ಹುದ್ದೆಗಳಿಗೆ ಶೇ.100ರಷ್ಟುಸ್ಥಳೀಯರ ನೇಮಕ ಸಾಧ್ಯವಾಗದು. ಆದರೂ ಸ್ಥಳೀಯ ಭಾಷೆಯ ಕನಿಷ್ಠ ಮಾಹಿತಿ ಹೊಂದಿರುವ ವ್ಯಕ್ತಿಗಳನ್ನೇ ಇಂಥ ಹುದ್ದೆಗೆ ನಿಯೋಜಿಸಲು ಯತ್ನಿಸಲಾಗುವುದು ಎಂದು ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹೊಸ ಶಿಕ್ಷಣ ನೀತಿ ನವಭಾರತಕ್ಕೆ ಭವ್ಯ ಮುನ್ನುಡಿ

ಅಲ್ಲದೆ ಕನಿಮೋಳಿ ಅವರು ಹೇಳುತ್ತಿರುವಂತೆ ಅಧಿಕಾರಿ ಮಾತನಾಡಿಲ್ಲ. ಹಿಂದಿ ಕೂಡ ಭಾರತೀಯ ಅಥವಾ ಅಧಿಕೃತ ಭಾಷೆ ಎಂದಷ್ಟೇ ತಿಳಿಸಿದ್ದಾರೆ. ಇದನ್ನು ವಿಚಾರಣೆ ವೇಳೆ ಮಹಿಳಾ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಅದೂ ಅಲ್ಲದೆ ಮಹಿಳಾ ಅಧಿಕಾರಿ ದಕ್ಷಿಣ ಭಾರತದ ರಾಜ್ಯವೊಂದಕ್ಕೆ ಸೇರಿದವರಾಗಿದ್ದಾರೆ ಎಂದು ವಿವರಿಸಿದ್ದಾರೆ.