Asianet Suvarna News Asianet Suvarna News

ಚೆನ್ನೈ ಅಮೆರಿಕ ದೂತವಾಸದ ಮುಖ್ಯಸ್ಥರಾಗಿ ಹಾಡ್ಜಸ್‌ ನೇಮಕ

ಇಲ್ಲಿನ ಅಮೆರಿಕ ದೂತವಾಸ ಕಚೇರಿಯ ಮುಖ್ಯಸ್ಥರಾಗಿ (ಕಾನ್ಸಲ್‌ ಜನರಲ್‌) ಕ್ರಿಸ್ಟೋಫರ್‌ ಡಬ್ಲ್ಯು ಹಾಡ್ಜಸ್‌ ಅವರು ಸೋಮವಾರ ನೇಮಕಗೊಂಡಿದ್ದಾರೆ.

Christopher W. Hodges appointed as head of US embassy in Chennai akb
Author
First Published Aug 2, 2023, 9:20 AM IST

ಚೆನ್ನೈ: ಇಲ್ಲಿನ ಅಮೆರಿಕ ದೂತವಾಸ ಕಚೇರಿಯ ಮುಖ್ಯಸ್ಥರಾಗಿ (ಕಾನ್ಸಲ್‌ ಜನರಲ್‌) ಕ್ರಿಸ್ಟೋಫರ್‌ ಡಬ್ಲ್ಯು ಹಾಡ್ಜಸ್‌ ಅವರು ಸೋಮವಾರ ನೇಮಕಗೊಂಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಹತ್ತಿರ ತರುವುದಕ್ಕೆ ಅಮೆರಿಕದ ಪ್ರಜೆಗಳಿಗೆ ಬೆಂಬಲ ಒದಗಿಸುತ್ತಿರುವುದಕ್ಕೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.

ಅಧಿಕಾರಿ ವಹಿಸಿಕೊಂಡ ಬಳಿಕ ಮಾತನಾಡಿದ ಹಾಡ್ಜಸ್‌, ‘ಅಮೆರಿಕ ಮತ್ತು ಭಾರತದ ನಡುವಿನ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವಿನ ವಾಣಿಜ್ಯ ಮತ್ತು ಶೈಕ್ಷಣಿಕ ಸಂಬಂಧಗಳು ಮತ್ತು ಬಾಹ್ಯಾಕಾಶ ವಲಯವೂ ಸೇರಿದಂತೆ ದ್ವಿಪಕ್ಷೀಯ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ’ ಎಂದು ಹೇಳಿದರು.

ಬೆಂಗ​ಳೂ​ರ​ಲ್ಲೂ US ರಾಯಭಾರ ಕಚೇರಿ: H1B Visa ನಿಯಮ ಬದ​ಲಾಗಿ ಭಾರತೀಯ ಟೆಕ್ಕಿಗಳಿಗೆ ಅನುಕೂಲ

‘ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ 2 ಸರ್ಕಾರಗಳ ನಡುವೆ ಮಾತ್ರವಲ್ಲ, ಅದು ಉಭಯ ದೇಶಗಳ ಜನರ ನಡುವಿನ ಸಂಬಂಧವಾಗಿದೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೊಬಾರ್‌ ದ್ವೀಪ ಸಮೂಹ, ಲಕ್ಷದ್ವೀಪ ಮತ್ತು ಪುದುಚೆರಿಗಳಲ್ಲಿ ಸಂಬಂಧವನ್ನು ಮತ್ತಷ್ಟುಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಚೆನ್ನೈ ದೂತವಾಸ ಕಚೇರಿಯ ಮುಖ್ಯಸ್ಥರಾಗುವ ಮೊದಲು ಹಾಡ್ಜಸ್‌, ಕೋಆರ್ಡಿನೇಟರ್‌ ಫಾರ್‌ ಅಫ್ಘನ್‌ ರಿಲೊಕೇಶನ್‌ ಎಕ್ಸ್ಫರ್ಟ್ ಕಚೇರಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಅವರು ಜೆರುಸಲೇಂ, ವಿಯೆಟ್ನಾಂ, ಘಾನಾ, ಆಸ್ಟ್ರಿಯಾ, ಜರ್ಮನಿ, ಸ್ವಿಜರ್ಲೆಂಡ್‌ಗಳಲ್ಲಿ ಅಮೆರಿಕ ಪರವಾಗಿ ಕೆಲಸ ಮಾಡಿದ್ದಾರೆ.

ಭಾರತದ ರಾಷ್ಟ್ರಧ್ವಜ ಕೆಳಗಿಳಿಸಿದ ಓರ್ವನ ಬಂಧನ: ಇನ್ನಷ್ಟು ದೊಡ್ಡ ರಾಷ್ಟ್ರಧ್ವಜ ಹಾರಿಸಿದ ದೂತಾವಾಸ

Follow Us:
Download App:
  • android
  • ios