ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!
* 1959ರಲ್ಲಿ ದಲೈ ಲಾಮಾರನ್ನು ಟಿಬೆಟ್‌ನಿಂದ ಭಾರತಕ್ಕೆ ಕರೆತಂದಿದ್ದ ಯೋಧರು
* ರಕ್ಷಣಾ ತಂಡದ ಕೊನೆಯ ಯೋಧ ನಿಧನ
* 86 ವರ್ಷ ವಯಸ್ಸಿನ ದಲೈಲಾಮಾ ಈಗ ಭಾರತದಲ್ಲಿದ್ದಾರೆ
ನವದೆಹಲಿ(ಜ.02): 1959 ರಲ್ಲಿ ದಲೈ ಲಾಮಾ (Dalai Lama) ಅವರು ಟಿಬೆಟ್‌ನಿಂದ (Tibet) ಪರಾರಿಯಾದಾಗ ಅವರನ್ನು ರಕ್ಷಿಸಿದ ಸೈನಿಕರ ಗುಂಪಿನ ಕೊನೆಯ ಯೋಧ 85 ವರ್ಷದ ನರೇಂದ್ರ ಚಂದ್ರ ದಾಸ್ ನಿಧನರಾಗಿದ್ದಾರೆ. ಈ ಮಾಜಿ ಸೈನಿಕನ ರೆಜಿಮೆಂಟ್ ಶುಕ್ರವಾರ ಈ ಮಾಹಿತಿ ನೀಡಿದೆ. ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈ ಲಾಮಾ ಚೀನಾದ ಸೈನಿಕರಿಂದ ತಪ್ಪಿಸಿಕೊಳ್ಳಲು ಸೈನಿಕರಂತೆ ವೇಷ ಧರಿಸಿ ಹಿಮಾಲಯದ ಮೂಲಕ 13 ದಿನಗಳ ಪ್ರಯಾಣ ಮಾಡಿ ಭಾರತಕ್ಕೆ ಬಂದಿದ್ದರು ಎಂಬುವುದು ಉಲ್ಲೇಖನೀಯ.
ಸೋಮವಾರ ಅಸ್ಸಾಂನ ತಮ್ಮ ನಿವಾಸದಲ್ಲಿ ನಿಧನರಾದ ನರೇನ್ ಚಂದ್ರ ದಾಸ್ ಅವರಿಗೆ ದಲೈ ಲಾಮಾರನ್ನು ಭಾರತಕ್ಕೆ ಕರೆತಂದಾಗ ಕೇವಲ 22 ವರ್ಷ. ಅವರು ಅದೇ ಸಮಯದಲ್ಲಿ ಭಾರತೀಯ ಸೇನೆಯ ಅತ್ಯಂತ ಹಳೆಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್‌ನಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದರು.
ಮಾರ್ಚ್ 31, 1959 ರಂದು, ನರೇನ್ ಇತರ ಆರು ಸೈನಿಕರೊಂದಿಗೆ ದಲೈ ಲಾಮಾರನ್ನು ಅರುಣಾಚಲ ಪ್ರದೇಶದ ಲುಮ್ಲಾಕ್ಕೆ ಕರೆತಂದಿದ್ದರು. ಕಳೆದ ವರ್ಷ ದಾಸ್‌ನಲ್ಲಿ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ದಲೈ ಲಾಮಾ ಕುದುರೆ ಸವಾರಿ ಮಾಡುವಾಗ ಅವರು ಮತ್ತು ಇತರ ಸೈನಿಕರು ಪರ್ವತದ ರಸ್ತೆಗಳಲ್ಲಿ ಹೇಗೆ ಪ್ರಯಾಣಿಸಿದ್ದರೆಂದು ಹೇಳಿದ್ದರು. ಈ ನಿವೃತ್ತ ಸೈನಿಕ ತನ್ನ ಗುಂಪಿಗೆ ಯುವ ಬಿಕ್ಷು (ದಲೈ ಲಾಮಾ) ಜೊತೆ ಮಾತನಾಡಲು ಅವಕಾಶ ನೀಡಲಿಲ್ಲ, ಏಕೆಂದರೆ ಆತ (ಸೈನಿಕರು) ದಲೈ ಲಾಮಾಗೆ ಭದ್ರತೆಯನ್ನು ನೀಡುತ್ತಿದ್ದನು. 86 ವರ್ಷ ವಯಸ್ಸಿನ ದಲೈಲಾಮಾ ಅವರು ಸದ್ಯ ಭಾರತದಲ್ಲಿ ವಾಸಿಸುತ್ತಿದ್ದಾರೆ.
ಈ ಇಬ್ಬರ (ದಲೈ ಲಾಮಾ ಮತ್ತು ನರೇನ್ ದಾಸ್) ಮೊದಲ ಭಾವನಾತ್ಮಕ ಭೇಟಿಯು ಈ ಘಟನೆಯ ಸುಮಾರು 60 ವರ್ಷಗಳ ನಂತರ 2017 ರಲ್ಲಿ ನಡೆಯಿತು. ಆ ಸಮಯದಲ್ಲಿ ದಾಸ್ ಅವರನ್ನು ನೋಡಿದ ಟಿಬೆಟಿಯನ್ ಧರ್ಮಗುರು 'ನಿಮ್ಮ ಮುಖವನ್ನು ನೋಡಿದಾಗ ನನಗೂ ತುಂಬಾ ವಯಸ್ಸಾಗಿದೆ ಎಂದು ನಾನು ಅರಿತುಕೊಂಡೆ. ಒಂದು ವರ್ಷದ ನಂತರ, ದಾಸ್ ಅವರನ್ನು ಧರ್ಮಶಾಲಾಕ್ಕೆ ಆಹ್ವಾನಿಸಲಾಯಿತು, ಅಲ್ಲಿ ದಲೈ ಲಾಮಾ ಅವರು ದೆಹಲಿಯ ಅನುಮತಿಯೊಂದಿಗೆ ಟಿಬೆಟಿಯನ್ ಸರ್ಕಾರವನ್ನು ಸ್ಥಾಪಿಸಿದರು. ನಂತರ ದಾಸ್, 'ನಾನು ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದೆ ಮತ್ತು ಅವರು ನನ್ನನ್ನು ತಬ್ಬಿಕೊಂಡರು. ಅವರು ನನಗೆ ನೆನಪಿನ ಕಾಣಿಕೆಯನ್ನೂ ನೀಡಿದರು, ಈ ಸಭೆಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದಿದ್ದರು.