ಭಾರತದ ಸನಿಹ ಬರಲಿದೆ ಚೀನಾದ ಗೂಢಚಾರ ಹಡಗು, ಇದರ ವಿಶೇಷತೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!

ಚೀನಾದ ಬೇಹುಗಾರಿಕಾ ಹಡಗು ಯುವಾನ್ ವಾಂಗ್-5 ಗಂಟೆಗೆ 35 ಕಿಲೋಮೀಟರ್ ವೇಗದಲ್ಲಿ ಭಾರತದ ಕಡೆ ವಿಚಕ್ಷಣೆ ಮಾಡಲು ಶ್ರೀಲಂಕಾದ ಕಡೆಗೆ ಚಲಿಸುತ್ತಿದೆ. ಆಗಸ್ಟ್ 11 ರಂದು ಹಂಬಂಟೋಟಾ ತಲುಪುವ ಸಾಧ್ಯತೆಯಿದೆ. ಈ ಬೇಹುಗಾರಿಕಾ ನೌಕೆಗೆ ಸಂಬಂಧಿಸಿದಂತೆ ಭಾರತವು ಶ್ರೀಲಂಕಾಕ್ಕೆ ಪ್ರತಿಭಟನೆಯನ್ನು ಸಲ್ಲಿಸಿದೆ. ಇದರ ಹೊರತಾಗಿಯೂ ಶ್ರೀಲಂಕಾ ಹಂಬಂಟೋಟಾ ಬಂದರಿಗೆ ಬರಲು ಅವಕಾಶ ನೀಡಿದೆ. ಈ ಬಗ್ಗೆ ಭಾರತ ಅಲರ್ಟ್ ಆಗಿದ್ದು, ಭಾರತೀಯ ನೌಕಾಪಡೆಯು ಹಡಗಿನ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
 

Chinese ship will come to Sri Lanka Yuan Wang 5 can hear talks 750 km away ISRO and naval base on target san

ನವದೆಹಲಿ (ಆ.5): ಚೀನಾದ ಬೇಹುಗಾರಿಕಾ ನೌಕೆ ಯುವಾನ್ ವಾಂಗ್-5 ಜುಲೈ 13 ರಂದು ಜಿಯಾಂಗ್‌ಯಿನ್ ಬಂದರಿನಿಂದ ಹೊರಟು ಆಗಸ್ಟ್ 11 ರಂದು ಶ್ರೀಲಂಕಾದ ಹಂಬನ್‌ತೋಟ ಬಂದರಿಗೆ ಆಗಮಿಸಲಿದೆ. ಹಂಬಂಟೋಟಾದಲ್ಲಿ ಇದು ಒಂದು ವಾರದವರೆಗೆ ಅಂದರೆ ಆಗಸ್ಟ್ 17 ರವರೆಗೆ ಇರುತ್ತದೆ. ಚೀನಾ ಈ ಬಂದರನ್ನು ಶ್ರೀಲಂಕಾದಿಂದ 99 ವರ್ಷದ ಗುತ್ತಿಗೆಯ ಮೇಲೆ ತೆಗೆದುಕೊಂಡಿದೆ. ಈ ಹಡಗು ಬಾಹ್ಯಾಕಾಶ ಹಾಗೂ ಉಪಗ್ರಹ ಟ್ರ್ಯಾಕಿಂಗ್‌ನಲ್ಲಿ ಕರಗತವಾಗಿವೆ.  ಯುವಾನ್ ವಾಂಗ್ ವರ್ಗದ ಹಡಗುಗಳ ಮೂಲಕ ಉಪಗ್ರಹಗಳು, ರಾಕೆಟ್‌ಗಳು ಮತ್ತು ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಉಡಾವಣೆಯನ್ನು ಚೀನಾ ಟ್ರ್ಯಾಕ್ ಮಾಡುತ್ತದೆ. ಚೀನಾ ಯುವಾನ್‌ ವಾಂಗ್‌ ವರ್ಗದ ಒಟ್ಟು 7 ಹಡಗುಗಳನ್ನು ಹೊಂದಿದ್ದು, ದು ಸಂಪೂರ್ಣ ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.  ಬೇಹುಗಾರಿಕೆ ನಡೆಸುವ ಏಕಮೇವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದ್ದು, ಬೀಜಿಂಗ್‌ನ ಭೂ-ಆಧಾರಿತ ಟ್ರ್ಯಾಕಿಂಗ್ ಸ್ಟೇಷನ್‌ಗಳಿಗೆ ಸಂಪೂರ್ಣ ಮಾಹಿತಿಯನ್ನು ಕಳುಹಿಸುತ್ತವೆ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್‌ ವರದಿಯ ಪ್ರಕಾರ, ಈ ಹಡಗನ್ನು ಪೀಪಲ್ಸ್‌ ಲಿಬರೇಷನ್‌ ಆರ್ಮಿಯ ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್ ನಿರ್ವಹಿಸುತ್ತದೆ. ಎಸ್ಎಸ್ಎಫ್‌ ಥಿಯೇಟರ್ ಕಮಾಂಡ್ ಮಟ್ಟದ ಸಂಸ್ಥೆಯಾಗಿದೆ. ಇದು ಬಾಹ್ಯಾಕಾಶ, ಸೈಬರ್, ಎಲೆಕ್ಟ್ರಾನಿಕ್, ಮಾಹಿತಿ, ಸಂವಹನ ಮತ್ತು ಸೈಕಾಲಾಜಿಕಲ್‌ ಯುದ್ಧ ಕಾರ್ಯಾಚರಣೆಗಳಲ್ಲಿ ಪಿಎಲ್‌ಗೆ ಸಹಾಯ ಮಾಡುತ್ತದೆ.

ಇದಕ್ಕೂ ಮುನ್ನ, ಚೀನಾ 2022 ರಲ್ಲಿ ಲಾಂಗ್ ಮಾರ್ಚ್ 5 ಬಿ ರಾಕೆಟ್ ಅನ್ನು ಉಡಾವಣೆ ಮಾಡಿದ ಉದ್ದೇಶ ಹಡಗು ಕಣ್ಗಾವಲು ಕಾರ್ಯಾಚರಣೆ ಆಗಿತ್ತು. ತೀರಾ ಇತ್ತೀಚೆಗೆ ಇದು ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ಮೊದಲ ಲ್ಯಾಬ್ ಮಾಡ್ಯೂಲ್ ಉಡಾವಣೆಯ ಕಡಲ ಕಣ್ಗಾವಲಿನಲ್ಲಿ ತೊಡಗಿಕೊಂಡಿತ್ತು.

ಭಾರತದ ಕಣ್ಗಾವಲು ಸುಲಭ: ಚೀನಾದ ಹಡಗು ಹಂಬನ್‌ತೋಟಕ್ಕೆ ಬರುತ್ತಿದೆ ಎಂಬ ವರದಿಗಳನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯ ಈ ಹಿಂದೆ ತಳ್ಳಿಹಾಕಿತ್ತು. ನಂತರ ಶ್ರೀಲಂಕಾ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿತು, ಇದನ್ನು ನಿಯಮಿತ ಚಟುವಟಿಕೆ ಎಂದು ಕರೆದಿದೆ ಮತ್ತು ಈ ಹಿಂದೆ ಅನೇಕ ದೇಶಗಳಿಗೆ ಇಂತಹ ಅನುಮತಿಯನ್ನು ನೀಡಿದೆ ಎಂದು ಹೇಳಿದೆ. ಹಂಬಂಟೋಟಾ ಬಂದರನ್ನು ಸೇನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಶ್ರೀಲಂಕಾ ಹೇಳುತ್ತಾ ಬಂದಿದೆ.

ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಶ್ರೀಲಂಕಾ, ಅಂದರೆ BRISL, ಯುವಾನ್ ವಾಂಗ್-5, ಆಗಸ್ಟ್ 11 ರಂದು ಹಂಬನ್‌ತೋಟ ತಲುಪಿದ ನಂತರ, ಆಗಸ್ಟ್‌ನಿಂದ ಸೆಪ್ಟೆಂಬರ್‌ವರೆಗೆ ಹಿಂದೂ ಮಹಾಸಾಗರದ ವಾಯುವ್ಯ ಭಾಗದಲ್ಲಿ ಚೀನಾದ ಉಪಗ್ರಹಗಳನ್ನು ಟ್ರ್ಯಾಕ್ ಮಾಡುವ ಮೂಲಕ ಸಂಶೋಧನೆ ನಡೆಸಲಿದೆ ಎಂದು ಹೇಳಿದೆ. ಹಂಬಂಟೋಟಾ ಬಂದರಿಗೆ ಯುವಾನ್ ವಾಂಗ್-5 ರ ಭೇಟಿಯು ಶ್ರೀಲಂಕಾ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಕಲಿಯಲು ಮತ್ತು ಅಭಿವೃದ್ಧಿಪಡಿಸಲು ಅವಕಾಶವನ್ನು ಒದಗಿಸುತ್ತದೆ ಎಂದು BRISL ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹಡಗು ಆಗಸ್ಟ್ 11 ರಿಂದ 17 ರವರೆಗೆ ಹಂಬಂಟೋಟಾದಲ್ಲಿ ಉಳಿಯುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇಷ್ಟು ದಿನಗಳಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಬಹುದು. ಆದ್ದರಿಂದ, ಶ್ರೀಲಂಕಾ ಇದನ್ನು ಸಾಮಾನ್ಯ ಹೆಜ್ಜೆ ಎಂದು ಕರೆಯುವುದು ಸಂಪೂರ್ಣವಾಗಿ ತಪ್ಪು ಎಂದು ಹೇಳಿದ್ದಾರೆ.

ಚೀನಾದ ರಾಡಾರ್‌ ಅಡಿಗೆ ಬರುವ ಭಾರತದ ನೌಕಾನೆಲೆಗಳು: ಯುವಾನ್ ವಾಂಗ್ -5 ಸೇನಾ ಹಡಗಲ್ಲ, ಆದರೆ ಶಕ್ತಿಯುತ ಟ್ರ್ಯಾಕಿಂಗ್ ಹಡಗು. ಚೀನಾ ಅಥವಾ ಇತರ ಯಾವುದೇ ದೇಶಗಳು ಕ್ಷಿಪಣಿ ಪರೀಕ್ಷೆಗಳನ್ನು ಮಾಡುವಾಗ ಈ ಹಡಗುಗಳು ತಮ್ಮ ಚಲನೆಯನ್ನು ಪ್ರಾರಂಭಿಸುತ್ತವೆ. 750 ಕಿಲೋಮೀಟರ್‌ ದೂರದಿಂದ ನೀವು ಆಡಿದ ಮಾತನ್ನು ಈ ಹಡಗಿನಲ್ಲಿ ಕುಳಿತು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು. ಈ ಹಡಗಿನಲ್ಲಿ 400 ಮಂದಿ ಸಿಬ್ಬಂದಿ ಇದ್ದು, ಪ್ಯಾರಾಬೋಲಿಕ್ ಟ್ರ್ಯಾಕಿಂಗ್ ಆಂಟೆನಾ ಮತ್ತು ಹಲವಾರು ಸಂವೇದಕಗಳನ್ನು ಹೊಂದಿದೆ.

ಶ್ರೀಲಂಕಾ ಬಂದರಿಗೆ ಬರಲಿದೆ ಚೀನಾದ ಹಡಗು, ನೌಕಾಸೇನೆ ಹೈ ಅಲರ್ಟ್‌!

ಪರಮಾಣು ಹಾಗೂ ನೌಕಾನೆಲೆಯ ಮೇಲೆ ಕಣ್ಣು: ಹಂಬಂಟೋಟಾ ಬಂದರನ್ನು ತಲುಪಿದ ನಂತರ, ಈ ಹಡಗು ದಕ್ಷಿಣ ಭಾರತದ ಪ್ರಮುಖ ಮಿಲಿಟರಿ ಮತ್ತು ಪರಮಾಣು ನೆಲೆಗಳಾದ ಕಲ್ಪಾಕ್ಕಂ, ಕೂಡಂಕುಳಂಗಳಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಅಲ್ಲದೆ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಹಲವು ಬಂದರುಗಳು ಚೀನಾದ ರಾಡಾರ್‌ನಲ್ಲಿರುತ್ತವೆ. ಭಾರತದ ಪ್ರಮುಖ ನೌಕಾನೆಲೆ ಮತ್ತು ಪರಮಾಣು ಸ್ಥಾವರಗಳ ಮೇಲೆ ಕಣ್ಣಿಡಲು ಚೀನಾ ಈ ಹಡಗನ್ನು ಶ್ರೀಲಂಕಾಕ್ಕೆ ಕಳುಹಿಸುತ್ತಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಡಗಿನಲ್ಲಿ ಹೈಟೆಕ್ ಕದ್ದಾಲಿಕೆ ಉಪಕರಣಗಳನ್ನು ಅಳವಡಿಸಲಾಗಿದೆ. ಅದೇನೆಂದರೆ ಶ್ರೀಲಂಕಾ ಬಂದರಿನಲ್ಲಿ ನಿಂತು ಭಾರತದ ಒಳಭಾಗದವರೆಗೂ ಮಾಹಿತಿ ಸಂಗ್ರಹಿಸಬಹುದು. ಅಲ್ಲದೆ, ಪೂರ್ವ ಕರಾವಳಿಯಲ್ಲಿರುವ ಭಾರತೀಯ ನೌಕಾ ನೆಲೆಗಳು ಈ ಹಡಗಿನ ಬೇಹುಗಾರಿಕೆ ವ್ಯಾಪ್ತಿಯಲ್ಲಿರುತ್ತವೆ. ಚಂಡೀಪುರದಲ್ಲಿರುವ ಇಸ್ರೋ ಉಡಾವಣಾ ಕೇಂದ್ರದ ಮೇಲೂ ಬೇಹುಗಾರಿಕೆ ನಡೆಸಬಹುದು ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ದೇಶದ ಅಗ್ನಿಯಂತಹ ಕ್ಷಿಪಣಿಗಳ ಕಾರ್ಯಕ್ಷಮತೆ ಮತ್ತು ಶ್ರೇಣಿಯಂತಹ ಎಲ್ಲಾ ಮಾಹಿತಿಯನ್ನು ಕದಿಯಬಹುದು.

Indo-China Talk: ಚೀನಾಕ್ಕೆ ಭಾರತದ ಎಚ್ಚರಿಕೆ, ಲಡಾಖ್‌ನಲ್ಲಿ ವಾಯು ಗಡಿ ಉಲ್ಲಂಘನೆ ಮಾಡಬೇಡಿ!

ಚೀನಾದ ನೌಕಾ ನೆಲೆಯಾಗುವ ಆತಂಕ: ಸಾಲವನ್ನು ಮರುಪಾವತಿಸಲು ವಿಫಲವಾದ ನಂತರ ಶ್ರೀಲಂಕಾ 2017 ರಲ್ಲಿ ದಕ್ಷಿಣದಲ್ಲಿರುವ ಹಂಬಂಟೋಟಾ ಬಂದರನ್ನು 99 ವರ್ಷಗಳ ಗುತ್ತಿಗೆಗೆ ಚೀನಾಕ್ಕೆ ಹಸ್ತಾಂತರಿಸಿತು. ಈ ಬಂದರು ಏಷ್ಯಾ ಮತ್ತು ಯುರೋಪ್ ನಡುವಿನ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗದ ಬಳಿ ಇದೆ. ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆಗೆ ಇದು ಬಹಳ ಮುಖ್ಯವಾಗಿದೆ. 1.5 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ ಈ ಬಂದರು ಚೀನಾದ ನೌಕಾ ನೆಲೆಯಾಗಬಹುದು ಎಂದು ಭಾರತ ಮತ್ತು ಅಮೆರಿಕ ಯಾವಾಗಲೂ ಆತಂಕ ವ್ಯಕ್ತಪಡಿಸಿವೆ. 

Latest Videos
Follow Us:
Download App:
  • android
  • ios