Asianet Suvarna News Asianet Suvarna News

ಚೀನಾ ಹವಾಲ ಹಣ ಬಳಸಿ ಬೇಹುಗಾರಿಕೆ: ದೆಹಲಿ IT ಅಧಿಕಾರಿಗಳಿಂದ ಆರೋಪಿ ಬಂಧನ!

ಚೀನಾ ಅಂದರೆ ಉರಿದು ಬೀಳುವ ಕಾಲ ಇದು. ಇನ್ನು ಚೀನಾದ ಹವಾಲ ಹಣ ಬಳಸಿ ದಲೈ ಲಾಮಾ ಹಾಗೂ ಅವರ ಸಹಚರರ ಮೇಲೆ ಬೇಹುಗಾರಿಗೆ ನಡೆಸುತ್ತಿದ್ದ ಆರೋಪಿಯನ್ನು ದೆಹಲಿ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ವೇಳೆ ಸುಮಾರು 300 ಕೋಟಿ ರೂಪಾಯಿ ವಹಿವಾಟು ಪತ್ತೆಯಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.

Chinese national Charlie busted by T Dept for hawala money and snooping on Dalai Lama
Author
Bengaluru, First Published Aug 17, 2020, 4:04 PM IST

ದೆಹಲಿ(ಆ.17): ಚೀನಾದ ಹವಾಲ ಹಣ ಬಳಸಿಕೊಂಡು ಭಾರತದಲ್ಲಿ ಬೇಹುಗಾರಿಕೆ ಕೆಲಸ ಮಾಡುತ್ತಿದ್ದ ಆರೋಪಿ ಚೀನಾದ ಚಾರ್ಲಿ ಪೆಂಗ್ ಅಕಾ ಲುವೋ ಸಾಂಗ್‌ನ್ನು ದೆಹಲಿ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯ ಟಿಬಿಟಿಯನ್ ನಿರಾಶ್ರಿತ ಕೇಂದ್ರದಲ್ಲಿನ ಕೆಲವು ಲಾಮಾಗಳಿಗೆ 2 ರಿಂದ 3 ಲಕ್ಷ ರೂಪಾಯಿ ನೀಡಿ ದಲೈ ಲಾಮಾ ಹಾಗೂ ಅವರ ಸಹಚರರ ಮೇಲೆ ಬೇಹುಗಾರಿ ನಡೆಸುತ್ತಿದ್ದ ಚಾರ್ಲಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಚೀನಾ ಗಡಿಗೆ ಎಚ್‌ಎಎಲ್‌ನ 2 ಲಘು ಕಾಪ್ಟರ್‌ ನಿಯೋಜನೆ!

ಹವಾಲ ಹಣದ ವರ್ಗಾವಣೆ ಸೇರಿದಂತೆ ಸುಮಾರು 300 ಕೋಟಿ ರೂಪಾಯಿ ಹಣ ವ್ಯವಹಾರ ನಡೆಯುತ್ತಿರುವುದು ಐಟಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಕಾರ್ಯಪ್ರವೃತ್ತರಾದ ಅಧಿಕಾರಿಗಳು ಚಾರ್ಲಿ ಪೆಂಗ್‌ನನ್ನು ಬಂಧಿಸಿದಾಗ ಸ್ಫೋಟಕ ಮಾಹಿತಿಗಳು ಹೊರಬಿದ್ದಿದೆ. 

ಚೀನಿ ಲ್ಯಾಪ್‌ಟಾಪ್‌, ಕ್ಯಾಮೆರಾ ಆಮದಿಗೆ ಬ್ರೇಕ್?

ಚಾರ್ಲಿ ಪೆಂಗ್ ತನ್ನ ಕಚೇರಿಯ ಹುಡುಗನ ಮೂಲಕ ಹಣದ ಪ್ಯಾಕೆಟ್‌ಗಳನ್ನು ಟಿಬೆಟಿಯನ್ ನಿರಾಶ್ರಿತ ಕೇಂದ್ರಕ್ಕೆ ಸಾಗಿಸಲಾಗುತಿತ್ತು.  ಚೀನಾದ ಮೊಬೈಲ್ ಆ್ಯಪ್ ವಿಚಾಟ್ ಮೂಲಕ ಸಂವಹನ ನಡೆಯುತ್ತಿತ್ತು. ನಿರಾಶ್ರಿತ ಕೇಂದ್ರದಲ್ಲಿನ ಕೆಲ ಲಾಮಾಗಳಿಗೆ ಹಣ ಹಂಚಲಾಗಿದೆ. ಬಳಿಕ ಇವರಿಂದ ಮಾಹಿತಿ ಪಡೆದು ಬೇಹುಗಾರಿಕೆ ನಡೆಸುತ್ತಿದ್ದ. ಈತನ ಸಂವಹನಗಳೆಲ್ಲಾ ಚೀನಾ ಮೂಲಕ ವಿಚಾಟ್ ಆ್ಯಪ್ ಮೂಲಕ ನಡೆಯುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಚಾರ್ಲಿ ಪೆಂಗ್ ಲೀ ಹವಾಲ ಹಣ ವ್ಯವಹಾರಕ್ಕೆ ಸ್ಥಳೀಯ ಚಾರ್ಟೆಂಡ್ ಅಕೌಂಟ್(CA) ನೆರವು ನೀಡಿದ್ದಾನೆ. CA ತನ್ನ 40 ಬ್ಯಾಂಕ್ ಅಕೌಂಟ್ ಮೂಲಕ ವ್ಯವಹಾರ ನಡೆಸಿದ್ದಾನೆ. ಬರೋಬ್ಬರಿ 300 ಕೋಟಿ ರೂಪಾಯಿಗಳ ವ್ಯವಹಾರ ಐಟಿ ಅಧಿಕಾರಿಗಳಿಗೆ ಸುಳಿವು ನೀಡಿದೆ. ಚೀನಾ ಕಂಪನಿಗಳಿಗೆ ಹಾಗೂ ಹಾಂಕ್ ಕಾಂಗ್ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ

Follow Us:
Download App:
  • android
  • ios