ಚೀನಾ ಗಡಿಗೆ ಎಚ್‌ಎಎಲ್‌ನ 2 ಲಘು ಕಾಪ್ಟರ್ ನಿಯೋಜನೆ!
ಚೀನಾ ಗಡಿಗೆ ಎಚ್‌ಎಎಲ್‌ನ 2 ಲಘು ಕಾಪ್ಟರ್ ನಿಯೋಜನೆ| ವಿಶ್ವದ ಅತ್ಯಂತ ಹಗುರ ದಾಳಿ ಕಾಪ್ಟರ್‌ಗಳಿವು
ಬೆಂಗಳೂರು(ಆ.13): ಲಡಾಖ್ ಗಡಿಯಲ್ಲಿ ಚೀನಾದೊಂದಿಗೆ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿರುವಾಗಲೇ, ಭಾರತೀಯ ವಾಯುಪಡೆಯು ಬೆಂಗಳೂರಿನ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) ಉತ್ಪಾದಿಸಿರುವ 2 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಲೇಹ್‌ನಲ್ಲಿ ನಿಯೋಜಿಸಿದೆ. ಜೊತೆಗೆ ಅಲ್ಲಿ ಇತ್ತೀಚೆಗೆ ಪ್ರಾಯೋಗಿಕವಾಗಿ ನಡೆಸಿದ ಎಲ್ಲಾ ಕಸರತ್ತುಗಳಲ್ಲೂ ಈ ಕಾಪ್ಟರ್‌ಗಳು ಸೈ ಎನ್ನಿಸಿಕೊಂಡಿವೆ.
ಚೀನಿ ಲ್ಯಾಪ್‌ಟಾಪ್, ಕ್ಯಾಮೆರಾ ಆಮದಿಗೆ ಬ್ರೇಕ್?
ಈ ಕುರಿತು ಹೇಳಿಕೆ ನೀಡಿರುವ ಎಚ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್, ‘ಭಾರತೀಯ ಸೇನೆಯ ಬೇಡಿಕೆಗೆ ಅನುಗುಣವಾಗಿ ಎಚ್‌ಎಎಲ್ ಸಿದ್ಧಪಡಿಸಿರುವ ವಿಶ್ವದ ಅತ್ಯಂತ ಲಘು ಯುದ್ಧ ಕಾಪ್ಟರ್‌ಗಳನ್ನು ಇತ್ತೀಚೆಗೆ ಅತ್ಯಂತ ಎತ್ತರದ ಪ್ರದೇಶವಾದ ಲೇಹ್‌ನಲ್ಲಿ ನಿಯೋಜಿಸಲಾಗಿದೆ. ವಾಯುಪಡೆಯ ಉಪಮುಖ್ಯಸ್ಥ ಏರ್‌ಮಾರ್ಷಲ್ ಹರ್ಜಿತ್‌ಸಿಂಗ್ ಅರೋರಾ ಅವರೇ ಲೇಹ್‌ನಲ್ಲಿ ಎಚ್‌ಎಎಲ್‌ನ ಟೆಸ್ಟ್ ಪೈಲಟ್ ಜೊತೆ ಮುಂಚೂಣಿ ಸೇನಾ ನೆಲೆಯವರೆಗೂ ಸಂಚಾರ ಕೈಗೊಂಡು ಅಣಕು ದಾಳಿಯ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಅತ್ಯಂತ ಕಡಿದಾದ ಹೆಲಿಪ್ಯಾಡ್ ಮೇಲೆ ಕಾಪ್ಟರ್ ಇಳಿಸುವ ಸಾಹಸವನ್ನೂ ಯಶಸ್ವಿಯಾಗಿ ನೆರವೇರಿಸಲಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಲಾಗಿರುವ ಕಾಪ್ಟರ್‌ಗಳಾಗಿವೆ. ಹಗಲು ಅಥವಾ ರಾತ್ರಿ ಯಾವುದೇ ವೇಳೆ ಗುರಿಯ ಮೇಲೆ ಯಶಸ್ವಿಯಾಗಿ ದಾಳಿ ನಡೆಸುತ್ತವೆ’ ಎಂದು ಹೇಳಿದ್ದಾರೆ.
ಅತ್ಯಂತ ಎತ್ತರದ ಪ್ರದೇಶಗಳಲ್ಲೂ ಕೂಡ ಸೂಕ್ತ ಶಸ್ತಾ್ರಸ್ತ್ರಗಳನ್ನು ಹೊತ್ತೊಯ್ದು ದಾಳಿ ನಡೆಸುವ ಸಾಮರ್ಥ್ಯವೇ ಈ ಕಾಪ್ಟರ್ ಅನ್ನು ಇತರೆ ಕಾಪ್ಟರ್‌ಗಳಿಂದ ವಿಭಿನ್ನವಾಗಿಸಿದೆ ಎಂದು ಮಾಧವನ್ ಹೇಳಿದ್ದಾರೆ.
ಇದೇ ವೇಳೆ ಭಾರತೀಯ ಸೇನೆಗೆ ಇಂಥ 160 ಕಾಪ್ಟರ್‌ಗಳ ಅಗತ್ಯವಿದ್ದು, ಈ ಪೈಕಿ 15 ಕಾಪ್ಟರ್ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಈಗಾಗಲೇ ಅನುಮತಿ ನೀಡಿದೆ ಎಂದು ಮಾಧವನ್ ತಿಳಿಸಿದ್ದಾರೆ.
ಹಿಮಾಚಲದ ಪರ್ವತಗಳಲ್ಲಿ ರಫೇಲ್ ರಾತ್ರಿ ಸಮರಾಭ್ಯಾಸ!
ಕಾಪ್ಟರ್ ಸಾಮರ್ಥ್ಯ
51 ಅಡಿ ಉದ್ದ, 15 ಅಡಿ ಎತ್ತರ
700 ಕೆಜಿ: ಶಸ್ರ್ತಾಸ್ತ್ ಹೊತ್ತೊಯ್ಯುವ ಸಾಮರ್ಥ್ಯ
167 ಕಿ.ಮೀ: ಪ್ರತಿ ಗಂಟೆಗೆ ಇಷ್ಟುವೇಗ ಸಾಗಬಲ್ಲದು
550 ಕಿ.ಮೀ: ಶಸ್ತಾ್ರಸ್ತ್ರ ಹೊತ್ತು ಇಷ್ಟುದೂರ ಸಾಗಬಲ್ಲದು