ಭಾರತದ ಲಸಿಕೆ ಘಟಕದ ಮೇಲೆ ಚೀನಾ ಸೈಬರ್ ದಾಳಿ ಸಂಚು ಬಹಿರಂಗ!
ಭಾರತದ ಗಡಿಯ ನೇರಾ ನೇರಾ ಯುದ್ಧ ಮಾಡಲು, ಸೆಣಸಾಡಲು ಚೀನಾಗೆ ಸಾಧ್ಯವಾಗುತ್ತಿಲ್ಲ ಅನ್ನೋ ಸತ್ಯ ಅರಿವಾದ ಬೆನ್ನಲ್ಲೇ ಚೀನಾ ಹಲವು ಕುತಂತ್ರಗಳನ್ನು ಭಾರತದ ಮೇಲೆ ಮಾಡಿದೆ. ಈ ಮಾಹಿತಿಗಳು ಒಂದರ ಮೇಲೊಂದರಂತೆ ಬಹಿರಂಗಗೊಳ್ಳುತ್ತಿದೆ. ಇದೀಗ ಭಾರತದ ಕೊರೋನಾ ಲಸಿಕೆ ಘಟದ ಮೇಲೆ ಚೀನಾ ಸೈಬರ್ ದಾಳಿ ಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.
ನವದೆಹಲಿ(ಮಾ.01): ಮುಂಬೈನಲ್ಲಿ ನಡೆದ ವಿದ್ಯತ್ ಕಡಿತದ ಹಿಂದೆ ಚೀನಾದ ಸೈಬರ್ ದಾಳಿ ಕೈವಾಡವಿದೆ ಅನ್ನೋದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಭಾರತದ ಲಸಿಕೆ ಘಟಕದ ಮೇಲೆ ಸೈಬರ್ ದಾಳಿ ಯತ್ನವನ್ನು ಚೀನಾ ನಡೆಸಿತ್ತು ಅನ್ನೋ ಮಾಹಿತಿಯೂ ಇದೀಗ ಬಹಿರಂಗಗೊಂಡಿದೆ.
ಭಾರತದ ಲಸಿಕೆಗೆ ಆದ್ಯತೆ, ಚೀನಾಗೆ ಶಾಕ್ ಕೊಟ್ಟ ಲಂಕಾ!
ಗಲ್ವಾನ್ ಘರ್ಷಣೆ ಬಳಿಕ ಚೀನಾ ಅಕ್ಷರಶಃ ನಲುಗಿದೆ. ನೇರಾ ನೇರಾ ನಿಂತು ಯುದ್ಧ ಮಾಡುವ ತಾಕತ್ತಿನ ಕುರಿತು ಚೀನಾಗೆ ಅನುಮಾನ ಕಾಡತೊಡಗಿದೆ. ಹೀಗಾಗಿ ಚೀನಾ ಸರ್ಕಾರದ ಅಧೀಕೃತ ಸೈಬರ್ ಹ್ಯಾಕರ್ಸ್, ಭಾರತದ ಮೇಲೆ ಸೈಬರ್ ದಾಳಿ ಯತ್ನ ನಡೆಸಿರುವುದು ಇದೀಗ ಅಮರಿಕದ ರೆಕಾರ್ಡೆಡ್ ಫ್ಯೂಚರ್ ಅಧ್ಯಯನ ವರದಿ ಹಾಗೂ ಸೈಬರ್ ಗುಪ್ತಚರ ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ.
ಮತ್ತಷ್ಟು ಪ್ರದೇಶಗಳಿಂದ ಚೀನಾ ಸೇನೆ ಹಿಂತೆಗೆತ!...
ಭಾರತದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಘಟದ ಐಟಿ ವಿಭಾಗದ ಮೇಲೆ ಚೀನಾ ಸೈಬರ್ ದಾಳಿ ಯತ್ನ ಮಾಡಿತ್ತು. ಭಾರತ್ ಬಯೋಟೆಕ್ ಹಾಗೂ ಸೆರಮ್ ಇನ್ಸಿಸ್ಟಿಟ್ಯೂಟ್ ಲಸಿಕೆ ತಯಾರಿಕಾ ಘಟಕದ ಐಟಿ ವಿಭಾಗವನ್ನು ಗುರಿಯಾಗಿಸಿ ಚೀನಾ ಸೈಬರ್ ದಾಳಿ ಯತ್ನ ನಡೆಸಿತ್ತು ಎಂದು ಸಿಫರ್ಮಾ ಸೈಬರ್ ಗುಪ್ತಚರ ಸಂಸ್ಥೆ ಹೇಳಿದೆ.
ಎರಡು ಲಸಿಕಾ ಘಟಕದಲ್ಲಿನ ಕೆಲ ಲೋಪದೋಷಗಳನ್ನು ಪತ್ತೆ ಹಚ್ಚಿ, ದಾಳಿಗೆ ಯತ್ನ ನಡೆಸಿದೆ. ಈ ಮೂಲಕ ಭಾರತದ ಲಸಿಕೆ ಉತ್ಪಾದನೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿತ್ತು. ಲಸಿಕೆ ತಯಾರಿಕೆಯಲ್ಲಿ ಭಾರತವನ್ನು ಮೀರಿಸುವ ಯತ್ನದಲ್ಲಿರುವ ಚೀನಾ, ಈ ರೀತಿಯ ಕುತಂತ್ರ ಮಾಡಿದೆ ಅನ್ನೋ ಮಾಹಿತಿ ಇದೀಗ ಭಾರತೀಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.