ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ಮತ್ತು ವಿರಾಮ, ನೇರೆಯ ಚೀನಾದ ರಕ್ಷಣಾ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಪಾಕ್ ಬಳಸಿದ ಚೀನಾ ಮೇಡ್ ಶಸ್ತ್ರಾಸ್ತ್ರಗಳನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆ ಗಡಿ ದಾಟುವ ಮೊದಲೇ ಪುಡಿಗಟ್ಟಿದ್ದರಿಂದ ಜಾಗತಿಕವಾಗಿ ಚೀನಾ ಅಸ್ತ್ರಗಳ ವರ್ಚಸ್ಸು ಕುಸಿದಿದೆ. ಪರಿಣಾಮವಾಗಿ, ಚೀನಾದ ರಕ್ಷಣಾ ಷೇರುಗಳ ಬೆಲೆಯಲ್ಲಿ ಮಂಗಳವಾರ ಶೇ.9ರಷ್ಟು ಕುಸಿತವಾಗಿದೆ.
ಬೀಜಿಂಗ್ (ಮೇ.14): ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ಮತ್ತು ವಿರಾಮ, ನೇರೆಯ ಚೀನಾದ ರಕ್ಷಣಾ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಪಾಕ್ ಬಳಸಿದ ಚೀನಾ ಮೇಡ್ ಶಸ್ತ್ರಾಸ್ತ್ರಗಳನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆ ಗಡಿ ದಾಟುವ ಮೊದಲೇ ಪುಡಿಗಟ್ಟಿದ್ದರಿಂದ ಜಾಗತಿಕವಾಗಿ ಚೀನಾ ಅಸ್ತ್ರಗಳ ವರ್ಚಸ್ಸು ಕುಸಿದಿದೆ. ಪರಿಣಾಮವಾಗಿ, ಚೀನಾದ ರಕ್ಷಣಾ ಷೇರುಗಳ ಬೆಲೆಯಲ್ಲಿ ಮಂಗಳವಾರ ಶೇ.9ರಷ್ಟು ಕುಸಿತವಾಗಿದೆ.
ಅತ್ತ ಭಾರತ-ಪಾಕ್ ನಡುವೆ ಕದನವಿರಾಮ ಘೋಷಣೆಯಾಗಿರುವುದರಿಂದ, ಚೀನಾ ಆಯುಧಗಳಿಗೆ ಬೇಡಿಕೆ ಕುಸಿಯಲಿರುವುದು ಸಹ ಷೇರು ಕುಸಿತಕ್ಕೆ ಕಾರಣವಾಗಿದೆ. ಸಮರವಿರಾಮಕ್ಕೂ ಮೊದಲು, ಪಾಕಿಸ್ತಾನದಿಂದ ಚೀನಾ ಅಸ್ತ್ರಗಳಿಗೆ ಅಧಿಕ ಬೇಡಿಕೆಯ ನಿರೀಕ್ಷೆ ಇದ್ದ ಕಾರಣ, ಷೇರು ಬೆಲೆಗಳಲ್ಲಿ ಏರಿಕೆಯಾಗಿತ್ತು.
ಚೀನಾದ ಏರೋಸ್ಪೇಸ್ ಮತ್ತು ರಕ್ಷಣಾ ಸೂಚ್ಯಂಕವಾದ ಹ್ಯಾಂಗ್ ಸೆಂಗ್ ಶೇ.2.9ರಷ್ಟು ಕುಸಿತ ಕಂಡಿದೆ. ಪಿಎಲ್-15 ಕ್ಷಿಪಣಿ ಉತ್ಪಾದಕ ಝುಝೌ ಹೊಂಗ್ಡಾ ಇಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಷೇರುಬೆಲೆ ಶೇ.9.2ರಷ್ಟು ಬಿದ್ದಿದೆ. ಜೆ-10ಸಿ ಮತ್ತು ಜೆ-17 ಯುದ್ಧವಿಮಾನ ತಯಾರಕ ಅವಿಕ್ ಚೆಂಗ್ಡುವಿನ ಷೇರುಮೌಲ್ಯ ಶೇ.9.31ರಷ್ಟು ಇಳಿದಿದೆ.
ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ದಾಳಿಯ ನಂತರ, ಮೇ 10 ರಂದು ಕದನ ವಿರಾಮ ಘೋಷಣೆಯ ನಂತರ ಮಾರುಕಟ್ಟೆ ಪ್ರತಿಕ್ರಿಯೆ ಕಂಡುಬಂದಿತು. ಭಾರತದ 'ಆಪರೇಷನ್ ಸಿಂದೂರ್' ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು, ಇದು ಇಸ್ಲಾಮಾಬಾದ್‌ನಿಂದ ಡ್ರೋನ್‌ಗಳನ್ನು ಬಳಸಿಕೊಂಡು ಪ್ರತಿದಾಳಿ ನಡೆಸಲು ಕಾರಣವಾಯಿತು. ಪಾಕಿಸ್ತಾನದ ಪಡೆಗಳು ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡವು, ಆದರೂ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಚೀನಾದ ಎಲ್ಲ ಶಸ್ತ್ರಾಸ್ತ್ರಗಳನ್ನು ಪುಡಿಗಟ್ಟಿದ್ದವು.