ನವದೆಹಲಿ(ಸೆ.14): ಭಾರತದ ಗಡಿ ಪ್ರದೇಶದಲ್ಲಿ ಚೀನಾ ಸೇನೆ ನುಗ್ಗಿಸಿ ಶಾಂತಿ ಕದಡಿದ ಆಕ್ರಮಣಕಾರಿ ನೀತಿ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾತ್ರ ಪ್ರಮುಖವಾಗಿದೆ. ಆದರೆ ಕ್ಸಿ ಜಿನ್‌ಪಿಂಗ್ ಬಹುದೊಡ್ಡ ಯೋಜನೆ ಹಾಗೂ ರಾಜಕೀಯ ಲಾಭದೊಂದಿಗೆ ಮುನ್ನಗ್ಗುವ ಪ್ಲಾನ್ ಸಂಪೂರ್ಣ ವಿಫಲಗೊಂಡಿದೆ ಎಂದು ಅಮರಿಕದ ಪ್ರಮುಖ ಮಾಧ್ಯಮ ವರದಿ ಮಾಡಿದೆ.

ಪ್ಯಾಂಗಾಂಗ್ ಆಯ್ತು, ಈಗ ಸ್ಪಾಂಗ್ಗೂರ್‌ ಸರೋವರ ಬಳಿ ಚೀನಾ ಭಾರೀ ನಿಯೋಜನೆ

ಕ್ಸಿ ಜಿನ್‌ಪಿಂಗ್ ಉದ್ದೇಶ ಭಾರತದ ಗಡಿ ಪ್ರದೇಶದೊಳಕ್ಕೆ ಚೀನಾ ಸೇನೆ ನುಗ್ಗಿಸಿ ಗಡಿ ವಿಸ್ತರಣೆ ಮಾಡುವುದು ಮಾತ್ರ ಆಗಿರಲಿಲ್ಲ. ಇದರ ಜೊತೆಗೆ ಚೀನಾದಲ್ಲಿ ತನ್ನ ವಿರುದ್ಧ ಕೇಳಿ ಬರುತ್ತಿರುವ ಅಸಮರ್ಪಕ ಆಡಳಿತ, ಕೊರೋನಾ ವೈರಸ್ ಸೃಷ್ಟಿ, ಹಾಂಕಾಂಗ್ ಸೇರಿದಂತೆ ಚೀನಾ ಅಧೀನದಲ್ಲಿರುವ ರಾಷ್ಟ್ರಗಳ ವಿರೋಧದಿಂದ ಹೊರಬರಲು ಈ ಮಾಸ್ಟರ್ ಪ್ಲಾನ್ ಮಾಡಿದ್ದರು ಅನ್ನೋ ಮಾಹಿತಿಯು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜತಾಂತ್ರಿಕ ಹೊಡೆತ: ಚೀನಾಗೆ ಗುಡೈ ಬೈ ಹೇಳಿ ಭಾರತದ ಜೊತೆ ಕೈ ಜೋಡಿಸಿದ ಜರ್ಮನಿ!

ಲಡಾಖ್ ಪ್ರಾಂತ್ಯದಲ್ಲಿ ಚೀನಾ ಸೇನೆ ನುಗ್ಗಿಸಿದ ಕ್ಸಿ ಜಿನ್‌ಪಿಂಗ್‌ಗೆ ತೀವ್ರ ಮುಖಭಂಗವಾಗಿದೆ. ಕಾರಣ ಭಾರತೀಯ ಸೇನೆಯ ಪ್ರತಿರೋಧ ಎದುರಿಸಲಾಗದ ಚೀನಾ ಸೇನೆ ಹಿಂದೆ ಸರಿದಿದ್ದು ಮಾತ್ರವಲ್ಲ 60ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ವರದಿಯಲ್ಲಿ ಹೇಳಿದೆ. ಗಲ್ವಾನ್ ಕಣಿವೆಯಲ್ಲಿನ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾ ಈ ಮಾಹಿತಿಯನ್ನು ಗೌಪ್ಯವಾಗಿಟ್ಟಿದೆ. ಆದರೆ ವರದಿಯಲ್ಲಿ ಚೀನಾದ 60ಕ್ಕೂ ಹೆಚ್ಚು ಮಂದಿ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ.

ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಭಾರಿಗೆ ಭಾರತ ಸೇನೆ ಈ ರೀತಿಯ ಆಕ್ರಣಕಾರಿ ತಿರುಗೇಟು ನೀಡಿದೆ. ಈ ಹೊಡೆತಕ್ಕೆ ಚೀನಾ ಸೇನೆ ಕಂಗಾಲಾಗಿದೆ. ಚೀನಾ ವಾಸ್ತವ ಗಡಿ ನಿಯಂತ್ರಣ ರೇಖೆ ಮುಂದೆ ಬರುತ್ತಿದ್ದಂತೆ ಭಾರತದ ತೀವ್ರ ಪ್ರತಿರೋಧವನ್ನು ನಿರೀಕ್ಷೆ ಮಾಡಿರಲಿಲ್ಲ. ಚೀನಾ ಯೋಜಿತ ಪ್ಲಾನ್, ಭಾರತೀಯ ಸೇನೆ ಮುಂದೆ ವಿಫಲವಾಯಿತು ಎಂದು ವರದಿಯಲ್ಲಿ ಹೇಳಿದೆ.

ಕ್ಸಿ ಜಿನ್‌ಪಿಂಗ್ ತನ್ನ ಮೇಲಿನ ಆರೋಪ, ತನ್ನ ಎಲ್ಲಾ ಸಮಸ್ಯೆಗಳಿಗೆ ಭಾರತದ ಗಡಿ ಉತ್ತರವಾಗಲಿದೆ. ಈ ಮೂಲಕ ಚೀನಾ ನಾಗರೀಕರ ಗಮನವನ್ನು ದೇಶದ ಗಡಿ, ನಮ್ಮ ಯೋಧರು ಸೇರಿದಂತೆ ಭಾವನಾತ್ಮಕ ವಿಚಾರಕ್ಕೆ ಕೊಂಡೊಯ್ಯಲು ಯತ್ನಿಸಿದ್ದ ಕ್ಸಿ ಜಿನ್‌ಪಿಂಗ್ ಯತ್ನಗಳೆಲ್ಲಾ  ಕೈಕೊಟ್ಟಿದೆ. ಇದು ಮತ್ತಷ್ಟು ಸಮಸ್ಯೆಯನ್ನು ತಂದುದೊಡ್ಡಿದೆ ಎಂದು ವರದಿಯಲ್ಲಿ ಹೇಳಿದೆ.