ರಾಜತಾಂತ್ರಿಕ ಹೊಡೆತ: ಚೀನಾಗೆ ಗುಡ್ ಬೈ ಹೇಳಿ ಭಾರತದ ಜೊತೆ ಕೈ ಜೋಡಿಸಿದ ಜರ್ಮನಿ!

ಭಾರತದ ಜೊತೆ ಪ್ರತಿ ದಿನ ಒಂದಲ್ಲ ಒಂದು ಕಿರಿಕ್ ಮಾಡುತ್ತಿರುವ ಚೀನಾಗೆ ಇದೀಗ ಇತರ ರಾಷ್ಟ್ರಗಳು ಸರಿಯಾಗಿ ತಿರುಗೇಟು ನೀಡುತ್ತಿದೆ. ಜರ್ಮನಿ ಇದೀಗ ಚೀನಾ ಜೊತೆಗಿನ ರಾಜತಾಂತ್ರಿಕ ಒಪ್ಪಂದಗಳಿಗೆ ಗುಡ್ ಬೈ ಹೇಳಿ ಭಾರತದ ಜೊತೆ ಕೈಜೋಡಿಸಿದೆ.

Germany decided to focus on maintaining stronger partnerships with India a major jolt to China

ನವದೆಹಲಿ(ಸೆ.14): ಭಾರತದ ವಿರುದ್ಧ ಸಮರ ಸಾರಿರುವ ಚೀನಾಗೆ ಇದೀಗ ಏಕಾಂಗಿಯಾಗುತ್ತಿದೆ. ಪ್ರಮುಖ ರಾಷ್ಟ್ರಗಳು ಚೀನಾ ಜೊತೆಗಿನ ಒಪ್ಪಂದಕ್ಕೆ ಗುಡ್ ಬೈ ಹೇಳುತ್ತಿದೆ. ಇದೀಗ ಜರ್ಮನಿ ಸರದಿ. ಜರ್ಮನಿ ಡ್ರ್ಯಾಗನ್ ರಾಷ್ಟ್ರಕ್ಕೆ ರಾಜತಾಂತ್ರಿಕ ಹೊಡೆತ ನೀಡಿದೆ. ಚೀನಾ ಜೊತೆಗಿನ ಒಪ್ಪಂದಕ್ಕೆ ಬ್ರೇಕ್ ಹಾಕಿ ಇದೀಗ ಭಾರತದ ಜೊತೆ ಸುದೀರ್ಘ ಒಪ್ಪಂದಕ್ಕೆ ಮುಂದಾಗಿದೆ.

ಜಗತ್ತನ್ನೇ ಆವರಿಸಿದ ನಮಸ್ಕಾರ, ಭಾರತದ ಶಕ್ತಿ ಅಂದರೆ ಇದು

ಜರ್ಮನಿ ಇದೀಗ ಇಂಡೋ-ಪೆಸಿಫಿಕ್ ಕ್ಲಬ್ ಸೇರಿಕೊಂಡಿದೆ. ಇದಕ್ಕಾಗಿ ಜರ್ಮನಿ ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ. ಈ ಮೂಲಕ ಒಪ್ಪಂದ ದೇಶದಲ್ಲಿನ ಕಾನೂನಿನ ನಿಯಮ ಮತ್ತು ಮುಕ್ತ ಮಾರುಕಟ್ಟೆಗಳನ್ನು ಉತ್ತೇಜಿಸಲು ಮುಂದಾಗಿದೆ. ಭಾರತ-ಪೆಸಿಫಿಕ್  ಕ್ಲಬ್‌ನಲ್ಲಿ ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ASEAN ಸದಸ್ಯತ್ವ ರಾಷ್ಟ್ರಗಳು  ಸೇರಿವೆ. 

ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜರ್ಮನ್ ಕಂಪನಿಗಳಿಗೆ ತಂತ್ರಜ್ಞಾನವನ್ನು ಚೀನಾ ಸರ್ಕಾರ ಹಸ್ತಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ, ಅಂತಹ ಸಮಸ್ಯೆಗಳನ್ನು ಪರಿಹರಿಸಲು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಯೂನಿಯನ್ ಮತ್ತು ಚೀನಾ ನಡುವಿನ ಮಾತುಕತೆ ಸ್ಥಗಿತಗೊಂಡಿದೆ, ಈ ಕಾರಣದಿಂದ ಇದೀಗ ಜರ್ಮನಿ ಭಾರತದತ್ತ ಮುಖಮಾಡಿದೆ. 

ಚೀನಾದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಚೀನಾದ ಆರ್ಥಿಕತೆ ಏಷ್ಯಾ ಮೇಲೆ ಹೆಚ್ಚು ಅವಲಂಬಿತವಾಗಿದೆ. 

Latest Videos
Follow Us:
Download App:
  • android
  • ios