Asianet Suvarna News Asianet Suvarna News

ಚೀನಾ ಅಪ್ರಚೋದಿತ ದಾಳಿ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ!

ಭಾರತ ಹಾಗೂ ಚೀನಾ ಗಡಿ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯುವ ಸಾಧ್ಯತೆಗಳು ಕ್ಷೀಣಿಸಿವೆ. ಹಲವು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದ ಭಾರತೀಯ ಸೇನೆ ಪ್ರಯತ್ನಿಸುತ್ತಿದೆ. ಆದರೆ ಇದೀಗ ಚೀನಾ ಸೇನೆ ಮತ್ತೆ ಪ್ಯಾಂಗಾಂಗ್ ಸರೋವರದ ಬಳಿ ಮತ್ತೆ ಕಿರಿಕ್ ಮಾಡಿ ಯಥಾ ಸ್ಥಿತಿ ನಿಮಯ ಉಲ್ಲಂಘಿಸಿದೆ. ಆದರೆ ಭಾರತೀಯ ಸೇನೆ ಚೀನಾ ಯತ್ನವನ್ನು ವಿಪಳಗೊಳಿಸಿದೆ.

China tried to provoke India once again and undertook provocative military movements at Pangong Tso
Author
Bengaluru, First Published Aug 31, 2020, 3:28 PM IST

ಲಡಾಖ್(ಆ.31): ಹಲವು ತಿಂಗಳಿನಿಂದ ನಡೆಯುತ್ತಿರುವ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ಸೇನೆ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇದೀಗ ಚೀನಾ ನಿಯಮ ಉಲ್ಲಂಘನೆ ಮಾಡಿದೆ. ಪ್ಯಾಂಗಾಂಗ್ ಸರೋವರದ ಬಳಿ ಯಥಾ ಸ್ಥಿತಿ ಕಾಪಾಡಿಕೊಳ್ಳುವ ನಿಯಮವನ್ನು ಚೀನಾ ಸೇನೆ ಉಲ್ಲಂಘಿಸಿದೆ. ಆದರೆ ಚೀನಾ ನರಿ ಬುದ್ದಿ ಅರಿತಿದ್ದ ಭಾರತ ಸೇನೆ ಚೀನಾ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿತ್ತು. ಚೀನಾ ಅಪ್ರಚೋದಿತ ನಡೆಯನ್ನು ವಿಫಲಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

 ಸೇನೆ ಬಳಸಿ ಚೀನಾ ಗಡಿ ಖ್ಯಾತೆ ಬಗೆಹರಿಸಲು ಭಾರತ ಮುಕ್ತವಾಗಿದೆ: ತೀಕ್ಷ್ಣ ಎಚ್ಚರಿಕೆ ನೀಡಿದ CDS ರಾವತ್!

ಪ್ಯಾಂಗಾಂಗ್ ಸರೋವರದ ಬಳಿ ಪೀಪಲ್ಸ್ ಲಿಬರೇಶನ್ ಆರ್ಮಿ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ನಡೆ ಮುಂದುವರಿಸಿತ್ತು. ಗಡಿ ನಿಯಂತ್ರಣ ರೇಖೆ ವಸ್ತುಸ್ಥಿತಿ ಬದಲಿಸಲು ಮುಂದಾದ ಚೀನಾ ಸೇನೆಗೆ ಭಾರತ ತಿರುಗೇಟು ನೀಡಿದೆ. ಇಷ್ಟೇ ಅಲ್ಲ ಚೀನಾ ಸೇನೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದೆ.

ಚೀನಾ ಗಡಿಗೆ ಎಚ್‌ಎಎಲ್‌ನ 2 ಲಘು ಕಾಪ್ಟರ್‌ ನಿಯೋಜನೆ!

ಗಲ್ವಾನ್ ಗಡಿಯಲ್ಲಿ ಚೀನಾ ದಿಢೀರ್ ದಾಳಿಯಿಂದ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಬಳಿಕ ಚೀನಾ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು. ಹೀಗಾಗಿ ಇದೀಗ ಎರಡನೇ ಬಾರಿ ಪ್ಯಾಂಗಾಂಗ್ ಸರೋವರ ಬಳಿ ಚೀನಾ ಸೇನೆಯ ನಡೆಯನ್ನು ಭಾರತ ತಡೆದಿದೆ. ಆಗಸ್ಟ್ 29 ರಾತ್ರಿ ಚೀನಾ ಸೇನೆ ದಿಢೀರ್ ದಾಳಿಗೆ ಸಜ್ಜಾಗಿತ್ತು. ಆಗಸ್ಟ್ 30 ರಂದು ಭಾರತೀಯ ಸೇನೆ, ಚೀನಾ ಯತ್ನವನ್ನು ವಿಫಲಗೊಳಿಸಿದೆ. ರಾಜತಾಂತ್ರಿಕ ಮಟ್ಟದಲ್ಲಿ ಗಡಿ ನಿಯಂತ್ರಣ ರೇಖೆ ಕುರಿತು ಒಪ್ಪಂದ ಮಾಡಲಾಗಿದೆ. ಆದರೆ ಈ  ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ ಎಂದು ಭಾರತೀಯ ಸೇನೆ ಹೇಳಿದೆ.
 

Follow Us:
Download App:
  • android
  • ios