ಪಾಕಿಸ್ತಾನದ ಬಾಹ್ಯಾಕಾಶ ಸಂಶೋಧಕರಿಗೆ ಚೀನಾ ತನ್ನ ಸ್ವಂತ ನೆಲೆಯಲ್ಲಿ ತರಬೇತಿ ನೀಡಿ ಬಾಹ್ಯಾಕಾಶಕ್ಕೆ ಕಳುಹಿಸಲಿದೆ.

ಬೆಂಗಳೂರು: ಚೀನಾ ತನ್ನ ಬಾಹ್ಯಾಕಾಶ ನಿಲ್ದಾಣವಾದ ಟಿಯಾನ್‌ಗಾಂಗ್‌ಗೆ ಮೊದಲ ಬಾರಿಗೆ ವಿದೇಶಿ ಬಾಹ್ಯಾಕಾಶ ಪರಿಶೋಧಕರನ್ನು ಸ್ವಾಗತಿಸಲು ಸಿದ್ಧವಾಗಿದೆ. ಮುಂದಿನ ಸ್ನೇಹ ರಾಷ್ಟ್ರವಾದ ಪಾಕಿಸ್ತಾನದಿಂದ ಬಾಹ್ಯಾಕಾಶ ಯಾತ್ರಿಯನ್ನು ಟಿಯಾನ್‌ಗಾಂಗ್‌ಗೆ ಸ್ವಾಗತಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇದಕ್ಕಾಗಿ ಪಾಕಿಸ್ತಾನದಿಂದ ಆಯ್ಕೆಯಾದ ಬಾಹ್ಯಾಕಾಶ ಪರಿಶೋಧಕರಿಗೆ ಚೀನಾ ತರಬೇತಿ ನೀಡಲಿದೆ.

ಈ ಬಗ್ಗೆ ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ ಮತ್ತು ಪಾಕಿಸ್ತಾನದ ಸ್ಪೇಸ್ ಆಂಡ್ ಅಪ್ಪರ್ ಅಟ್ಮಾಸ್ಫಿಯರ್ ರಿಸರ್ಚ್ ಕಮಿಷನ್ ನಡುವೆ ಒಪ್ಪಂದ ಏರ್ಪಟ್ಟಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಚೀನಾದ ಸರ್ಕಾರಿ ಮಾಧ್ಯಮ ಈ ಬಗ್ಗೆ ಸುದ್ದಿ ಬಿಡುಗಡೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಚೀನಾ ಪಾಕಿಸ್ತಾನಕ್ಕಾಗಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ದೇಶವನ್ನು ಹೊರಗಿಟ್ಟ ನಂತರ ಚೀನಾ ಟಿಯಾನ್‌ಗಾಂಗ್ ನಿರ್ಮಿಸಿತು. ಚೀನಾದ ಅಧಿಕೃತ ಸೇನೆ - ಪೀಪಲ್ಸ್ ಲಿಬರೇಶನ್ ಆರ್ಮಿ - ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಆತಂಕದಿಂದ ಚೀನಾವನ್ನು ಹೊರಗಿಡಲಾಗಿತ್ತು. 2030 ರ ಮೊದಲು ಚೀನಾ ಬಾಹ್ಯಾಕಾಶ ಯಾತ್ರಿಕರನ್ನು ಚಂದ್ರನ ಮೇಲೆ ಇಳಿಸಲು ಯೋಜಿಸಿದೆ.

ಇದನ್ನೂ ಓದಿ: ರಂಜಾನ್‌ಗೆ ಮುನ್ನ ಪಾಕಿಸ್ತಾನ ಮಸೀದಿಯಲ್ಲಿ ಬಾಂಬ್ ಸ್ಫೋಟ, ಐವರು ಸಾವು!

ಬಾಹ್ಯಾಕಾಶದಲ್ಲಿ ಕೆಲವೇ ರಾಷ್ಟ್ರಗಳು ಮಾತ್ರ ಸ್ವಾಯತ್ತತೆಯನ್ನು ಹೊಂದಿದ್ದು, ಅಮೇರಿಕಾ, ರಷ್ಯಾ, ಚೀನಾ, ಜಪಾನ್ ಹಾಗೂ ಭಾರತ ರಾಷ್ಟ್ರಗಳು ಪೈಪೋಟಿಗಳಿದಿವೆ. ಭಾರತ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತಿದ್ದಂತೆ ಇದನ್ನು ಸಹಿಸಲಾಗದ ಚೀನಾ ತನ್ನ ಕುತಂತ್ರ ಬುದ್ಧಿ ತೋರಿಸಲು ಮುಂದಾಗಿದೆ. ಹೀಗಾಗಿಮ ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೂ ಬಾಹ್ಯಾಕಾಶದ ರುಚಿ ತೋರಿಸಲು ಚೀನಾ ಮುಂದಾಗಿದೆ.