ನವದೆಹಲಿ ( ಸೆ.11)   ಭಾರತ-ಚೀನಾ ಗಡಿಯಲ್ಲಿನ ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ನಮ್ಮ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಚೀನಾ ಹೇಳಿತ್ತು. ಇದೀಗ ಸೆ. 12, ಶನಿವಾರ ಯುವಕರನ್ನು ತವರಿಗೆ ಕಳಿಸುತ್ತೇನೆ ಎಂದು ತಿಳಿಸಿದೆ.

ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ. ಯುವಕರನ್ನು ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡುತ್ತೇನೆ ಎಂದು ಚೀನಾ ತಿಳಿಸಿದೆ. ಶನಿವಾರ ಯಾವ ವೇಳೆಯಲ್ಲಿಯಾದರೂ ಯುವಕರು ಹಿಂದಿರುಗಬಹುದು ಎಂದು ತಿಳಿಸಿದ್ದಾರೆ.

ಅರುಣಾಚಲದ ಯುವಕರಿಗೆ ಏನಾಗಿತ್ತು?

ಭಾರತೀಯ ಸೇನೆಯು ಕಳುಹಿಸಿದ್ದ ಹಾಟ್‌ಲೈನ್ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ), ಕಣ್ಮರೆಯಾಗಿದ್ದ ಐವರು ಭಾರತೀಯರು ತಮ್ಮ ಭಾಗದ ಗಡಿಯೊಳಗೆ ಇದ್ದಾರೆ ಎಂಬುದನ್ನು ಒಪ್ಪಿಕೊಂಡಿತ್ತು.

ದಾರಿತಪ್ಪಿ ಅಲೆದಾಡುತ್ತಿದ್ದ ಚೀನಾ ಪ್ರಜೆಗಳಿಗೆ ಆಹಾರ ನೀಡಿ, ಬಟ್ಟೆ ನೀಡಿ ಭಾರತೀಯ ಸೇನೆ ಮಾನವತಾವಾದ ಮೆರೆದಿತ್ತು.  ಒಟ್ಟಿನಲ್ಲಿ ಕಣ್ಮರೆಯಾಗಿದ್ದ ಯುವಕರು ಸುರಕ್ಷಿತವಾಗಿ ಮರಳುತ್ತಿರುವುದು ಸಂತಸ ತಂದಿದೆ.