ಕರಾವಳಿಯಲ್ಲಿ ಮೀನು ಸುಗ್ಗಿಗೆ ಕಾರಣ ಕೊರೊನಾ!

ಕರಾವಳಿಯ ಮೀನು ಪ್ರಿಯರಿಗೆ ಈ ಬಾರಿ ಧಾರಾಳವಾಗಿ  ಜನಪ್ರಿಯ ಮೀನುಗಳಾದ ಬೂತಾಯಿ ಮತ್ತು ಬಂಗುಡೆ. ಕಳೆದೆರಡು ವರ್ಷಗಳಲ್ಲಿ 100ರೂ.ಗೆ ಗರಿಷ್ಟ ಎರಡು ಸಿಗುತಿದ್ದ ದೊಡ್ಡ ಗಾತ್ರದ ತಾಜಾ ಬಂಗುಡೆ ಈ ಬಾರಿ ಕನಿಷ್ಠ 8-10ರಷ್ಟು ಧಾರಾಳವಾಗಿ ಸಿಗುತ್ತಿದೆ.

Impacts of COVID-19 fish harvest high in  on the coastal Karnataka gow

ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಡಿ.12): ಕರಾವಳಿಯ ಮೀನು ಪ್ರಿಯರಿಗೆ ಈ ಬಾರಿ ಧಾರಾಳವಾಗಿ  ಜನಪ್ರಿಯ ಮೀನುಗಳಾದ ಬೂತಾಯಿ ಮತ್ತು ಬಂಗುಡೆ. ಕಳೆದೆರಡು ವರ್ಷಗಳಲ್ಲಿ 100ರೂ.ಗೆ ಗರಿಷ್ಟ ಎರಡು ಸಿಗುತಿದ್ದ ದೊಡ್ಡ ಗಾತ್ರದ ತಾಜಾ ಬಂಗುಡೆ ಈ ಬಾರಿ ಕನಿಷ್ಠ 8-10ರಷ್ಟು ಧಾರಾಳವಾಗಿ ಸಿಗುತ್ತಿದೆ. ಇದಕ್ಕೆ ಕೊರೋನದಿಂದಾಗಿ ಕಳೆದೆರಡು ವರ್ಷಗಳಲ್ಲಿದ್ದ ಲಾಕ್‌ಡೌನ್ ಹಾಗೂ ಮೀನುಗಾರಿಕೆಯ ಮೇಲೆ ವಿಧಿಸಿದ್ದ ನಿರ್ಬಂಧಗಳೊಂದಿಗೆ, ಪದೇ ಪದೇ ಸಂಭವಿಸುತಿದ್ದ ಪ್ರಾಕೃತಿಕ ವಿಕೋಪಗಳಿಂದ ಮೀನುಗಾರಿಕೆ ಮೇಲೆ ವಿಧಿಸಲಾಗುತ್ತಿದ್ದ ನಿಷೇಧವೂ ಕಾರಣವಾಗಿದೆ.

ಕಳೆದೆರಡು ವರ್ಷಗಳಲ್ಲಿ ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆದೇ ಇರಲಿಲ್ಲ. ಇದು ಮೀನುಗಾರರ ಸಮುದಾಯ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿದ್ದರೂ, ಈ ಬಾರಿ ಕೆಲವು ಜಾತಿಯ ಮೀನುಗಳು ಭಾರೀ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಇವುಗಳಲ್ಲಿ ಬೂತಾಯಿ ಜಾತಿಯ ಮೀನಿಗೆ ಅಗ್ರಸ್ಥಾನ. ಕಳೆದ 3-4 ವರ್ಷಗಳಿಂದ ಮೀನುಗಾರರ ಬಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗದ ಬೂತಾಯಿಯ ಬೇರೆ ಬೇರೆ ಗಾತ್ರದ ಮೀನು ಈ ಬಾರಿ ಭಾರೀ ಪ್ರಮಾಣದಲ್ಲಿ ಸಿಗುತ್ತಿದೆ. ಹೀಗಾಗಿ ತೀರಾ ಕಡಿಮೆ ದರಕ್ಕೆ ಈ ಮೀನುಗಳು ಮಾರಾಟವಾಗುತ್ತಿವೆ.

ಇದರೊಂದಿಗೆ ಕಳೆದೆರಡು ವರ್ಷಗಳಲ್ಲಿ ಲೈಟ್ ಫಿಶಿಂಗ್, ಬೂಲ್‌ಟ್ರಾಲ್ ಸಹಿತ ಕಾನೂನು ಬಾಹಿರ ಮೀನುಗಾರಿಕೆಗೂ ಕಡಿವಾಣ ಬಿದ್ದ ಪರಿಣಾಮ ಸಮುದ್ರದಲ್ಲಿ ಮತ್ರ್ಯ ಸಂತಾನೋತ್ಪತ್ತಿ ವೃದ್ಧಿಯಾಗಿದ್ದು ಸಹ ರುಚಿಕರ ಬೂತಾಯಿ, ಬಂಗುಡೆ ಸಹಿತ ವಿವಿಧ ಜಾತಿಯ ಮೀನುಗಳು ಹೇರಳವಾಗಿ ಸಿಗಲು ಕಾರಣ ಎನ್ನಬಹುದು.

ಎರಡು ವರ್ಷಗಳ ಬಳಿಕ ಎಲ್ಲಾ ವಿಧದ ಮೀನುಗಾರಿಕೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ.ಆಳಸಮುದ್ರ ಮೀನುಗಾರಿಕೆ ಸೇರಿದಂತೆ ಎಲ್ಲಾ ವಿಧದ ಮೀನುಗಾರಿಕೆ ಬಿರುಸಾಗಿ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಸ್ವಲ್ಪ ನಿಧಾನಗತಿಯಲ್ಲಿದ್ದರೂ, ಈಗ ಕರಾವಳಿಯಲ್ಲಿ ಮೀನುಗಾರಿಕೆ ಚೇತರಿಸಿಕೊಂಡಿದೆ.

ಬಂಗುಡೆ, ಬೂತಾಯಿ ಸಹಿತ ಕೆಲ ಮೀನುಗಳು ವರ್ಷಕ್ಕೆ 2 ಬಾರಿ ಸಂತಾನ ವೃದ್ಧಿ ಮಾಡುತ್ತವೆ. ಬಂಗುಡೆ, ಬೂತಾಯಿಯದ್ದು ಸಾಮಾನ್ಯವಾಗಿ ಮಾರ್ಚ್‌ನಿಂದ ಮೇವರೆಗೆ ಹಾಗೂ ಜೂನ್‌ನಿಂದ ಆಗಸ್ಟ್‌ವರೆಗೆ ಸಂತಾನೋತ್ಪತ್ತಿ ಸಮಯವಾಗಿರುತ್ತದೆ. ಅವು ಸಮುದ್ರದಲ್ಲಿನ ಸೂಕ್ಷ್ಮ ಜೀವಿಗಳನ್ನು ತಿನ್ನುವುದರಿಂದ ಬೇಗನೇ ಬೆಳೆಯುತ್ತವೆ. ಹೀಗಾಗಿ ಈ ಬಾರಿ ನಾನಾ ಗಾತ್ರದ ಬಂಗುಡೆ, ಬೂತಾಯಿ ಮೀನುಗಳು ಹೇರಳವಾಗಿ ಲಭ್ಯವಾಗುತ್ತಿವೆ.

2019ಕ್ಕೂ ಮೊದಲು ಬೂತಾಯಿ, ಬಂಗುಡೆ ಲಭ್ಯವಾಗುವುದು ಬಹಳ ವಿರಳವಾಗಿತ್ತು. ಆದರೆ ಈ ಬಾರಿ ಮೀನುಗಾರಿಕಾ ಋತುವಿನಲ್ಲಿ ಮತ್ರ್ಯ ಸಂಪತ್ತು ಹೇರಳವಾಗಿ ಸಿಗುತ್ತಿದೆ. ಮೀನುಗಾರಿಕೆಗೆ ತೆರಳಿದ ಎಲ್ಲಾ ಬೋಟ್‌ಗಳಿಗೂ ಬಂಗುಡೆ, ಬೂತಾಯಿ ಸಿಕ್ಕರೆ ಮಾರುಕಟ್ಟೆಯಲ್ಲಿ ಸಮಸ್ಯೆ ಆಗುತ್ತದೆ. ಅಲ್ಲದೇ ಮತ್ರ್ಯ ಸಂತತಿಯೂ ನಾಶವಾಗುತ್ತದೆ. ಹೀಗಾಗಿ ಮೀನುಗಾರರೆಲ್ಲರೂ ಸಂಘಟಿತ ಹಾಗೂ ವ್ಯವಸ್ಥಿತ ಮೀನುಗಾರಿಕೆಗೆ ಮುಂದಾಗಬೇಕೆಂದು ಎಂದು ತಜ್ಞರು ಹೇಳುತ್ತಾರೆ.

Udupi: ನಾಡದೋಣಿ ಮೀನುಗಾರರ ಬಗೆ ಹರಿಯದ ಸಂಕಷ್ಟ, ಸೀಮೆಎಣ್ಣೆಗೆ ಅಗ್ರಹಿಸಿ ಬೀದಿಗಿಳಿದ ಬೆಸ್ತರು

ಮತ್ಸ್ತ ಸಂಪತ್ತು ಅತೀ ದುಬಾರಿ ಹಾಗೂ ಅತೀ ಬೇಗನೇ ಕೊಳೆಯುವ ವಸ್ತು. ದೊಡ್ಡ ಪ್ರಮಾಣದಲ್ಲಿ ಮತ್ತ್ವ ಲಭ್ಯವಾದರೆ ಸ್ಟೋರೇಜ್ ಮಾಡುವುದು ಕೂಡಾ ಸಮಸ್ಯೆ. ಇದಕ್ಕಾಗಿ ದಿನಕ್ಕಿಷ್ಟು ಬೋಟ್‌ಗಳಂತೆ ಮೀನುಗಾರಿಕೆ ನಡೆಸಬೇಕು. ಈ ಮೂಲಕ ಮತ್ತ್ವ ಸಂಪತ್ತು ಹಾಗೂ ಉದ್ಯಮವನ್ನು ಉಳಿಸಿಕೊಳ್ಳಬೇಕಾಗಿದೆ.ಮೊದಲೆಲ್ಲಾ ಅರಬ್ಬಿ ಸಮುದ್ರದಲ್ಲಿ ಬೂತಾಯಿ, ಬಂಗುಡೆ ಮೀನು ಯಥೇಚ್ಛವಾಗಿ ಸಿಗುತ್ತಿತ್ತು. ಆದರೆ ಕಳೆದ 3-4 ವರ್ಷಗಳಿಂದ ಬೂತಾಯಿ, ಬಂಗುಡೆ ಮೀನಿನ ಲಭ್ಯತೆ ಕಡಿಮೆ ಇತ್ತು. ಈ ಬಾರಿ ಮತ್ತೆ ಹೇರಳವಾಗಿ ಸಿಗುತ್ತಿದೆ. ರುಚಿಕರವೂ ಆಗಿದೆ ಎನ್ನುತ್ತಾರೆ.

Udupi news: 15 ದಿನಗಳಲ್ಲಿ ಸೀಮೆಎಣ್ಣೆ ಪೂರೈಕೆಗೆ ಮೀನುಗಾರರ ಹಕ್ಕೊತ್ತಾಯ

ವೈಜ್ಞಾನಿಕ ಮೀನುಗಾರಿಕೆ ಮತ್ತು ಕಾನೂನು ಬಾಹಿರ ಮೀನುಗಾರಿಕೆಗೆ ಕಡಿವಾಣ ಹಾಕಿರುವುದರಿಂದ ಮತ್ತ್ವ ಸಂತತಿ ಹೆಚ್ಚಳವಾಗಿದೆ. ಮತ್ತ್ವ ಸಂಪತ್ತು ಮರು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಒಂದೆರಡು ವರ್ಷ ಮತ್ರ್ಯ ಬೇಟೆಯಾಗದೇ ಹೋದರೆ ಸಂತತಿ ವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯವೂ‌ ಇದೆ.

Latest Videos
Follow Us:
Download App:
  • android
  • ios