* ಡೋಕ್ಲಾಂ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾ ಈ ಕುತಂತ್ರ* ಭೂತಾನ್‌ ಗಡಿಯಲ್ಲಿ ಚೀನಾ ಕಾಮಗಾರಿ: ಭಾರತಕ್ಕೆ ಆಪತ್ತು* 2 ಅಂತಸ್ತಿನ ಕಟ್ಟಡ ಸೇರಿ 200ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ

ನವದೆಹಲಿ(ಜ.13): ವಿವಾದಿತ ಭೂತಾನ್‌ ಗಡಿ ಪ್ರದೇಶದ 6 ಕಡೆಗಳಲ್ಲಿ 2 ಅಂತಸ್ತಿನ ಕಟ್ಟಡಗಳು ಸೇರಿದಂತೆ ಒಟ್ಟಾರೆ 200ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಚೀನಾ ಮತ್ತಷ್ಟುತ್ವರಿತಗೊಳಿಸಿದೆ. ಭೂತಾನ್‌ ಗಡಿಯಲ್ಲಿನ ಚೀನಾದ ಈ ಚಟುವಟಿಕೆಗಳನ್ನು ಖಚಿತಪಡಿಸುವ ಕ್ಯಾಪೆಲಾ ಸ್ಪೇಸ್‌ ಮತ್ತು ಪ್ಲಾನೆಟ್‌ ಲ್ಯಾಬ್ಸ್‌ನ ಉಪಗ್ರಹ ಫೋಟೋಗಳು ಅಮೆರಿಕದ ‘ಹಾಕ್‌ಐ360’ ದತ್ತಾಂಶ ವಿಶ್ಲೇಷಣಾ ಸಂಸ್ಥೆಗೆ ಲಭ್ಯವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೀನಾದ ಈ ಅಭಿವೃದ್ಧಿ ಕಾಮಗಾರಿಗಳು 2017ರಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ 2 ತಿಂಗಳ ಶೀತಲ ಸಮರಕ್ಕೆ ಕಾರಣವಾಗಿದ್ದ ಡೋಕ್ಲಾಂ ಪ್ರದೇಶಕ್ಕೆ ಕೇವಲ 9 ರಿಂದ 27 ಕಿ.ಮೀ ಇದೆ. ಹೀಗಾಗಿ ಡೋಕ್ಲಾಂನ ಚಿಕನ್‌ ನೆಕ್‌ ಎಂದೇ ಖ್ಯಾತವಾಗಿರುವ ಪ್ರದೇಶದ ಮೇಲೆ ತನ್ನ ಸ್ವಾಮ್ಯ ಸಾಧಿಸಲು ಚೀನಾ ಈ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಭೂತಾನ್‌ನ ಪಶ್ಚಿಮ ಗಡಿಯ ಕೆಲವು ಸ್ಥಳಗಳಲ್ಲಿ ರಸ್ತೆ ಮತ್ತು ರೈಲು ಹಳಿಗಳು ನಿರ್ಮಾಣ ಮತ್ತು ಸ್ಥಳಗಳ ಶುಚೀಕರಣಗಳ ಮೂಲಕ ಚೀನಾ ನಿರ್ಮಾಣ ಕಾಮಗಾರಿ ಚಟುವಟಿಕೆಗಳನ್ನು 2020ರಿಂದಲೇ ಆರಂಭಿಸಿದ್ದು, 2021ರಲ್ಲಿ ಈ ಕಾಮಗಾರಿಗಳಿಗೆ ಹೆಚ್ಚು ಚುರುಕು ನೀಡಿರುವುದು ಉಪಗ್ರಹ ಫೋಟೋಗಳಿಂದ ದೃಢಪಟ್ಟಿದೆ. ಅಲ್ಲದೆ ಈ ಬಗ್ಗೆ ಅಧ್ಯಯನ ನಡೆಸಿದ ಇತರೆ ಇಬ್ಬರು ತಜ್ಞರು, ಚೀನಾ ಕೈಗೊಂಡಿರುವ ಕಾಮಗಾರಿಗಳು ಭೂತಾನ್‌ ಮತ್ತು ಚೀನಾ ಮಧ್ಯೆ ವಿವಾದಕ್ಕೆ ಕಾರಣವಾದ ಸುಮಾರು 110 ಚದರ ಕಿ.ಮೀ ವ್ಯಾಪ್ತಿಯ ಭಾಗದಲ್ಲೇ ಇವೆ ಎಂದು ಹೇಳಿದ್ದಾರೆ.