ಮಕ್ಕಳ ಕೊವ್ಯಾಕ್ಸಿನ್ ಲಸಿಕೆಗೂ ತ್ವರಿತ ಅನುಮತಿ : ಸೌಮ್ಯ ಸ್ವಾಮಿನಾಥನ್
*ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ!
*WHO ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿಕೆ
*UNನ ಆರೋಗ್ಯ ಸಂಸ್ಥೆಯಿಂದ ಕೋವ್ಯಾಕ್ಸಿನ್ ಬಗ್ಗೆ ಟ್ವೀಟ್
ನವದೆಹಲಿ (ನ.5 ): ಭಾರತದ ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್‌ನ (Bharath Biotech) ಕೋವ್ಯಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದ ಬೆನ್ನಲ್ಲೇ, ಮಕ್ಕಳಿಗೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್ (Covaxin) ಲಸಿಕೆಗೂ ತ್ವರಿತ ಅನುಮೋದನೆ ಸಾಧ್ಯತೆ ದಟ್ಟವಾಗಿದೆ ಎಂದು ಡಬ್ಲ್ಯೂಎಚ್‌ಒ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ (Soumya Swaminathan) ಹೇಳಿದ್ದಾರೆ. ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿಗಾಗಿ ಈಗ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಸರಿಯಾದ ದತ್ತಾಂಶವನ್ನು ಒದಗಿಸಿದರೆ ಶೀಘ್ರವೇ ಮಕ್ಕಳಿಗೆ ನೀಡಲು ಮಾನ್ಯತೆ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಯಾವುದೇ ಲಸಿಕೆಗೆ ಮಾನ್ಯತೆ ನೀಡಲು 50ರಿಂದ 60 ದಿನಗಳು ಬೇಕಾಗುತ್ತದೆ. ಕೆಲವೊಂದು ಲಸಿಕೆಗಳಿಗೆ ಮಾನ್ಯತೆ ನೀಡಲು 165 ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೋವ್ಯಾಕ್ಸಿನ್‌ಗೆ 90ರಿಂದ 100 ದಿನಗಳ ಅವಧಿಯಲ್ಲಿ ಮಾನ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಲಸಿಕೆ ಪಡೆವವರ ಸಂಖ್ಯೆ 40% ಕುಸಿತ..!
ವಿಶ್ವ ಆರೋಗ್ಯ ಸಂಸ್ಥೆ (WHO) ತಾಂತ್ರಿಕ ಸಲಹಾ ಮಂಡಳಿ ಕೋವ್ಯಾಕ್ಸಿನ್ (Covaxin) ತುರ್ತು ಬಳಕೆಗೆ ಅನುಮತಿ ನೀಡಿದೆ. ಭಾರತ್ ಬಯೋಟೆಕ್‌ನ ಲಸಿಕೆ COVAXIN ಗೆ ತುರ್ತು ಬಳಕೆ ಅನುಮತಿ ಸಿಕ್ಕಿದೆ. World Health Organisation ಕೋವ್ಯಾಕ್ಸಿನ್‌ಗೆ ಅನುಮೋದನೆಯಿಂದ ಲಸಿಕೆ ತೆಗೆದುಕೊಂಡ ಭಾರತೀಯರು ಹಲವಾರು ದೇಶಗಳಿಗೆ ಕ್ವಾರಂಟೈನ್ ಇಲ್ಲದೆ ಪ್ರಯಾಣಿಸಬಹುದಾಗಿದೆ . ಅಧ್ಯಯನಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಸಹಾಯಕವಾಗಲಿದೆ. ವಿಶ್ವ ಅರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯ (Technical Advisory Group) ಬುಧವಾರದ ಸಭೆಯ ನಂತರ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ತುರ್ತು ಬಳಕೆಯ ಪಟ್ಟಿಯ ಸೇರಿಸುವಂತೆ ಶಿಫಾರಸು ಮಾಡಿದೆ.
ಇದು ಬಹು ನಿರೀಕ್ಷಿತ ನಿರ್ಧಾರವಾಗಿದ್ದು, ಇದು ಅಂತಾರಾಷ್ಟ್ರೀಯ ಪ್ರಯಾಣ ಮತ್ತು ಸ್ಥಳೀಯ ಲಸಿಕೆ ರಫ್ತುಗಳಿಗೆ ಸಹಾಯಕವಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಕಳೆದ ವಾರ ಹೈದರಾಬಾದ್ ಮೂಲದ ಫಾರ್ಮಾ ಸಂಸ್ಥೆಯಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿತ್ತು. ಕೋವಾಕ್ಸಿನ್ SARS-CoV2 ವಿರುದ್ಧ ಸಂಪೂರ್ಣ virion-inactivated (ವೈರಾಣು-ನಿಷ್ಕ್ರಿಯ) ಲಸಿಕೆಯಾಗಿದ್ದು, ICMR (Indian Council of Medical Research) ಮತ್ತು ಪುಣೆಯ NIV (National institute of Virology) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.
Covid Pills:ಕೋವಿಡ್ ಮಾತ್ರೆ ತುರ್ತು ಬಳಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್!
" ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ತುರ್ತು ಬಳಕೆಯ ಪಟ್ಟಿಗೆ WHO ಸೇರಿಸಿದೆ (emergency use listing). ಈ ಮೂಲಕ ಕೋವಿಡ್ -19 ತಡೆಗಟ್ಟುವಿಕೆಗಾಗಿ WHO ಮಾನ್ಯತೆ ಪಡೆದಿರುವ ಲಸಿಕೆಗಳ ಪಟ್ಟಿಗೆ ಕೋವ್ಯಾಕ್ಸಿನ್‌ಅನ್ನು ಸೇರಿಸಲಾಗಿದೆ " ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಟ್ವೀಟ್‌ನಲ್ಲಿ ತಿಳಿಸಿದೆ.
ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ (Dr Krishna Ella) ಅವರು ಇದೊಂದು 'ಮಹತ್ವದ ಹೆಜ್ಜೆ' ಎಂದು ಹೇಳಿದ್ದಾರೆ "ಕೋವಾಕ್ಸಿನ್‌ಗೆ EUL ಮಾನ್ಯತೆಯೂ ನಮಗೆ ಕೋವಿಡ್ -19 ಲಸಿಕೆಯ ಉತ್ಪಾದನೆಯನ್ನು ವೇಗಗೊಳಿಸಲು ಮತ್ತು ಜಾಗತಿಕವಾಗಿ ನಮ್ಮ ಲಸಿಕೆ ಪೂರೈಸಲು ನಮಗೆ ಸಹಾಯ ಮಾಡುತ್ತದೆ. ಈ ಮೂಲಕ ಜಗತ್ತಿನಲ್ಲಿ ನಿರ್ಮಾಣವಾಗಿರುವ ಆರೋಗ್ಯ ತುರ್ತುಸ್ಥಿತಿ ನಿವಾರಿಸಲು ಸಹಾಯವಾಗಲಿದೆ." ಎಂದು ಅವರು ಹೇಳಿದ್ದಾರೆ.