ನವದೆಹಲಿ(ಜೂ.10): ಕೊರೋನಾ ವೈರಸ್ ಮಕ್ಕಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೊರೋನಾದಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಮುಂಜಾಗ್ರತೆ ವಹಿಸುತ್ತಿದ್ದಾರೆ. ಇದರ ನಡುವೆ ಕೊರೋನಾ ವೈರಸ್ ತಗುಲಿದ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಗೆ ಡೈರೆಕ್ಟರ್ ಜನರಲ್ ಆಫ್ ಹೆಲ್ತ್ ಸರ್ವೀಸ್(DGH) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ 18 ವರ್ಷದೊಳಗಿನ ಮಕ್ಕಳ ಕೊರೋನಾ ಚಿಕಿತ್ಸೆಗೆ ರೆಮ್ಡಿಸಿವಿರ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಸೋಂಕಿತರ ತುರ್ತು ಚಿಕಿತ್ಸೆಗೆ DRDO ಅಭಿವೃದ್ಧಿಪಡಿಸಿದ 2DG ಔಷಧಿ ಬಳಕೆಗೆ ಮಾರ್ಗಸೂಚಿ ಪ್ರಕಟ!

ಮೈಲ್ಡ್ ಕೊರೋನಾ ಕಾಣಿಸಿಕೊಂಡ ಮಕ್ಕಳಿಗೆ ಪ್ಯಾರಾಸೆಟಮಾಲ್ ಔಷಧಿ  10-15mg/kg/ ಪ್ರತಿ 4 ರಿಂದ 6 ಗಂಟೆಗೊಮ್ಮೆ ನೀಡಬಹುದು. ಕೊರೋನಾ ಕಾಣಿಸಿಕೊಂಡು ಲಕ್ಷಣವಿಲ್ಲದ ಮಕ್ಕಳಿಗೆ ಆಂಟಿಮೈಕ್ರೊಬಿಯಲ್‌ಗಳನ್ನು ಶಿಫಾರಸು ಮಾಡುವುದಿಲ್ಲ ಎಂದು DGH ಪ್ರಕಟಿಸಿದೆ. ಇನ್ನು  5 ವರ್ಷ ಹಾಗೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ ಎಂದಿದೆ.

ಸ್ಟಿರಾಯ್ಡ್ ಬಳಕೆ ಮಾರ್ಗಸೂಚಿ:
ಮಕ್ಕಳ ಮೇಲೆ ಸ್ಟೀರಾಯ್ಡ್ಸ್ ಬಳಕೆ ಮಾಡುವಂತಿಲ್ಲ, ಮೈಲ್ಡ್ ಹಾಗೂ ಲಕ್ಷಣ ರಹಿತಿ ಕೊರೋನಾ ಸೋಂಕಿತ ಮಕ್ಕಳಿಗೆ ಸ್ಟೀರಾಯ್ಡ್ ಬಳಕೆ ಹಾನಿಕಾರಕವಾಗಿದೆ. ಇನ್ನು ಆಸ್ಪತ್ರೆ ದಾಖಲಾಗುವು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದಿದೆ.

ವ್ಯರ್ಥ ಮಾಡಿದವರಿಗೆ ಲಸಿಕೆ ಪ್ರಮಾಣ ಕಡಿತ: ಕೇಂದ್ರದ ಎಚ್ಚರಿಕೆ

ಕೆಲ ಪ್ರಕರಣಗಳಲ್ಲಿ ಸ್ಟೀರಾಯ್ಡ್ಸ್ ಬಳಕೆ ಮಾಡುವ ಅನಿವಾರ್ಯತೆ ಎದುರಾದಲ್ಲಿ ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಬೇಕು ಎಂದಿದೆ. ಡೆಕ್ಸಮೆಥಾಸೊನ್ 0.15 ಮಿಗ್ರಾಂ / ಕೆಜಿ ದಿನಕ್ಕೆ ಎರಡು ಬಾರಿ (ಗರಿಷ್ಠ 6 ಮಿಗ್ರಾಂ) ಅಥವಾ ಡೆಕ್ಸಮೆಥಾಸೊನ್ ಲಭ್ಯವಿಲ್ಲದಿದ್ದರೆ ಮೀಥೈಲ್‌ಪ್ರೆಡ್ನಿಸೋಲೋನ್‌ನ ಸಮಾನ ಪ್ರಮಾಣವನ್ನು ಬಳಸಬಹುದು. ದೈನಂದಿನ ಆಧಾರದ ಮೇಲೆ ಕ್ಲಿನಿಕಲ್ ಮೌಲ್ಯಮಾಪನವನ್ನು ಅವಲಂಬಿಸಿ 5–14 ದಿನಗಳವರೆಗೆ ಈ ಔಷಧಿ ಬಳಕೆ ಮಾಡಬಹುದು.

ಪ್ರತಿಕಾಯಗಳು:
ಕೊರೋನಾ ವೈರಸ್‌ನಿಂದ ಅಸ್ವಸ್ಥರಾದ ಅಥವಾ ತೀವ್ರವಾಗಿ ಕಾಣಿಸಿಕೊಂಡ ಮಕ್ಕಳಿಗೆ ಆಸ್ಪಿರಿನ್: 3 ಮಿಗ್ರಾಂ / ಕೆಜಿ / ದಿನದಿಂದ 5 ಮಿಗ್ರಾಂ / ಕೆಜಿ / ದಿನ ಗರಿಷ್ಠ 81 ಮಿಗ್ರಾಂ / ದಿನ (ಥ್ರಂಬೋಸಿಸ್ ಸ್ಕೋರ್ 2.5 ಇದ್ದರೆ) ಈ ಔಷಧ  ಬಳಕೆ ಮಾಡಬಹುದು.  

ರೆಮ್ಡಿಸಿವಿರ್:
ತುರ್ತು ಚಿಕಿತ್ಸೆಗೆ ಬಳಸುತ್ತಿರುವ ರೆಮ್ಡಿಸಿವಿರ್ ಮಕ್ಕಳಿಗೆ ನೀಡಬಾರದು. 18 ವರ್ಷ ಕೆಳಗಿನ ಮಕ್ಕಳಿಗೆ ರೆಮ್ಡಿಸಿವಿರ್ ನೀಡಬಾರದು ಎಂದಿದೆ. 

ಕೋವಿಡ್‌ ಸೋಂಕಿತರಿಗೆ ಇನ್ಮುಂದೆ ಪ್ಲಾಸ್ಮಾ ಥೆರಪಿ ಇಲ್ಲ, ಹೊಸ ಮಾರ್ಗಸೂಚಿ ಬಿಡುಗಡೆ

ಮಾಸ್ಕ್:
5 ವರ್ಷ ಅಥವಾ 5ಕ್ಕಿಂತ ಕೆಳಗಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. 6 ರಿಂದ 11 ವರ್ಷದ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಮಾಸ್ಕ್ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ಬಳಸಬಹುದು. ಆದರೆ ಮಕ್ಕಳ ಸಾಮರ್ಥ್ಯ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ವಯಸ್ಕರಂತೆಯೇ ಮಾಸ್ಕ್ ಧರಿಸಬೇಕು.

ಮಕ್ಕಳ ಪರೀಕ್ಷೆ:
12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಕಾರ್ಡಿಯೋ ಪಲ್ಮನರಿ ಪತ್ತೆ ಹಚ್ಚಲು 6 ನಿಮಿಷದ ನಡಿಗೆ ಟೆಸ್ಟ್ ಬಳಸಲು ಶಿಫಾರಸು ಮಾಡಿದೆ.  6-ನಿಮಿಷದ ವಾಕ್ ಟೆಸ್ಟ್ 'ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಪೋಷಕರು / ಪೋಷಕರ ಮೇಲ್ವಿಚಾರಣೆಯಲ್ಲಿ ಮಾಡಲಾಗುವುದು.