ನವದೆಹಲಿ(ಜೂ.12): ಕೊರೋನಾ ಹಾವಳಿಯಿಂದಾಗಿ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ನೋಟು ಮುದ್ರಣದಂತಹ ಆಯ್ಕೆಗಳ ಅನುಕೂಲ, ಅನಾನುಕೂಲಗಳ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

‘ನಮ್ಮ ಮುಂದೆ ಎಲ್ಲ ಆಯ್ಕೆಗಳೂ ಇವೆ. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಈ ವರ್ಷ ದೇಶದ ಆರ್ಥಿಕ ಪ್ರಗತಿ ಎಷ್ಟಿರಲಿದೆ ಎಂಬುದು ಆರ್ಥಿಕತೆಯ ಚೇತರಿಕೆ ಮೇಲೆ ಅವಲಂಬಿತವಾಗಿದೆ. ಈ ವರ್ಷದ ಎರಡನೇ ಭಾಗದಲ್ಲಿ ಚೇತರಿಕೆ ಆಗುತ್ತದೋ ಅಥವಾ ಮುಂದಿನ ವರ್ಷ ಆಗುತ್ತದೋ ಎಂಬುದರ ಬಗ್ಗೆ ಅನಿಶ್ಚಿತತೆ ಇದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಜಾಗತಿಕ ರೇಟಿಂಗ್‌ ಸಂಸ್ಥೆಯಾಗಿರುವ ಮೂಡಿಸ್‌ ಭಾರತದ ರೇಟಿಂಗ್‌ ಇಳಿಸಿದ ಬಗ್ಗೆ ಪ್ರಸ್ತಾಪಿಸಿರುವ ಅವರು, ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಹೀಗಾಗಿ ಉತ್ತಮ ರೇಟಿಂಗ್‌ ಅಗತ್ಯವಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯ ಅಧಿಕವಾಗಿದೆ ಎಂದು ಹೇಳಿದ್ದಾರೆ.

ಕೊರೋನಾ ಬಿಕ್ಕಟ್ಟು ಸ್ವಾವಲಂಬನೆಗೆ ಸದಾವಕಾಶ: ಮೋದಿ

ಕೊರೋನಾ ಹಾವಳಿ ಹಾಗೂ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆಯ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ಇದನ್ನು ಮೇಲೆತ್ತುವ ಸಲುವಾಗಿ ಕೇಂದ್ರ ಸರ್ಕಾರ 21 ಲಕ್ಷ ಕೋಟಿ ರುಪಾಯಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ. ‘ಆತ್ಮ ನಿರ್ಭರ ಭಾರತ’ ಪ್ಯಾಕೇಜ್‌ನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಮಾತ್ರವಲ್ಲ ಈ ಸಂಕಷ್ಟವನ್ನು ಅವಕಾಶಗಳಾಗಿ ಬದಲಿಸಿಕೊಳ್ಳಿ ಎಂದು ಉದ್ಯಮಿಗಳಿಗೆ ಹಾಗೂ ಯುವ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"