ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ರಾಹುಲ್‌ ಸಂಸದ ಸ್ಥಾನ ಅನರ್ಹತೆ ವಿರೋಧಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾ ವೇದಿಕೆ ಕುಸಿದು ವೇದಿಕೆಯಲ್ಲಿದ್ದವರೆಲ್ಲಾ ಕೆಳಗೆ ಬಿದ್ದ ಘಟನೆ ನಡೆದಿದೆ.

ಬಿಲಾಸ್‌ಪುರ: ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ರಾಹುಲ್‌ ಸಂಸದ ಸ್ಥಾನ ಅನರ್ಹತೆ ವಿರೋಧಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪ್ರತಿಭಟನಾ ವೇದಿಕೆ ಕುಸಿದು ವೇದಿಕೆಯಲ್ಲಿದ್ದವರೆಲ್ಲಾ ಕೆಳಗೆ ಬಿದ್ದ ಘಟನೆ ನಡೆದಿದೆ. ಆದರೆ ಯಾರಿಗೂ ಯಾವುದೇ ಹಾನಿಯಾಗಿಲ್ಲ, ವೇದಿಕೆ ಕುಸಿಯುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಮರ್ಕಂ (Mohan Markam) ಕೂಡ ಈ ವೇಳೆ ವೇದಿಕೆಯಲ್ಲಿದ್ದು, ಅವರು ಕೂಡ ಕುಸಿದು ಬಿದ್ದಿದ್ದಾರೆ. ವೇದಿಕೆ ಕಾರ್ಯಕರ್ತರು ಹಾಗೂ ನಾಯಕರಿಂದ ತುಂಬಿ ತುಳುಕಿದ ಪರಿಣಾಮ ಭಾರ ತಡೆಯಲಾಗದೇ ಕುಸಿದು ಬಿದ್ದಿದೆ. ಪಕ್ಷದ ಕಾರ್ಯಕರ್ತರು ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹತೆ ವಿರೋಧಿಸಿ ಟಾರ್ಚ್ ರಾಲಿ ಆಯೋಜಿಸಿದ್ದರು. ಈ ವೇಳೆ ವೇದಿಕೆ ಕುಸಿದಿದೆ. 

ಕಳ್ಳರೆಲ್ಲರೂ ಯಾಕೆ ಮೋದಿ ಸರ್‌ನೇಮ್ ಇರಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಸಮಾವೇಶದಲ್ಲಿ ಭಾಷಣ ಮಾಡುವ ಭರದಲ್ಲಿ ರಾಹುಲ್ ಈ ಮಾತಾಡಿದ್ದರು. ಈ ಹೇಳಿಕೆ ಖಂಡಿಸಿ ಗುಜರಾತ್‌ ಬಿಜೆಪಿ ಮುಖಂಡ ಪೂರ್ಣೇಶ್ ಮೋದಿ (Purnesh Modi) ಸೂರತ್‌ನ ಸೆಷನ್ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ (defamation case) ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸೂರತ್ ಕೋರ್ಟ್‌ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಸಂಸತ್‌ ರಾಹುಲ್ ಗಾಂಧಿ ಸದಸ್ಯತ್ವವನ್ನು ಅನರ್ಹಗೊಳಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ರಾಹುಲ್ ಗಾಂಧಿ ಅನರ್ಹತೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. 

ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಸೂರತ್‌ನ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಹಿನ್ನೆಲೆಯಲ್ಲಿ ತೆರಳಿದ್ದಾರೆ. ಇಂದು ರಾಹುಲ್ ಮೇಲ್ಮನವಿ ವಿಚಾರಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ರಾಹುಲ್ ಸೂರತ್ ತಲುಪಲಿದ್ದಾರೆ. ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ (Bhupesh Baghel), ಹಿಮಾಚಲ ಪ್ರದೇಶ ಸಿಎಂ ಸುಖ್ವೀಂದರ್ ಸಿಂಗ್ ಸುಖು (Sukhvinder Singh Sukhu), ರಾಜಸ್ಥಾನ ಸಿಎಂ ಅಶೋಖ್ ಗೆಹ್ಲೋಟ್ (Ashok Gahlot), ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಕೆ.ಸಿ ವೇಣುಗೋಪಾಲ್ (KC Venugopal) ಜೊತೆಗಿರುವ ಸಾಧ್ಯತೆ ಇದೆ. 

Scroll to load tweet…


ರಾಹುಲ್ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡಲಾಗದು. ಆದರೆ ನಾವು ಸರ್ಕಾರದ ವಿರುದ್ಧ ಪ್ರತಿಭಟಿಸಬಹುದು. ಅದಾನಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಜಂಟಿ ಸದಸನ ಸಮಿತಿ ರಚಿಸಲು ಸರ್ಕಾರ ಸಿದ್ಧವಿಲ್ಲ , ಅವರಿಗೆ ಸದನ ಸುಗಮವಾಗಿ ಸಾಗುವುದು ಇಷ್ಟವಿಲ್ಲ ಎಂದು ಹೇಳಿದರು. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್ ಮುಂದೆ ಕಾಂಗ್ರೆಸ್‌ ಬೆಂಬಲಿಗರು ರಾಹುಲ್ ಬೆಂಬಲಿಸಿ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ. 

Scroll to load tweet…