Asianet Suvarna News Asianet Suvarna News

ಛತ್ತೀಸ್‌ಗಢದಲ್ಲಿ ನದಿ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆ 20 ಕೀ.ಮೀ ಕೊಚ್ಚಿ ಹೋಗಿ ಒಡಿಶಾದಲ್ಲಿ ರಕ್ಷಣೆ!

ಛತ್ತೀಸ್‌ಗಢದಲ್ಲಿ ಆಕಸ್ಮಿಕವಾಗಿ ನದಿಗೆ ಉರುಳಿ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು 20 ಕಿಲೋಮೀಟರ್‌ವರೆಗೂ ಕೊಚ್ಚಿಹೋಗಿದ್ದು, ಬಳಿಕ ಅವರನ್ನು ಒಡಿಶಾದಲ್ಲಿ ಮೀನುಗಾರರು ರಕ್ಷಿಸಿದ ಅಚ್ಚರಿಯ ಘಟನೆ ನಡೆದಿದೆ.

Chhattisgarh Mentally unwell  woman with feet shackled swept away for twenty  km  rescued in Odisha gow
Author
First Published Aug 3, 2024, 3:34 PM IST | Last Updated Aug 3, 2024, 3:34 PM IST

ರಾಯಗಢ (ಆ.3): ಛತ್ತೀಸ್‌ಗಢದಲ್ಲಿ ಆಕಸ್ಮಿಕವಾಗಿ ನದಿಗೆ ಉರುಳಿ ಬಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು 20 ಕಿಲೋಮೀಟರ್‌ವರೆಗೂ ಕೊಚ್ಚಿಹೋಗಿದ್ದು, ಬಳಿಕ ಅವರನ್ನು ಒಡಿಶಾದಲ್ಲಿ ಮೀನುಗಾರರು ರಕ್ಷಿಸಿದ ಅಚ್ಚರಿಯ ಘಟನೆ ನಡೆದಿದೆ. ಸರೋಜಿನಿ ಚೌಹಾಣ್‌ (35) ಎಂಬಾಕೆ ಬುಧವಾರ ರಾತ್ರಿ ಮಹಂದೈ ನದಿ  ದಡದಲ್ಲಿರುವ ತನ್ನ ಮನೆಯ ತರಕಾರಿ ತೋಟಕ್ಕೆ ಹೋಗಿದ್ದು, ಆ ಸಂದರ್ಭದಲ್ಲಿ ನದಿಯ ಪ್ರವಾಹ ಹೆಚ್ಚಾಗಿ ನೀರಲ್ಲಿ ಕೊಚ್ಚಿಹೋಗಿದ್ದಾಳೆ. ಗ್ರಾಮದಿಂದ 20 ಕಿಲೋಮೀಟರ್ ದೂರದ ಒಡಿಶಾದ ಪರ್ಸಾದ ಗ್ರಾಮದಲ್ಲಿ ಕೆಲವು ಮೀನುಗಾರರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಭೂಕುಸಿತಕ್ಕೆ ಅರಣ್ಯ ನಾಶವೇ ಕಾರಣ, ಅಕ್ರಮ ಹೋಂ ಸ್ಟೇ, ರೆಸಾರ್ಟ್‌, ಲೇಔಟ್ ತೆರವಿಗೆ ಖಂಡ್ರೆ ತಾಕೀತು

ಪವಾಡ ಸದೃಶವಾಗಿ ಪಾರಾದ ಮಹಿಳೆಯನ್ನು ಬಳಿಕ ಸಾರಂಗರ್-ಬಿಲೈಗಢ್ ಜಿಲ್ಲೆಯ ಸರಿಯಾ ಪ್ರದೇಶದ ತನ್ನ ಮನೆಗೆ ಮರಳಿ ಕರೆತರಲಾಯಿತು. ನಂತರ ಆಕೆಯನ್ನು ನೆರೆಯ ರಾಯ್‌ಗಢ್ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಮಾಹಿತಿ ನೀಡಿದ, ಸಾರಂಗಢ-ಬಿಲೈಗಢ್ ಪೊಲೀಸ್ ವರಿಷ್ಠಾಧಿಕಾರಿ ಪುಷ್ಕರ್ ಶರ್ಮಾ, ಮಹಿಳೆಯು ತನ್ನ ಪತಿಯಿಂದ ಬೇರ್ಪಟ್ಟು ತನ್ನ ಹೆತ್ತವರೊಂದಿಗೆ ಸರಿಯಾದಲ್ಲಿನ ಪೋರಾತ್ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಕೌಂಟಿಂಬಿಕ ಕಲಹದ ಶಾಕ್‌ ನಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಳು. ಮತ್ತು ಯಾರಿಗೂ ತಿಳಿಸದೆ ಆಗಾಗ ಮನೆಯಿಂದ  ಹೊರಹೋಗುತ್ತಿದ್ದಳು. ಈ ಕಾರಣಕ್ಕೆ ಕಾರಣ ಅವಳ ಸಂಬಂಧಿಕರು ಅವಳ ಕಾಲುಗಳಿಗೆ ಸಂಕೋಲೆ ಹಾಕಿದ್ದರು ಎಂದಿದ್ದಾರೆ.

ವಯನಾಡು ದುರಂತಕ್ಕೆ ಎಚ್ಚೆತ್ತ ಕೇಂದ್ರ, ಕರ್ನಾಟಕ ಸೇರಿ 6 ರಾಜ್ಯದ ಪಶ್ಚಿಮಘಟ್ಟಗಳಲ್ಲಿ ಗಣಿಗಳ ನಿಷೇಧಕ್ಕೆ ಸಿದ್ಧತೆ

ರಾತ್ರಿ ಆಕೆ ಬಹಿರ್ದೆಸೆಗೆಂದು ಮನೆಯಿಂದ ಹೊರಬಂದಿದ್ದಾಳೆ. ಮನೆಯಲ್ಲಿನ ತರಕಾರಿ ತೋಟಕ್ಕೆ ಹೋದವಳು ವಾಪಸ್ ಬಂದಿರಲಿಲ್ಲ. ತೋಟ ಮಹಾನದಿ ನದಿಯ ದಡದಲ್ಲಿದೆ  ನಂತರ ಆಕೆ ನದಿಗೆ ಬಿದ್ದು 20 ಕಿ.ಮೀ ವರೆಗೆ ಕೊಚ್ಚಿ ಹೋಗಿದ್ದಾಳೆ. ಸಹಾಯಕ್ಕಾಗಿ ಆಕೆ ಕಿರುಚಾಡುವುದನ್ನು ಕೇಳಿ ಒಡಿಶಾದ ಪರ್ಸಾದದಲ್ಲಿ ಕೆಲವು ಮೀನುಗಾರರು ಆಕೆಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಮಳೆಯ ಕಾರಣಕ್ಕೆ ನದಿಯು ಉಕ್ಕಿ ಹರಿಯುತ್ತಿದ್ದು, ಒಡಿಶಾದ ರೆಂಗಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ಸಾದ ಗ್ರಾಮದಲ್ಲಿ ಆಕೆ ಸಿಕ್ಕಿರುವುದೇ ಪವಾಡ ಸದೃಶವಾಗಿದೆ. ಇನ್ನು ಉತ್ತರಾಖಂಡ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

Latest Videos
Follow Us:
Download App:
  • android
  • ios