ಛತ್ತೀಸ್‌ಗಢದ ಬಹುಕೋಟಿ ಮದ್ಯ ಹಗರಣಲ್ಲಿ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯರಿಗೂ 200ರಿಂದ 250 ಕೋಟಿ ರು. ಲಂಚ ಸಂದಾಯವಾಗಿತ್ತು ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರ್ಥಿಕ ಅಪರಾಧ ವಿಭಾಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ನೀಡಿದೆ.
ರಾಯ್ಪುರ: ಛತ್ತೀಸ್‌ಗಢದ ಬಹುಕೋಟಿ ಮದ್ಯ ಹಗರಣಲ್ಲಿ ಮಾಜಿ ಸಿಎಂ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯರಿಗೂ 200ರಿಂದ 250 ಕೋಟಿ ರು. ಲಂಚ ಸಂದಾಯವಾಗಿತ್ತು ಎಂದು ಭ್ರಷ್ಟಾಚಾರ ನಿಗ್ರಹ ದಳದ ಆರ್ಥಿಕ ಅಪರಾಧ ವಿಭಾಗ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮಾಹಿತಿ ನೀಡಿದೆ.
ಪ್ರತಿ ಬಾಟಲ್ ಮದ್ಯಕ್ಕೆ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಲಂಚ
ಕಳೆದ ಕಾಂಗ್ರೆಸ್ ಸರ್ಕಾರದ (2018-23) ಅವಧಿಯಲ್ಲಿ ಮಾರಾಟವಾದ ಪ್ರತಿ ಬಾಟಲ್ ಮದ್ಯಕ್ಕೆ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಲಂಚ ಪಡೆದಿದ್ದರು ಹಾಗೂ ಇದರಿಂದ ರಾಜ್ಯದ ಬೊಕ್ಕಸಕ್ಕೆ 3000 ಕೋಟಿ ರು.ಗೂ ಅಧಿಕ ನಷ್ಟವಾಗಿತ್ತು ಎಂಬುದು ಆರೋಪ. ಈ ಹಗರಣದಲ್ಲಿ, ಅಂದು ಸಿಎಂ ಆಗಿದ್ದ ಬಘೇಲ್ ಅವರ ಪುತ್ರ ಚೈತನ್ಯ ಕೂಡ ಕೈಜೋಡಿಸಿದ್ದರು. ಅಕ್ರಮದಲ್ಲಿ ಪಾಲುದಾರರಾಗಿರುವವರ ಸಂಘಟನೆ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, ವರ್ಷಗಳ ಕಾಲ ಈ ಧಂದೆ ನಡೆಯುವಂತೆ ನೋಡಿಕೊಂಡಿದ್ದರು. ಅಧಿಕಾರಿಗಳು ಮತ್ತು ಉದ್ಯಮಿಗಳ ನಡುವೆ ಸೇತುವೆಯಂತಿದ್ದು, ಅಕ್ರಮವಾಗಿ ಸಂಗ್ರಹವಾದ ಹಣವನ್ನು ತಮ್ಮ ಸಹಚರರ ಮೂಲಕ ಹಂಚಿಕೆ ಮಾಡಿಸುತ್ತಿದ್ದರು.
ತಮ್ಮ ಕಂಪನಿಯ ಖಾತೆ ಮೂಲಕ ಪಡೆದು ಹೂಡಿಕೆ
ಇದಕ್ಕೆ ಪ್ರತಿಯಾಗಿ ಮದ್ಯ ಮಾರಾಟಗಾರರಿಂದ ಲಂಚವನ್ನು ತಮ್ಮ ಕಂಪನಿಯ ಖಾತೆ ಮೂಲಕ ಪಡೆದು, ಅದನ್ನು ರಿಯಲ್ ಎಸ್ಟೇಟ್ ಯೋಜನೆಗಳಿಗೆ ಹಾಗೂ ಹೂಡಿಕೆಗೆ ಬಳಸಿದ್ದರು. ಹೀಗೆ ಸುಮಾರು 200ರಿಂದ 250 ಕೋಟಿ ರು. ಪಡೆದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.


