ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಗೆ ಥಳಿಸಿದ ಜಿಲ್ಲಾಧಿಕಾರಿ ರಸ್ತೆಯಲ್ಲೇ ವ್ಯಕ್ತಿಯ ಫೋನ್ ಕಸಿದು ನೆಲಕ್ಕೆಸೆದ ಐಎಎಸ್ ಅಧಿಕಾರಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿ ಅಮಾನತು. 

ರಾಯ್‌ಪುರ್(ಮೇ.23): ಛತ್ತೀಸ್‌ಗಡದ ಸೂರಜ್‌ಪುರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ. ಕೊರೋನಾ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಯನ್ನು ಥಳಿಸಿ, ಆತನ ಮೊಬೈಲ್ ಕಸಿದು ನೆಲಕ್ಕೆಸೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನನ್ಉ ವಿಇಡಯೋ ವೈರಲ್ ಆದ ಬೆನ್ನಲ್ಲೇ ಇಂತಹ ದುರ್ವರ್ತನೆ ತೋರಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

Scroll to load tweet…

ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಘಟನೆ ಸಂಬಂಧ ಕ್ಷಮೆ ಕೋರಿದ್ದಾರೆ. ವ್ಯಕ್ತಿಗೆ ದೈಹಿಕವಾಗಿ ಹಲ್ಲೆ ಮಾಡಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ವ್ಯಕ್ತಿ ಚಿಕ್ಕ ಪೇಪರ್ ತೋರಿಸಿ ಹಾಗೆಯೇ ತನ್ನ ಮೊಬೈಲ್ ತೋರಿಸುತ್ತಿದ್ದರೆ ಮೊಬೈಲ್ ಕಿತ್ತು ತೆಗೆದ ಜಿಲ್ಲಾಧಿಕಾರಿ ಅದನ್ನು ನೆಲಕ್ಕೆಸೆಯುವುದನ್ನು ಕಾಣಬಹುದು.

ದೆಹಲಿ, ಮುಂಬೈನಲ್ಲಿ ಸೋಂಕು ಭಾರೀ ಇಳಿಕೆ!

ಹಿರಿಯ ಅಧಿಕಾರಿಯು ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಾರೆ. ವ್ಯಕ್ತಿಯನ್ನು ಕೋಲುಗಳಿಂದ ಹೊಡೆಯಲು ಪ್ರಾರಂಭಿಸುತ್ತಾನೆ. ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಲೆಕ್ಟರ್ ರಣಬೀರ್ ಶರ್ಮಾ, "ಇಂದು ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಇದರಲ್ಲಿ ಲಾಕ್ ಡೌನ್ ಸಮಯದಲ್ಲಿ ಹೊರಗಿದ್ದ ವ್ಯಕ್ತಿಯನ್ನು ಕಪಾಳಮೋಕ್ಷ ಮಾಡಿರುವುದನ್ನು ತೋರಿಸಲಾಗಿದೆ. ಇಂದಿನ ವರ್ತನೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನಗೆ ಎಂದಿಗೂ ಅಗೌರವ ತೋರಿಸುವ ಉದ್ದೇಶವಿಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ.

Scroll to load tweet…

ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಜಿಲ್ಲೆಯ ಸೂರಜ್‌ಪುರ ಮತ್ತು ಇಡೀ ಛತ್ತೀಸ್‌ಗಡ ರಾಜ್ಯವು ಭಾರೀ ಪ್ರಾಣಹಾನಿಯನ್ನು ಎದುರಿಸುತ್ತಿದೆ. ರಾಜ್ಯ ಸರ್ಕಾರದ ನೌಕರರೆಲ್ಲರೂ ಈ ಸಮಸ್ಯೆಯನ್ನು ನಿಭಾಯಿಸಲು ಶ್ರಮಿಸುತ್ತಿದ್ದೇವೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾಸ್ ಚಂಡಮಾರುತ: ಪೂರ್ವ ಸಿದ್ಧತೆ ಕುರಿತು ಪ್ರಧಾನಿ ಮೋದಿ ಸಭೆ!

ತನ್ನ ತಾಯಿ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗ ತಾನು ಕೋವಿಡ್ -19 ರಿಂದ ಚೇತರಿಸಿಕೊಂಡಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ. ಕೋವಿಡ್ -19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರನ್ನು ಕೇಳಿಕೊಂಡಿದ್ದಾರೆ.

Scroll to load tweet…

ಛತ್ತೀಸ್‌ಗಡ್ ಸಿಎಂ ಭೂಪೇಶ್ ಭಗೆಲ್ ನಾಗರಿಕನಿಗೆ ಹೊಡೆದ ಐಎಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಸೂರಜ್‌ಪುರ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಯನ್ನು ಸಾಮಾಜಿಕ ಮಾಧ್ಯಮಗಳು ನನ್ನ ಗಮನಕ್ಕೆ ತಂದಿವೆ. ಇದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಛತ್ತೀಸ್‌ಗಡದಲ್ಲಿ ಇಂತಹ ಯಾವುದೇ ಘಟನೆಯನ್ನು ಸಹಿಸುವುದಿಲ್ಲ. ರಣಬೀರ್ ಶರ್ಮಾ ಅವರನ್ನು ತಕ್ಷಣ ತೆಗೆದುಹಾಕಲು ಸೂಚನೆಗಳನ್ನು ನೀಡಲಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. "ಅಧಿಕಾರಿಯೊಬ್ಬರ ದುರ್ವರ್ತನೆ ಸ್ವೀಕಾರಾರ್ಹವಲ್ಲ. ಈ ಘಟನೆಗೆ ನಾನು ವಿಷಾದಿಸುತ್ತೇನೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona