70ರ ಹರೆಯದಲ್ಲಿ ಕಾಂಗ್ರೆಸ್ ನಾಯಕ ಸ್ಕೈ ಡೈವ್, ಆರೋಗ್ಯ ಸಚಿವರ ಸಾಹಸ ವಿಡಿಯೋ ವೈರಲ್!
ವಯಸ್ಸು ಕೇವಲ ನಂಬರ್ ಅನ್ನೋದನ್ನು ಹಲವರು ಹಲವು ಬಾರಿ ಸಾಬೀತು ಮಾಡಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ, 70ರ ಹರೆಯದ ಕಾಂಗ್ರೆಸ್ ನಾಯಕ, ಆರೋಗ್ಯ ಸಚಿವ ಆಸ್ಟ್ರೇಲಿಯಾಗೆ ತೆರಳಿ ಸ್ಕೈ ಡೈವ್ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ರಾಯುಪುರ್(ಮೇ.21): ವಯಸ್ಸು 70, ಹೆಸರು ಟಿಎಸ್ ಸಿಂಗ್ ದಿಯೊ, ಚತ್ತೀಸಘಡದ ಆರೋಗ್ಯ ಸಚಿವ, ಕಾಂಗ್ರೆಸ್ ನಾಯಕನ ಸಾಹಸ ಇದೀಗ ಭಾರಿ ವೈರಲ್ ಆಗಿದೆ. 70ರ ಹರೆಯದಲ್ಲಿ ಕಾಂಗ್ರೆಸ್ ನಾಯಕ ಆಸ್ಟ್ರೇಲಿಯಾದಲ್ಲಿ ಸ್ಕೈ ಡೈವ್ ಮಾಡಿ ಗಮನಸೆಳೆದಿದ್ದಾರೆ. ಆರೋಗ್ಯ ಸಚಿವರ ನಡೆಗೆ ಅಭಿಮಾನಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅನುಭವಿ ಮಾರ್ಗದರ್ಶಕರ ನೆರವಿನಲ್ಲಿ ಸ್ಕೈ ಡೈವ್ ಮಾಡಿದ ಆರೋಗ್ಯ ಸಚಿವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖುದ್ದು ಟಿಎಸ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಮಾರ್ಗದರ್ಶಕ ಸೂಚನೆಯಂತೆ ಟಿಎಸ್ ಸಿಂಗ್ ಸ್ಕೈ ಡೈವ್ ಡ್ರೆಸ್ ಧರಿಸಿದ್ದರು. ಸ್ಕೈ ಡೈವ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಮಾರ್ಗದರ್ಶಕರ ಸೂಚನೆಯಂತೆ ಸ್ಕ ಡೈವ್ ಮಾಡಿದ್ದಾರೆ. ಅತೀವ ಉತ್ಸಾಹದಿಂದ ಟಿಎಸ್ ಸಿಂಗ್ ಸ್ಕೈ ಡೈವ್ ಮಾಡಿದ್ದಾರೆ. ಆರೋಗ್ಯ ಸಚಿವರಿಗೆ ಅನುಭವಿ ಹಾಗೂ ನುರಿತ ಮಾರ್ಗದರ್ಶಕರನ್ನೇ ನೀಡಲಾಗಿತ್ತು. ವಿಮಾನ ಏರುವ ಮೊದಲೇ ಸ್ಕೈ ಡೈವ್ ಮಾಡಲು ತುಂಬಾ ಉತ್ಸುಕನಾಗಿದ್ದೇನೆ. ಸಂತಸ ಸಮಯ ಆನಂದಿಸುತ್ತೇನೆ ಎಂದು ವಿಮಾನ ಹತ್ತಿದ್ದಾರೆ.
ವಿಮಾನದಿಂದ ಜಿಗಿದು ಹಾರುತ್ತಲೇ ಭೂಮಿಗೆ ಲ್ಯಾಂಡ್ ಆದ 103 ವರ್ಷದ ಅಜ್ಜಿ..!
ಇನ್ನು ಬಾನೆತ್ತರಕ್ಕೆ ಹಾರಿದ ವಿಮಾನದಲ್ಲೂ ಟಿಎಸ್ ಸಿಂಗ್ ತಮ್ಮ ಸ್ಕೈ ಡೈವ್ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಬಳಿಕ ಮಾರ್ಗದರ್ಶಕರ ಸಹಾಯದಿಂದ ಸ್ಕೈ ಡೈವ್ ಸಾಹಸ ಮಾಡಿದ್ದಾರೆ. ಮತ್ತೊಂದು ವಿಶೇಷ ಅಂದರೆ ಸ್ಕೈ ಡೈವ್ ಮಾಡುತ್ತಿರುವಾಗಲೇ ಥಮ್ಸ್ ಅಪ್ ಸನ್ನೆ ಮಾಡಿದ್ದಾರೆ. ತಮ್ಮ ಸ್ಕೈ ಡೈವ್ ಆನಂದಿಸಿದ ಟಿಎಸ್ ಸಿಂಗ್, ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ.
ಆಕಾಶದ ವ್ಯಾಪ್ತಿಗೆ ಯಾವುದೇ ಎಲ್ಲೆಗಳಿಲ್ಲ. ಆಸ್ಟ್ರೇಲಿಯಾದಲ್ಲಿ ಸ್ಕೈ ಡೈವ್ ಮಾಡುವ ಅವಕಾಶ ಒದಗಿಬಂದಿತ್ತು. ಈ ಅಸಾಧಾರಣ ಸಾಹಸ ನನಗೆ ರೋಮಾಂಚನ ತಂದಿತ್ತು. ಸ್ಕೈಡೈವ್ ಆನಂದದಾಯಕ ಹಾಗೂ ಉತ್ಸಾಹಭರಿತ ಅನುಭವ ನೀಡಿತ್ತು ಎಂದು ಟಿಎಸ್ ಸಿಂಗ್ ಹೇಳಿಕೊಂಡಿದ್ದಾರೆ.
ಟಿಎಸ್ ಸಿಂಗ್ ಈ ಸಾಹಸವನ್ನು ಚತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೊಂಡಾಡಿದ್ದಾರೆ. ಮಹಾರಾಜ್ ಸಾಬ್, ಅತ್ಯುತ್ತಮ ಮೈಲಿಗಲ್ಲು ಸಾಧಿಸಿದ್ದೀರಿ. ನಿಮ್ಮ ಉತ್ಸಾಹ ಯಾವತ್ತೂ ಹೀಗೆ ಎತ್ತರದಲ್ಲಿರಲಿ ಎಂದು ಟ್ವೀಟ್ ಮಾಡಿದ್ದಾರೆ. ಹಲವು ನಾಯಕರು, ಬೆಂಬಲಿಗರು, ಅಭಿಮಾನಿಗಳು ಟಿಎಸ್ ಸಿಂಗ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಉತ್ಸಾಹ ಚಿಲುಮೆಯಾಗಿ, ತೋರಿದ ಧೈರ್ಯ ಸಾಹಸ ಎಲ್ಲರಿಗೂ ಮಾದರಿ ಎಂದಿದ್ದಾರೆ.
14 ಸಾವಿರ ಅಡಿ ಎತ್ತರ ಆಕಾಶದಲ್ಲಿ ಹಾರುತ್ತಲೇ ಪಿಜ್ಜಾ ತಿಂದ ಗೆಳೆಯರು!
ಟಿಎಸ್ ಸಿಂಗ್ ಶ್ರೀಮಂತ ಹಾಗೂ ಮಹಾರಾಜ ಕುಟುಂಬದವರಾಗಿದ್ದಾರೆ. ಹೀಗಾಗಿ ಇವರನ್ನು ಮಹಾರಾಜ ಎಂದೇ ಕರೆಯಲಾಗತ್ತದೆ. ಅಂಬಿಕಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚತ್ತೀಸಿಘಡದ ಶ್ರೀಮಂತ ಶಾಸಕ ಅನ್ನೋ ಹೆಗ್ಗಳಿಕಗೂ ಪಾತ್ರರಾಗಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಮಣಿಸಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣಕರ್ತರಾಗಿದ್ದಾರೆ.