Asianet Suvarna News Asianet Suvarna News

ವಿಮಾನದಿಂದ ಜಿಗಿದು ಹಾರುತ್ತಲೇ ಭೂಮಿಗೆ ಲ್ಯಾಂಡ್ ಆದ 103 ವರ್ಷದ ಅಜ್ಜಿ..!

 103ನೇ ವರ್ಷದಲ್ಲಿ ಅಜ್ಜಿಯೊಬ್ಬರು ಸ್ಕೈ ಡೈವ್ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 
 

Oldest Skydiver 103 Year Old Granny Completes Parachute Jump akb
Author
Bangalore, First Published Jun 2, 2022, 6:05 PM IST

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಸಾಬೀತುಪಡಿಸುವ ಹಲವು ನಿದರ್ಶನಗಳು ಈಗಾಗಲೇ ನಡೆದಿವೆ. ಇದಕ್ಕೀಗ ಮತ್ತೊಂದು ಸೇರ್ಪಡೆ  103 ವರ್ಷದ ಅಜ್ಜಿ. ಹೌದು 103 ಅಜ್ಜಿಯೊಬ್ಬರು ಪ್ಯಾರಾಚೂಟ್‌ನಿಂದ ಜಿಗಿಯುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಅಲ್ಲದೇ ಈ ರೀತಿ ಮಾಡಿದ ಜಗತ್ತಿನ ಅತ್ಯಂತ ಹಿರಿಯರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸ್ವೀಡನ್‌ನ 103 ವರ್ಷದ ರೂಟ್ ಲಾರ್ಸನ್ ಎಂಬುವವರೇ ಈ ಸಾಧನೆ ಮಾಡಿದವರು. ಅವರು ಸ್ಕೈ ಡೈವ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಅಜ್ಜಿಯ ಗಟ್ಟಿತನಕ್ಕೆ ಶಹಭಾಷ್ ಅನ್ನುತ್ತಿದ್ದಾರೆ. 

Follow Us:
Download App:
  • android
  • ios