ಕಾನ್ಕೇರ್ ಸಮಾವೇಶಕ್ಕೆ ಮೋದಿ ಚಿತ್ರ ಬಿಡಿಸಿ ಆಗಮಿಸಿದ ಬಾಲಕಿಯನ್ನು ಗುರುತಿಸಿದ ಮೋದಿ, ಆಕೆಯಿಂದ ಚಿತ್ರ ಪಡೆದಿದ್ದಾರೆ. ಚಿತ್ರದ ಕೆಲಭಾಗದಲ್ಲಿ ಹೆಸರು ಬರೆಯಲು ಸೂಚಿಸಿದ ಬಾಲಕಿಗೆ ಮೋದಿ ಭರ್ಜರಿ ಗಿಫ್ಟ್ ಘೋಷಿಸಿದ್ದಾರೆ.  

ಕಾನ್ಕೇರ್(ನ.02) ಪಂಚ ರಾಜ್ಯಗಳಾ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಪ್ರಧಾನಿ ಮೋದಿ ದಿನಕ್ಕೊಂದು ರಾಜ್ಯದಲ್ಲಿ ಸಮಾವೇಶ ನಡೆಸುತ್ತಿದ್ದಾರೆ. ಇಂದು ಚತ್ತೀಸಘಡದ ಕಾನ್ಕೇರ್‌ನಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಭಾಷಣದ ವೇಳೆ ಬಾಲಕಿಯೊಬ್ಬಳಿಗೆ ಭರ್ಜರಿ ಉಡುಗೊರೆ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಚಿತ್ರಬಿಡಿಸಿ ಸಮಾವೇಶಕ್ಕೆ ಆಗಮಿಸಿದ ಬಾಲಕಿಯನ್ನು ಗುರುತಿಸಿದ ಮೋದಿ, ಆಕೆಯಿಂದ ಚಿತ್ರವನ್ನು ಪಡೆದಿದ್ದಾರೆ. ಚಿತ್ರದ ಕೆಳಗೆ ಬಾಲಕಿಗೆ ಹೆಸರು ಬರೆದು ಚಿತ್ರ ನೀಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ಅಭಿನಂದನಾ ಪತ್ರ ಬರೆಯುವುದಾಗಿ ಮೋದಿ ಹೇಳಿದ್ದಾರೆ.

ಕಾನ್ಕೇರ್ ಸಮಾವೇಶದಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಈ ಸಮಾವೇಶಕ್ಕೆ ಬಾಲಕಿಯೊಬ್ಬಳು ಮೋದಿ ಚಿತ್ರ ಬಿಡಿಸಿ ಆಗಮಿಸಿದ್ದರು. ಸಮಾವೇಶದ ಉದ್ದಕ್ಕೂ ಬಾಲಕಿ ಮೋದಿ ಚಿತ್ರವನ್ನು ಎರಡು ಕೈಗಳಿಂದ ಎತ್ತಿ ಹಿಡಿದು ನಿಂತಿದ್ದಳು. ಆರಂಭದಲ್ಲಿ ಹಲವು ನಾಯಕರು ಭಾಷಣ ಮಾಡಿದ್ದರು. ಈ ವೇಳೆ ಬಾಲಕಿ ಮೋದಿ ಚಿತ್ರ ಹಿಡಿದು ನಿಂತಿದ್ದಳು. ಇದನ್ನು ಗಮನಿಸಿದ ಮೋದಿ ಭಾಷಣದ ಆರಂಭದಲ್ಲೇ ಬಾಲಕಿ ಕುರಿತು ಮಾತನಾಡಿದರು.

ಆಯೋಧ್ಯೆ ರಾಮ ಮಂದಿರದಲ್ಲಿ ಮುಂದಿನ ರಾಮನವಮಿ, ದೇಶದ ಜನತೆಗೆ ಮೋದಿ ಸಂದೇಶ!

ಮಗಳೇ ನಾನು ನಿನ್ನ ಕಲೆಯನ್ನು ಗುರುತಿಸಿದ್ದೇನೆ. ಇಂತಹ ಉತ್ತಮ ಹಾಗೂ ಸುಂದರ ಚಿತ್ರ ಬಿಡಿಸಿ ಈ ಸಮಾವೇಶಕ್ಕೆ ಆಗಮಿಸಿದ್ದಿ. ನಾನು ನಿನಗೆ ಆಶೀರ್ವಾದ ಮಾಡುತ್ತಿದ್ದೇನೆ. ಮಗಳೇ ನೀನು ಏಷ್ಟು ಸಮಯದಿಂದ ಈ ರೀತಿ ನಿಂತುಕೊಂಡೇ ಇದ್ದಿ. ಕೈಗಳು ಸೋತು ಹೋಗಲಿದೆ. ನನ್ನ ಪೊಲೀಸ್ ಮಿತ್ರರೆ, ನನಗೆ ಬಾಲಕಿ ಬಿಡಿಸಿರುವ ಚಿತ್ರವನ್ನು ಕಳುಹಿಸಿ. ಈ ಚಿತ್ರದಲ್ಲಿ ಹೆಸರು ವಿಳಾಸ ಬರೆದು ಕಳುಹಿಸಿ. ಶೀಘ್ರದಲ್ಲೇ ನಾನು ಅಭಿನಂದನಾ ಪತ್ರ ಬರೆಯುತ್ತೇನೆ ಎಂದು ಮೋದಿ ಹೇಳಿದ್ದಾರೆ.

Scroll to load tweet…

ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಮೋದಿ, ಅಭಿವೃದ್ಧಿ ಹಾಗೂ ಕಾಂಗ್ರೆಸ್ ಎರಡೂ ಜೊತೆಜೊತೆಯಾಗಿ ಮುನ್ನಡೆಯಲ್ಲ. ಇಲ್ಲಿನ ಭೂಪೇಶ್ ಭಾಘೆಲ್ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಡೆ ಗಮನಹರಿಸುವ ಬದಲು ರಾಜಕೀಯದಲ್ಲೇ ಮುಳುಗಿದೆ ಎಂದು ಮೋದಿ ಆರೋಪಿಸಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ. 2013-14ರಿಂದ ಕಾಂಗ್ರೆಸ್ ನನ್ನ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಒಬಿಸಿ ಸಮುದಾಯದಿಂದ ಬಂದಿದ್ದೇನೆ. ಆದರೆ ಕಾಂಗ್ರೆಸ್ ಹಿಂದುಳಿದ ವರ್ಗದ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದರು.

ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನೆಗೆ ಜಮೀಯತ ಉಲೇಮಾ ಮುಸ್ಲಿಂ ಸಂಘಟನೆ ವಿರೋಧ!