ಐಪಿಎಸ್‌ ಅಧಿಕಾರಿ ರವಿ ಸಿನ್ಹಾ, ದೇಶದ ಅತ್ಯುನ್ನತ ಸ್ಪೈ ಏಜೆನ್ಸಿ 'RAW' ಮುಂದಿನ ಚೀಫ್‌!

ದೇಶದ ಅತ್ಯುನ್ನತ ಸ್ಫೈ ಏಜೆನ್ಸಿ, ವಿದೇಶಗಳಲ್ಲಿಯೇ ತನ್ನ ಕಾರ್ಯಾಚರಣೆಗಳನ್ನು ನಡೆಸುವ ರೀಸರ್ಚ್‌ ಆಂಡ್‌ ಅನಾಲಿಸಿಸ್‌ ವಿಂಗ್‌ (ರಾ) ಮುಂದಿನ ಮುಖ್ಯಸ್ಥರನ್ನಾಗಿ ಛತ್ತೀಸ್‌ಗಢ ಕೆಡರ್‌ ಐಪಿಎಸ್‌ ಅಧಿಕಾರಿ ರವಿ ಸಿನ್ಹಾ ಅವರನ್ನು ನೇಮಿಸಲಾಗಿದೆ. ಹಾಲಿ ಚೀಫ್‌ ಆಗಿರುವ ಸಮಂತ್‌ ಗೋಯೆಲ್‌ ಅವರ ಸ್ಥಾನವನ್ನು ರವಿ ಸಿನ್ಹಾ ತುಂಬಲಿದ್ದಾರೆ.

Chhattisgarh cadre IPS officer Ravi Sinha appointed new RAW chief san

ನವದೆಹಲಿ (ಜೂ.19): ನೇರವಾಗಿ ಪ್ರಧಾನಮಂತ್ರಿಗೆ ರಿಪೋರ್ಟ್‌ ಮಾಡಿಕೊಳ್ಳುವ ಹಾಗೂ ದೇಶದ ಅತ್ಯುನ್ನತ ಸ್ಫೈ ಏಜೆನ್ಸಿಗಳಲ್ಲಿ ಒಂದಾದ ರಿಸರ್ಚ್‌ ಆಂಡ್‌ ಅನಾಲಿಸಿಸ್‌ ವಿಂಗ್‌ (ರಾ) ಮುಂದಿನ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ಅವರನ್ನು ಸೋಮವಾರ ನೇಂದ್ರ ಸರ್ಕಾರ ನೇಮಿಸಿದೆ. 1988ರ ಇಂಡಿಯನ್‌ ಪೊಲೀಸ್‌ ಸೇವೆಯ ಅಧಿಕಾರಿ ಛತ್ತೀಸ್‌ಗಢ ಕಡೆದರ್‌ ಆಗಿದ್ದಯ, ಪ್ರಸ್ತುತ ಕ್ಯಾಬಿನೆಟ್‌ ಕಾರ್ಯಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಗೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಕಾರ್ಯದರ್ಶಿಯಾಗಿ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಲಿ ರಾ ಚೀಫ್‌ ಆಗಿರುವ ಸಮಂತ್‌ ಗೋಯೆಲ್‌ ಅವರ ಅಧಿಕಾರದ ಅವಧಿ ಜೂನ್‌ 30 ರಂದು ಮುಕ್ತಾಯವಾಗಲಿದೆ. ಪ್ರಧಾನಿ ಕಾರ್ಯಾಲಯದ ಆಪರೇಷನ್‌ ಮ್ಯಾನ್‌ ಎಂದೇ ಗುರುತಿಸಿಕೊಂಡಿರುವ ರವಿ ಸಿನ್ಹಾ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.

ಹಾಲಿ ರಾ ಚೀಫ್‌ ಆಗಿರುವ ಸಮಂತ್‌ ಗೋಯೆಲ್‌, ಪಂಜಾಬ್‌ ಕೆಡರ್‌ ಅಧಿಕಾರಿಯಾಗಿದ್ದರು. ಸಮಂತ್‌ ಗೋಯೆಲ್‌ ಅಧಿಕಾರವಧಿಯಲ್ಲಿ ರಾ ದೊಡ್ಡ ಮಟ್ಟದ ಯಶಸ್ಸುಗಳನ್ನು ಸಾಧನೆ ಮಾಡಿತ್ತು. ಅವರ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಬಾಲಾಕೋಟ್‌ ಏರ್‌ಸ್ಟ್ರೈಕ್‌ ಹಾಗೂ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದುಹಾಕುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಿತ್ತು.

ಬಿಹಾರದ ಭೋಜ್‌ಪುರ ಜಿಲ್ಲೆಯ ರವಿ ಸಿನ್ಹಾ: ರವಿ ಸಿನ್ಹಾ ಬಿಹಾರದ ಭೋಜ್‌ಪುರ ಜಿಲ್ಲೆಯವರು. ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಓದಿರುವ ರವಿ ಸಿನ್ಹಾ, 1988ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಭಾರತೀಯ ಪೊಲೀಸ್‌ ಸೇವೆಯ ಅಧಿಕಾರಿಯಾಗಿ ಮಧ್ಯಪ್ರದೇಶ ಕೆಡರ್‌ಅನ್ನು ಪಡೆದುಕೊಂಡಿದ್ದರು. ಆದರೆ,  2000 ರಲ್ಲಿ, ಆಗಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳನ್ನು ವರ್ಗೀಕರಿಸಿ ಛತ್ತೀಸ್‌ಗಢ ರಾಜ್ಯವನ್ನು ರಚಿಸಿದಾಗ, ಸಿನ್ಹಾ ತಾಂತ್ರಿಕವಾಗಿ ಛತ್ತೀಸ್‌ಗಢ ಕೇಡರ್‌ಗೆ ಸೇರ್ಪಡೆಯಾಗಿದ್ದರು.

ಸಿಂಗಾಪುರದ ಅಜ್ಞಾತ ಸ್ಥಳದಲ್ಲಿ ವಿಶ್ವದ SPY ಚೀಫ್‌ಗಳ ಶೃಂಗಸಭೆ, ಭಾರತದ ರಾ ಚೀಫ್‌ ಭಾಗಿ!

ಐಪಿಎಸ್ ರವಿ ಸಿನ್ಹಾ ಅವರು ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಪ್ರಧಾನ ಸಿಬ್ಬಂದಿ ಅಧಿಕಾರಿ (ಪಿಎಸ್‌ಒ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯು ವಿಶೇಷ ಕಾರ್ಯದರ್ಶಿ ಶ್ರೇಣಿಯದು. ಮುಂದಿನ ಪೋಸ್ಟಿಂಗ್‌ ಆಗಿ ರಾ ಚೀಫ್‌ ಅಥವಾ ರಾ ಕಾರ್ಯದರ್ಶಿ ಹುದ್ದೆಗೆ ಏರಲಿದ್ದಾರೆ.  ಪ್ರಮುಖವಾಗಿ ವಿದೇಶಿ ಗುಪ್ತಚರವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ರಾ ಹೊಂದಿದೆ. ಅದಕ್ಕಾಗಿಯೇ ಇದನ್ನು ವಿಶೇಷ ಸ್ಪೈ ಏಜೆನ್ಸಿ ಎನ್ನಲಾಗುತ್ತದೆ. ಭಾರತದ ಮೇಲೆ ಪರಿಣಾಮ ಬೀರಬಹುದಾದ ರಾಜಕೀಯ, ಉಗ್ರ ಕೃತ್ಯಗಳ ಮೇಲೆ ರಾ ಸದಾಕಾಲ ಕಣ್ಣಿಟ್ಟಿರುತ್ತದೆ. ಅದರೊಂದಿಗೆ  ರಾಷ್ಟ್ರೀಯ ಹಿತಾಸಕ್ತಿಗಾಗಿ ರಾ ಕಾರ್ಯಾಚರಣೆಗಳನ್ನು ನಡೆಸುತ್ತಿರುತ್ತದೆ. ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ರಾ ರಚನೆಯಾಯಿತು. ಆರಂಭದಲ್ಲಿ ಪಾಕಿಸ್ತಾನ ಹಾಗೂ ಚೀನಾ ದೇಶಗಳ ಉಪಟಳಗಳನ್ನು ಕಣ್ಣಿಡುವ ಉದ್ದೇಶಕ್ಕಾಗಿ ರಚನೆಯಾಗಿತ್ತು.

ದಿವಾಳಿ ಪಾಕ್‌ಗೆ ಮೋದಿ ಆರ್ಥಿಕ ಸಹಾಯ ಮಾಡ್ಬಹುದು: ‘ರಾ’ ಮಾಜಿ ಮುಖ್ಯಸ್ಥ ದುಲತ್‌ ವಿಶ್ವಾಸ

1971ರಲ್ಲಿ ಬಾಂಗ್ಲಾದೇಶ ವಿಮೋಚನೆ ಹಾಗೂ ಅಫ್ಘಾನಿಸ್ತಾನದಲ್ಲಿ ಭಾರತದ ಪ್ರಾಮುಖ್ಯತೆ ಹೆಚ್ಚಾಗುವ ನಿಟ್ಟಿನಲ್ಲಿ ರಾ ದೊಡ್ಡ ಮಟ್ಟದ ಕೆಲಸ ಮಾಡಿದೆ. ರಾಮೇಶ್ವರ್ ನಾಮ್ ಕಾವೊ ಇದರ ಮೊದಲ ಮುಖ್ಯಸ್ಥರಾಗಿದ್ದರು. ನೇರವಾಗಿ ಪ್ರಧಾನಮಂತ್ರಿಗೆ ರಿಪೋರ್ಟಿಂಗ್‌ ಮಾಡಿಕೊಳ್ಳುವ ಕೆಲವೇ ಕೆಲವು ಏಜೆನ್ಸಿಗಳಲ್ಲಿ ರಾ ಕೂಡ ಪ್ರಮುಖವಾದದ್ದು. 

Latest Videos
Follow Us:
Download App:
  • android
  • ios