ಸಿಂಗಾಪುರದ ಅಜ್ಞಾತ ಸ್ಥಳದಲ್ಲಿ ವಿಶ್ವದ SPY ಚೀಫ್‌ಗಳ ಶೃಂಗಸಭೆ, ಭಾರತದ ರಾ ಚೀಫ್ ಭಾಗಿ!
ಭಾರತದ ಸಾಗರೋತ್ತರ ಗುಪ್ತಚರ ಸಂಗ್ರಹಣೆ ಸಂಸ್ಥೆ, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮುಖ್ಯಸ್ಥ(ರಾ) ಸಮಂತ್ ಗೋಯೆಲ್ ಸಹ ಭಾಗವಹಿಸಿದ್ದರು.
ಸಿಂಗಾಪುರ (ಜೂ.5): ವಿಶ್ವದ ಯಾವುದೇ ದೇಶದ ಆಡಳಿತದಲ್ಲಿ ಬದಲಾವಣೆ ತರಬಲ್ಲ ಶಕ್ತಿ ಹೊಂದಿರುವ ಸ್ಪೈ ಚೀಫ್‌ಗಳ ಶೃಂಗಸಭೆಗೆ ಸಿಂಗಾಪುರ ಆತಿಥ್ಯ ವಹಿಸಿದೆ. ಈ ವಾರಾಂತ್ಯದಲ್ಲಿ ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ಡೈಲಾಗ್ ಭದ್ರತಾ ಸಭೆಯ ನಡುವೆ ವಿಶ್ವದ ಪ್ರಮುಖ ಗುಪ್ತಚರ ಸಂಸ್ಥೆಗಳ ಸುಮಾರು ಎರಡು ಡಜನ್‌ಗಳ ಹಿರಿಯ ಅಧಿಕಾರಿಗಳು ರಹಸ್ಯ ಸಭೆ ನಡೆಸಿದ್ದಾರೆ ಎಂದು ಐದು ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಸಭೆಗಳನ್ನು ಸಿಂಗಾಪುರ ಸರ್ಕಾರವು ಸಾಮಾನ್ಯವಾಗಿ ಆಯೋಜನೆ ಮಾಡುತ್ತದೆ. ಹಲವಾರು ವರ್ಷಗಳಿಂದ ಭದ್ರತಾ ಶೃಂಗಸಭೆಯ ಜೊತೆಯಲ್ಲಿಯೇ ಅಜ್ಞಾತ ಸ್ಥಳವೊಂದರಲ್ಲಿ ಗುಪ್ತಚರ ವಿಭಾಗದ ಅಧಿಕಾರಿಗಳ ಸಭೆಗಳನ್ನು ಕೂಡ ನಡೆಸಲಾಗುತ್ತಿತ್ತು. ಆದರೆ, ಹಿಂದೆ ಈ ಸಭೆಗಳು ನಡೆಯುವ ಬಗ್ಗೆ ವರದಿಗಳು ಆಗುತ್ತಿರಲಿಲ್ಲ. ಎರಡು ಪವರ್‌ಹೌಸ್ ದೇಶಗಳ ಉದ್ವಿಗ್ನತೆಯ ಹೊರತಾಗಿಯೂ, ಚೀನಾ ಹಾಗೂ ಅಮೆರಿಕ ದೇಶದ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಅಮೆರಿಕದ ಪರವಾಗಿ ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕ ಆವ್ರಿಲ್ ಹೈನ್ಸ್ ಅವರು ಭಾಗಿಯಾಗಿದ್ದರು. ವಿದೇಶದಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣಿಡುವ ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ (ರೀಸರ್ಚ್ ಆಂಡ್ ಎನಾಲಿಸಿಸ್ ವಿಂಗ್) ವಿಭಾಗದ ಮುಖ್ಯಸ್ಥ ಸಮಂತ್ ಗೋಯೆಲ್ ಕೂಡ ಭಾಗವಹಿಸಿದ್ದರು ಎಂದು ಭಾರತದ ಮೂಲಗಳು ತಿಳಿಸಿವೆ.
"ಅಂತರರಾಷ್ಟ್ರೀಯ ಶಾಡೋ ಅಜೆಂಡಾ ಭಾಗವಾಗಿ ಇದು ಅಂತಾರಾಷ್ಟ್ರೀಯ ವೇಳಾಪಟ್ಟಿಯಲ್ಲಿ ಪ್ರಮುಖ ಸಭೆ ಎನಿಸಿದೆ' ಎಂದು ಈ ಸಭೆಯ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ ದೇಶಗಳನ್ನು ಗಮನಿಸಿದರೆ, ಇದು ಯಾವುದೇ ವಾಣಿಜ್ಯ ಉತ್ಸವದ ಭೇಟಿಯಲ್ಲ. ಬದಲಿಗೆ ಉದ್ದೇಶಗಳು ಮತ್ತು ತಳಹದಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಉತ್ತೇಜಿಸುವ ಮಾರ್ಗವಾಗಿದೆ ಎಂದು ಹೇಳಿದ್ದಾರೆ.ಗುಪ್ತಚರ ಸೇವೆಗಳಲ್ಲಿ ಅನ್‌ಸ್ಪೋಕನ್ ಕೋಡ್ ಇದೆ, ಔಪಚಾರಿಕ ಮತ್ತು ಮುಕ್ತ ರಾಜತಾಂತ್ರಿಕತೆ ಕಠಿಣವಾದಾಗ ಇಂಥ ಕೋಡ್‌ನಲ್ಲಿ ಮಾತನಾಡುತ್ತಾರೆ. ಇದು ಉದ್ವಿಗ್ನತೆಯ ಸಮಯದಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ ಮತ್ತು ಸಿಂಗಾಪುರದ ಈವೆಂಟ್ ಅದನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಸಭೆಯ ಬಗ್ಗೆ ಮಾಹಿತಿ ನೀಡಿರುವ ಈ ಐವರೂ ಅಧಿಕಾರಿಗಳು ವಿಷಯದ ಸೂಕ್ಮತೆ ಕಾರಣದಿಂದಾಗಿ ತಮ್ಮ ಗುರುತು ಹೇಳಲು ನಿರಾಕರಿಸಿದ್ದಾರೆ.
ಸಿಂಗಾಪುರದ ರಕ್ಷಣಾ ಸಚಿವಾಲಯದ ವಕ್ತಾರರು ಶಾಂಗ್ರಿ-ಲಾ ಸಂವಾದದಲ್ಲಿ ಭಾಗವಹಿಸುವ ಏಳೆ "ಗುಪ್ತಚರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸೇರಿದಂತೆ ಭಾಗವಹಿಸುವವರು ತಮ್ಮ ಸಹವರ್ತಿಗಳನ್ನು ಭೇಟಿ ಮಾಡಲು ಅವಕಾಶವನ್ನು ಪಡೆದುಕೊಳ್ಳುತ್ತಾರೆ" ಎಂದು ಹೇಳಿದರು. ಸಿಂಗಾಪುರದಲ್ಲಿರುವ ಯುಎಸ್ ರಾಯಭಾರ ಕಚೇರಿಯು ಭೇಟಿಯ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಿದೆ ಭಾರತ ಹಾಗೂ ಚೀನಾ ಸರ್ಕಾರಗಳು ಕೂಡ ಈ ಬಗ್ಗೆ ಯಾವುದೇ ವಿವರ ನೀಡಿಲ್ಲ.
ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವ್ಯಾಪಕ ಶ್ರೇಣಿಯ ಗುಪ್ತಚರವನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಫೈವ್ ಐಸ್ ನೆಟ್‌ವರ್ಕ್ ಎಂದು ಕರೆಯಲ್ಪಡುತ್ತವೆ ಮತ್ತು ಅವರ ಗುಪ್ತಚರ ಅಧಿಕಾರಿಗಳು ಆಗಾಗ್ಗೆ ಭೇಟಿಯಾಗುತ್ತಾರೆ. ಗುಪ್ತಚರ ಸಮುದಾಯದ ದೊಡ್ಡ ಸಭೆಗಳು ಬಹಳ ಅಪರೂಪವಾಗಿ ನಡೆಯೋದು ಮಾತ್ರವಲ್ಲ ಎಂದಿಗೂ ಈ ಕುರಿತಾದ ಸುದ್ದಿಗಳು ಪ್ರಸಾರವಾಗೋದಿಲ್ಲ.
ಇಸ್ರೇಲ್ ತಂತ್ರಾಂಶ ಬಳಸಿ ಮೋದಿ ಸರ್ಕಾರದಿಂದ ಬೇಹುಗಾರಿಕೆ: ಕಾಂಗ್ರೆಸ್
ರಷ್ಯಾದ ಯಾವುದೇ ಪ್ರತಿನಿಧಿ ಹಾಜರಿರಲಿಲ್ಲ ಎಂದು ಮೂಲವೊಂದು ತಿಳಿಸಿದೆ. ಉಕ್ರೇನ್‌ನ ಉಪ ರಕ್ಷಣಾ ಸಚಿವ ವೊಲೊಡಿಮರ್ ವಿ. ಹ್ಯಾವ್ರಿಲೋವ್ ಅವರು ಶಾಂಗ್ರಿ-ಲಾ ಸಂವಾದದಲ್ಲಿದ್ದರು ಆದರೆ ಅವರು ಗುಪ್ತಚರ ಸಭೆಯಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದರು.
ಸ್ಪೈ ಬಲೂನ್ ಆಯ್ತು; ಈಗ 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಮತ್ತೊಂದು ವಸ್ತು ಹೊಡೆದುರುಳಿಸಿದ ಅಮೆರಿಕ