ರಾಯಪುರ(ಮೇ 13) ಸಾವಿತ್ರಿಯ ಕತೆಯನ್ನು ಬಹಳ ಜನ ಕೇಳಿಯೇ ಇರುತ್ತೀರಿ. ಇದು ಸಹ ಅಂಥದ್ದೇ ಒಂದು ಉದಾಹರಣೆ.  ಮಾವೋಗಳ ಕೈಗೆ ಸಿಕ್ಕಿದ್ದ ಪೊಲೀಸ್ ಅಧಿಕಾರಿಯನ್ನು ಆತನ ಹೆಂಡತಿ ಮತ್ತು ಸ್ಥಳೀಯರು ಸೇರಿ ರಕ್ಷಣೆ ಮಾಡಿದ್ದಾರೆ.   ಛತ್ತೀಸ್ ಘಡದ ಬಿಜಾಪುರ್ ಜಿಲ್ಲೆಯ ಘಟನೆ ಇದು.  ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದ ಜನ್ ಅದಾಲತ್ ಕಾರಣಕ್ಕೆ ಈ ಘಟನೆಯಾಗಿದೆ. 

48 ವರ್ಷದ ಸಂತೋಷ್ ಕಟ್ಟಮ್ ಪೊಲೀಸ್ ಇಲಾಖೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದವರು.  ಇವರನ್ನು ಅಪಹರಿಸಿತ ಮಾವೋಗಳು ದಟ್ಟ ಅರಣ್ಯದೊಳಕ್ಕೆ ಎಳೆದು ಒಯ್ದಿದ್ದರು. ಅಲ್ಲದೇ ಈ ಪೊಲೀಸ್ ಸಿಬ್ಬಂದಿಗೆ ಅಂತ್ಯ ಎಂದು ಸಾರಿದ್ದರು.

ಕೇಂದ್ರದ ಪ್ಯಾಕೇಜ್ ನಲ್ಲಿ ಯಾರ ಪಾಲು ಎಷ್ಟು?

ಮೇ 4 ರಂದೇ ಪೊಲೀಸ್ ಅಧಿಕಾರಿಯ ಅಪಹಣವಾಗಿತ್ತು. ಆದರೆ ಇತ್ತ ಗಂಡನ ಜೀವ ಉಳಿಸಿಕೊಳ್ಳಲು ಪಣ ತೊಟ್ಟ ಹೆಂಡತಿ ಹಳ್ಳಿಗರೊಂದಿಗೆ ಅರಣ್ಯದ ಒಳಕ್ಕೆ ನುಗ್ಗಿದ್ದರು. 

ಇದಾದ ಮೇಲೆ  ಜನ್ ಅದಾಲತ್ ನಲ್ಲಿ ಈತ ತಮ್ಮ ಪರವಾಗಿ ನಿಲ್ಲಬೇಕು ಎಂಬ ಬೇಡಿಕೆಯನ್ನು ಮಹಿಳೆ ಬಳಿ ಇಟ್ಟರು. ಮಹಿಳೆ ಸುನೀತಾ ನನ್ನ ಗಂಡ ಪೊಲೀಸ್ ಕೆಲಸವನ್ನು ತ್ಯಜಿಸುತ್ತಾರೆ. ಅವರ ಪ್ರಾಣಕ್ಕೆ ಏನು ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು. 

ಇದಾದ  ಮೇಲೆ  ಮಹಿಳೆ ಸ್ಥಳೀಯ ಮಾಧ್ಯಮದ ಮುಂದೆಯೂ ಬಂದಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ಹೋಗಿದೆ.  ಸದ್ಯ ಹೆಂಡತಿ ಮತ್ತು ಸ್ಥಳೀಯರು ಹಾಗೂ ಪೊಲೀಸರ ನೆರವಿನಲ್ಲಿ ಅಧಿಕಾರಿಯನ್ನು ರಕ್ಷಣೆ ಮಾಡಲಾಗಿದೆ.