Asianet Suvarna News Asianet Suvarna News

ಪೌರತ್ವ ತಿದ್ದುಪಡಿ ಕಾಯ್ದೆ, ಪ್ರತಿಭಟನೆ ಎರಡಕ್ಕೂ ಚೇತನ್ ಭಗತ್ ವಿರೋಧ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಚೇತನ್ ಭಗತ್| ಯುವ ಸಮುದಾಯದ ತಾಳ್ಮೆ ಪರೀಕ್ಷಿಸಬೇಡಿ ಎಂದ ಲೇಖಕ| ಸರಣಿ ಟ್ವಿಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಚೇತನ್ ಭಗತ್| 'ಇಂಟರ್ನೆಟ್ ಸ್ಥಗಿತಗೊಳಿಸುವುದರಿಂದ ಯುವಕ ಆಕ್ರೋಶ ತಣಿಸಲಾಗುವುದಿಲ್ಲ| ಅರ್ಥ ವ್ಯವಸ್ಥೆಯ ಬಗ್ಗೆ ಚಿಂತಿಸುವಂತೆ ಕೇಂದ್ರ ಸರ್ಕಾರಕ್ಕೆ ಚೇತನ್ ಭಗತ್ ಸಲಹೆ|

Chetan Bhagat Speaks Against CAA Says Do Not Test Youth Patience
Author
Bengaluru, First Published Dec 16, 2019, 5:39 PM IST

ನವದೆಹಲಿ(ಡಿ.16): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಸಾಲಿಗೆ ಇದೀಗ ಪ್ರಖ್ಯಾತ ಲೇಖಕ ಚೇತನ್ ಭಗತ್ ಸೇರಿಕೊಂಡಿದ್ದಾರೆ. ದೇಶದ ಯುವ ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ಚೇತನ್ ಭಗತ್, ಪೌರತ್ವ ತಿದ್ದುಪಡಿ ಕಾಯ್ದೆ ದೇಶಕ್ಕೆ ಮಾರಕ ಎಂದು ಹರಿಹಾಯ್ದಿದ್ದಾರೆ. ಅಲ್ಲದೇ ಕಾಯ್ದೆ ಕುರಿತು ಜನಜಾಗೃತಿಯ ಅಗತ್ಯವಿದ್ದು, ಈ ಕುರಿತು ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ.

ಕೋಲ್ಕತ್ತಾ ಬೀದಿಯಲ್ಲಿ ಸಾವಿರಾರು ಜನರ ಮಧ್ಯೆ ದೀದಿ: CAA ವಿರುದ್ಧ ಪ್ರತಿಭಟನೆ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ಉಲ್ಲೇಖಿಸಿರುವ ಚೇತನ್ ಭಗತ್, ಇಂಟರ್ನೆಟ್ ಸ್ಥಗಿತಗೊಳಿಸುವುದರಿಂದ ಯುವ ಸಮುದಾಯದ ಆಕ್ರೋಶ ತಣಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.

CAB ವಿರೋಧಿಸಿ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ!

ದೇಶದ ಅರ್ಥ ವ್ಯವಸ್ಥೆ ಕುಸಿಯುತ್ತಿದ್ದು, ಇಂತಹ ಹಿಂಸಾತ್ಮಕ ಪ್ರತಿಭಟನೆಗಳಿಂದ ದೇಶದ ಆರ್ಥಿಕ ಸ್ಥಿತಿಗತಿ ಮತ್ತಷ್ಟಯ ಹದಗೆಡಲಿದೆ ಎಂದು ಚೇತನ್ ಆತಂಕ ವ್ಯಕ್ತಪಡಿಸಿದ್ದಾರೆ.

CAB ಪ್ರತಿಭಟನೆಗೆ ಕಾಂಗ್ರೆಸ್ ಕಾರಣ: ಮೋದಿ ಆರೋಪ!

ಇದೇ ವೇಳೆ ಜಾಮಿಯಾ ಮಿಲ್ಲಿಯಾ ವಿವಿ ಹಿಂಸಾಚಾರವನ್ನು ಖಂಡಿಸಿರುವ ಚೇತನ್ ಭಗತ್, ಹಿಂಸೆಯಿಂದ ಯಾವುದೇ ಸಮಸ್ಯೆಗೆ ಪರಿಹಾರ ಇದುವರೆಗೂ ಕಂಡುಹಿಡಿಯಲಾಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Follow Us:
Download App:
  • android
  • ios