ವರ್ಷಕ್ಕೆ ಒಬ್ಬರು ಪ್ರಧಾನಿ ಬೇಕಾ?: ಮತದಾರರಿಗೆ ಮೋದಿ ಪ್ರಶ್ನೆ
ಇಂಡಿಯಾ ಮಹಾಮೈತ್ರಿ ಕೂಟ ತಮ್ಮ ನಾಯಕತ್ವ ಸಮಸ್ಯೆ ಪರಿಹರಿಸಲು ಒಂದು ವರ್ಷ, ಒಬ್ಬ ಪ್ರಧಾನಿ ಎನ್ನುವ ಸೂತ್ರ ಬಳಸುವುದಕ್ಕೆ ಮುಂದಾಗಿದೆ: ಪ್ರಧಾನಿ ನರೇಂದ್ರ ಮೋದಿ
ಹರ್ದಾ(ಮಧ್ಯಪ್ರದೇಶ)(ಏ.25): ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಣೆ ಆಗದ್ದನ್ನು ಹಾಗೂ ನಾಯಕರ ನಡುವೆ ಕಚ್ಚಾಟ ಇರುವುದನ್ನು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವರ್ಷಕ್ಕೆ ಒಬ್ಬರು ಪ್ರಧಾನಿ ಬೇಕಾ?’ ಎಂದು ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಹರ್ದಾದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ಇಂಡಿಯಾ ಮಹಾಮೈತ್ರಿ ಕೂಟ ತಮ್ಮ ನಾಯಕತ್ವ ಸಮಸ್ಯೆ ಪರಿಹರಿಸಲು ಒಂದು ವರ್ಷ, ಒಬ್ಬ ಪ್ರಧಾನಿ ಎನ್ನುವ ಸೂತ್ರ ಬಳಸುವುದಕ್ಕೆ ಮುಂದಾಗಿದೆ.
ಜಾತಿ, ಆರ್ಥಿಕ ಗಣತಿ ತಡೆಯಲು ಯಾವ ಶಕ್ತಿಗಳಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿ
ಅಂದರೆ 5 ವರ್ಷಕ್ಕೆ ಐವರು ಪ್ರಧಾನಿ. ಅವರು ಪ್ರಧಾನಿ ಹುದ್ದೆಯ ಹರಾಜಿನಲ್ಲಿ ನಿರತರಾಗಿದ್ದಾರೆ. ಇದು ವಿಪಕ್ಷಗಳ ಅತ್ಯಂತ ಅಪಾಯಕಾರಿ ಆಟ. ನೀವು ಐದು ವರ್ಷಕ್ಕೆ ಐವರು ಪ್ರಧಾನಿಗಳನ್ನು ನೋಡಲು ಸಿದ್ಧರಿದ್ದೀರಾ..?’ ಎಂದು ಪ್ರಶ್ನಿಸಿದರು.