ಮೋದಿ ವಿರುದ್ಧ ಪ್ರಚಾರಕ್ಕೆ ಬಂದ ರೈತ ಸಂಘದ ಕಾರ್ಯಕರ್ತರ ಮೇಲೆ ಮುಗಿಬಿದ್ದ ಬಿಜೆಪಿಗರು!

ಎನ್‌ಡಿಎ ವಿರುದ್ಧ ಪ್ರಚಾರ ನಡೆಸಲು ಬಂದಿದ್ದ ರೈತ ಸಂಘದ ಕಾರ್ಯಕರ್ತರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಘಟನೆ ಮೊನ್ನೆ ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ ನಡೆದಿತ್ತು. ಇದೀಗ ಅಂತಹದ್ದೇ ಘಟನೆ ಮತ್ತೆ ನಡೆದಿದೆ. ಎನ್‌ಡಿಎ ವಿರುದ್ಧ ಪ್ರಚಾರಕ್ಕೆ ಬಂದಿದ್ದ ರಾಜ್ಯ ರೈತ ಸಂಘದ  ಅಧ್ಯಕ್ಷ ಬಡಗಲಪುರ ನಾಗೇಂದ್ರರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

Lok sabha polls farmer union workers clash with BJP workers at chamarajanagar rav

ಚಾಮರಾಜನಗರ(ಏ.25): ಎನ್‌ಡಿಎ ವಿರುದ್ಧ ಪ್ರಚಾರ ನಡೆಸಲು ಬಂದಿದ್ದ ರೈತ ಸಂಘದ ಕಾರ್ಯಕರ್ತರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಘಟನೆ ಮೊನ್ನೆ ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ ನಡೆದಿತ್ತು. ಇದೀಗ ಅಂತಹದ್ದೇ ಘಟನೆ ಮತ್ತೆ ನಡೆದಿದೆ. ಎನ್‌ಡಿಎ ವಿರುದ್ಧ ಪ್ರಚಾರಕ್ಕೆ ಬಂದಿದ್ದ ರಾಜ್ಯ ರೈತ ಸಂಘದ  ಅಧ್ಯಕ್ಷ ಬಡಗಲಪುರ ನಾಗೇಂದ್ರರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬಿಜೆಪಿ, ಮೋದಿ ವಿರುದ್ಧ ಪ್ರಚಾರ ನಡೆಸುತ್ತಿರುವ ರೈತ ಸಂಘದ ಕಾರ್ಯಕರ್ತರು. ಯಾವುದೇ ಅನುಮತಿ ಇಲ್ಲದೆ ಗುಂಪು ಕಟ್ಟಿಕೊಂಡು ಗ್ರಾಮಗಳಿಗೆ ತೆರಳಿ ಅಪಪ್ರಚಾರ. ಮೋದಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಓಟು ಹಾಕದಂತೆ ಮನವಿ ಮಾಡುತ್ತಿರುವ ಕಾರ್ಯಕರ್ತರು. ಮೋದಿ ವಿರುದ್ಧ ಪ್ರಚಾರ ನಡೆಸುತ್ತಿದ್ದ ರೈತ ಸಂಘದ ಕಾರ್ಯಕರ್ತರ ವಿರುದ್ಧ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಬಿಜೆಪಿ ವಿರುದ್ಧ ಪ್ರಚಾರಕ್ಕೆ ಬಂದಿದ್ದ ರೈತ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆ!

ನಗರದ ಜನನ ಮಂಟಪದ ಬಳಿ ಬಂದಿದ್ದ ರೈತ ಸಂಘದ ಕಾರ್ಯಕರ್ತರು. ಮೋದಿ ವಿರುದ್ಧ ಪ್ರಚಾರ ನಡೆಸುವ ವೇಳೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು. ಗುಂಪು ಕಟ್ಟಿಕೊಂಡು ಈ ರೀತಿ ಅಪಪ್ರಚಾರ ಮಾಡುವುದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟಿದ್ದು ಎಂದು ಆಕ್ರೋಶ. ಎರಡು ಕಡೆಯ ಮಾತಿನ ಚಕಮಕಿಯಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಸಿದ್ದಾರೆ.

ಸುಳ್ಳು ಹೇಳಿ ರೈತರಿಗೆ ಮೋಸ ಮಾಡಿದ ಬಿಜೆಪಿ ತಿರಸ್ಕರಿಸಿ: ದೇವನೂರು ಮಹದೇವ

ರೈತ ಸಂಘದೊಂದಿಗೆ ಸಾಹಿತಿ ದೇವನೂರು ಮಹದೇವ ಕೂಡ ಬೀದಿಗಿಳಿದಿದ್ದು. ಬಿಜೆಪಿಗೆ ಮತ ಹಾಕದಂತೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ರೈತ ಸಂಘದ ಕಾರ್ಯಕರ್ತರು ಕಾಂಗ್ರೆಸ್ ಚುನಾವಣೆ ಏಜೆಂಟರಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದ ಕಾರ್ಯಕರ್ತರು.

Latest Videos
Follow Us:
Download App:
  • android
  • ios